ಪಾಕಿಸ್ತಾನಕ್ಕೆ ತೊಡೆ ಕಟ್ಟಿ ಮುಗಿಸಿದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಗೆ ಮೋದಿ ಚಾಲನೆ! ಇದು 56 ಇಂಚಿನ ಎದೆಯ ತಾಕತ್ತು!
ದೆಹಲಿ: ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಪಾಕಿಸ್ತಾನದ ಉಪಟಳ ಕಡಿಮೆಯಾಗಿದೆ. ಮೋದಿ ಅವರೂ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ತಕ್ಕ ಪಾಠ ಕಲಿಸಿದರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ಉಗ್ರರ ಪೋಷಣೆಯ ರಾಷ್ಟ್ರ ಎಂಬುದನ್ನು ಬಿಂಬಿಸಿದರು. ಇಂತಹ ಗಂಡೆದೆಯ ಪ್ರಧಾನಿಯ ನರೇಂದ್ರ ಮೋದಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದಾರೆ.
ಹೌದು, ಜಮ್ಮು-ಕಾಶ್ಮೀರದ ಗುರೇಜ್ ನಲ್ಲಿ ನಿರ್ಮಿಸಿದ ಕಿಶನ್ ಗಂಗಾ ಜಲವಿದ್ಯುತ್ ಯೋಜನೆಯನ್ನು ಪಾಕಿಸ್ತಾನದ ವಿರೋಧದ ಮಧ್ಯೆಯೂ ಪೂರ್ಣಗೊಳಿಸಿದ್ದು, ಮೇ ಮೊದಲ ವಾರದಲ್ಲಿ ಲೋಕಾರ್ಪಣೆ ಮಾಡಲಿದ್ದಾರೆ. ಇದರಿಂದ ಉಪಟಳ ಮಾಡಿದ್ದ ಪಾಕಿಸ್ತಾನಕ್ಕೆ ಮುಖಭಂಗವಾದಂತಾಗಿದೆ.
ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಇದು ಕಿಶನ್ ಗಂಗಾ ನದಿಗೆ ಅಡ್ಡಲಾಗಿ 37 ಮೀಟರ್ ಎತ್ತರದ ಅಣೆಕಟ್ಟಾಗಿದೆ. ಈ ಯೋಜನೆಯಿಂದ ವಾರ್ಷಿಕ 1,713 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದಾಗಿದ್ದು, ಭಾರತದ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದೇ ಹೇಳಲಾಗುತ್ತಿದೆ.
ಆದರೆ ಈ ಯೋಜನೆಯನ್ನು ಯಕಃಶ್ಚಿತ್ ತಡೆಯಲು ಹಲವು ಬಾರಿ ಪ್ರಯತ್ನಿಸಿತ್ತು. ಇಂಡಸ್ ನದಿ ಒಪ್ಪಂದದಂತೆ ವಿಶ್ವಸಂಸ್ಥೆಯ ಮೆಟ್ಟಿಲೇರಿ ಯೋಜನೆಗೆ ಅಡ್ಡಗಾಲು ಹಾಕಲು ಯತ್ನಿಸಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಭಾವ ಹಾಗೂ ಪಾಕಿಸ್ತಾನದ ಹುರುಳಿಲ್ಲದ ವಾದಕ್ಕೆ ಬೆಲೆ ಸಿಗದೆ ಈಗ ಯೋಜನೆ ಪೂರ್ಣಗೊಂಡಿದೆ.
ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತಹ 56 ಇಂಚಿನ ಎದೆಯುಳ್ಳ ನಾಯಕನನ್ನು ಹೊಂದಿರುವ ನಾವು ಹೆಮ್ಮೆಪಡುವ ಮೂಲಕ ಮೋದಿ ಅವರು ತಮಗೆ ಗುಂಡಿಗೆ ಇದೆ ಎಂಬುದನ್ನು ಸಾಬೀತುಪಡಿಸುತ್ತಲೇ ಇದ್ದಾರೆ. ಇದಕ್ಕೆ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿ ಕಿಶನ್ ಗಂಗಾ ಜಲವಿದ್ಯುತ್ ಯೋಜನೆ ಮುಗಿಸಿದ್ದೇ ಉತ್ತಮ ನಿದರ್ಶನವಾಗಿದೆ.
Leave A Reply