ಜೈಲಿನಲ್ಲಿ ಶಿಕ್ಷೆ ಅನುಭವಿಸುತಿರೋ ಲಾಲು ಯಾದವ್ ಭೇಟಿ ಮಾಡೋ ರಾಗಾ ಸಾಚಾತನ ಎಂಥಾದ್ದು?
ರಾಜ್ಯದಲ್ಲಿ ಚುನಾವಣೆ ಬಿಸಿ ತೀವ್ರವಾಗಿರೋ ಕಾಲದಲ್ಲೇ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯೇ ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಡಳಿತ ನೀಡದಿರುವುದು ಒಂದೆಡೆಯಾದರೇ, ಬಲಿಷ್ಠ ನಾಯಕತ್ವವಿಲ್ಲದೆ ಒದ್ದಾಡುತ್ತಿದೆ. ಇನ್ನು ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು. ಮೋದಿ, ಷಾ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಹರಸಾಹಸ ಪಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಉರುಳಿಸುತ್ತಿರುವ ದಾಳಗಳು ಅದಕ್ಕೆ ತಿರುಗುಬಾಣವಾಗುತ್ತಿರುವುದು ಪದೇ ಪದೆ ಸಾಬೀತಾಗುತ್ತಿದೆ.
ಕರ್ನಾಟಕದಲ್ಲಿ ಐದು ವರ್ಷ ಆಡಳಿತ ನಡೆಸಿದ್ದೇ ಸಾಧನೆ ಎಂಬಂತೆ ಬಿಂಬಿಸುತ್ತಿರುವ ಸಿಎಂ ಸೇರಿ ಎಲ್ಲ ಕಾಂಗ್ರೆಸ್ಸಿಗರು ಭ್ರಷ್ಟಾಚಾರ ನಿಯಂತ್ರಣದಲ್ಲಿ ವಿಫಲರಾಗಿರುವುದು ಲೋಕಾಯುಕ್ತ ಮುಚ್ಚಿಸಿದಾಗಲೇ ಸಾಬೀತಾಗಿದೆ. ಅಲ್ಲದೇ ಬಿಜೆಪಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಕಾಂಗ್ರೆಸ್ಸಿಗರು ನಿರಂತರವಾಗಿ ಜೈಲಿಗೆ ಹೋಗಿ ಬಂದವರು ಎಂಬ ಆರೋಪ ಮಾಡುತ್ತಿದ್ದಾರೆ. ಬಿಎಸ್ ವೈ ಅವರ ವಿರುದ್ಧದ ಪ್ರಕರಣಗಳಲ್ಲಿ ಕೋರ್ಟ್ ಖುಲಾಸೆ ನೀಡಿದೆ ಎಂಬ ಅರಿವು ಇದ್ದರೂ, ಕಾಂಗ್ರೆಸ್ಸಿಗರು ಜಾಣಮೌನ ವಹಿಸುತ್ತಿದ್ದಾರೆ. ಇತ್ತ ಆರೋಪ ಮುಕ್ತ ಬಿಎಸ್ ವೈ ವಿರುದ್ಧ ಬೊಗಳೇ ಬಿಡುವ ಕಾಂಗ್ರೆಸ್ಸಿಗರ ಯುವರಾಜ ರಾಹುಲ್ ಗಾಂಧಿ, ಮೇವು ಹಗರಣದ ಅಪರಾಧಿ, ಜೈಲಿನಲ್ಲೇ ಜೀವನ ನಡೆಸುತ್ತಿರುವ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ ಯಾದವ್ ಅವರನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸುತ್ತಾರೆ. ದೆಹಲಿಯ ಅಖಿಲ ಭಾರತೀಯ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಲ್ಲಿ ರಾಗಾ ಲಾಲುರನ್ನು ಭೇಟಿ ಮಾಡಿದ್ದಾರೆ. ಇದು ಕಾಂಗ್ರೆಸ್ಸಿಗರ ಎಡಬಿಡಂಗಿತನಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ಆರೋಪ ಮುಕ್ತರು ಮತ್ತು ಕೋರ್ಟ್ ನಿಂದ ಛೀ ಮಾರಿ ಹಾಕಿಸಿಕೊಂಡು ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ವ್ಯಕ್ತಿಯ ಮಧ್ಯೆ ಅದೆಷ್ಟು ಭಿನ್ನತೆ ಇದೆ ಎಂಬುದನ್ನು ಸಿಎಂ ಸಿದ್ದರಾಮಯ್ಯ ಸೇರಿ ಎಲ್ಲ ಕಾಂಗ್ರೆಸ್ಸಿಗರು ಅರ್ಥ ಮಾಡಿಕೊಳ್ಳಬೇಕು. ರಾಹುಲ್ ಗಾಂಧಿ ಜೈಲುವಾಸಿ ಲಾಲು ಪ್ರಸಾಧ್ ಯಾದವ್ ಅವರನ್ನು ಭೇಟಿ ಮಾಡಿದ್ದು, ಕಾಂಗ್ರೆಸ್ ಎಷ್ಟು ಸಾಚಾತನದಿಂದ ಕೂಡಿದೆ ಎಂಬುದು ಸಾಬೀತು ಮಾಡಿದೆ. ಬಿಎಸ್ ಯಡಿಯೂರಪ್ಪ ವಿರುದ್ಧದ ಭಾಗಶಃ ಪ್ರಕರಣಗಳಿಗೆ ಕೋರ್ಟ್ ಇತಿಶ್ರೀ ಹಾಡಿದೆ. ಅವರನ್ನು ವಿನಾಕಾರಣ ಪ್ರಕರಣಗಳಲ್ಲಿ ಸಿಲುಕಿಸಿರುವುದು ಕೋರ್ಟ್ ನಿಂದಲೇ ತಿಳಿದುಬಂದಿದೆ.
ಇತ್ತ ದೇಶ ಆತಂಕದ ಸ್ಥಿತಿಯಲ್ಲಿ ಗಡಿಯಲ್ಲಿ ಸೈನಿಕರು ಗುದ್ದಾಡುತ್ತಿರುವಾಗ ಚೀನಾ ರಾಯಭಾರಿಯೊಂದಿಗೆ ಮಾತುಕತೆಗೆ ಇಳಿಯುವ ರಾಹುಲ್ ಗಾಂಧಿ ಸೇರಿ ಇಡೀ ಕಾಂಗ್ರೆಸ್ ಮತ್ತು ಎಡಬಿಡಂಗಿಗಳ ಗ್ಯಾಂಗ್ ತಮ್ಮ ಸಾಚಾತನವನ್ನು ಕೇವಲ ಮಾತಿನಲ್ಲಿ ತೋರಿಸದೇ ಕೃತಿಯಲ್ಲೂ ಇಳಿಸಬೇಕು.
Leave A Reply