ರಕ್ಷಣಾ ಪಡೆಗಳ ಭರ್ಜರಿ ಕಾರ್ಯಾಚರಣೆ. ವಾನಿ ಉತ್ತರಾಧಿಕಾರಿ ಉಗ್ರ ಸಮೀರ್ ಟೈಗರ್ ಖಲ್ಲಾಸ್
ಶ್ರೀನಗರ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೇರಿದ ನಂತರ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರನ್ನು ಹತ್ತಿಕ್ಕುವ ಕಾರ್ಯ ಯಶಸ್ವಿಯಾಗಿ ಮುಂದುವರಿದಿದ್ದು, ಇದೀಗ ರಕ್ಷಣಾ ಪಡೆಗಳು ಖುಷಿಯ ವಿಚಾರವೊಂದನ್ನು ನೀಡಿದ್ದು, ಭಯೋತ್ಪಾದಕ ಸಂಘಟನೆಯ ಪೋಸ್ಟರ್ ಬಾಯ್ ನನ್ನು ಖಲ್ಲಾಸ್ ಮಾಡುವ ಮೂಲಕ ಭರ್ಜರಿ ಕೊಡುಗೆ ಸೈನಿಕ ಪಡೆಗಳು ನೀಡಿವೆ.
ರಕ್ಷಣಾ ಪಡೆಗಳ ಭರ್ಜರಿ ಕಾರ್ಯಾಚರಣೆಯಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೋರನಲ್ಲಿ 44 ರಾಷ್ಟ್ರೀಯ ರೈಫಲ್ಸ್, 182 ಮತ್ತು 183 ಸಿಆರ್ ಫಿಎಫ್ ಬಟಾಲಿಯನ್ ಮತ್ತು ಜಮ್ಮು ಕಾಶ್ಮೀರದ ವಿಶೇಷ ತಂಡಗಳ ಜಂಟಿ ಕಾರ್ಯಾಚರಣೆ ನಡೆಸಿ, ಕಾಶ್ಮೀರದಲ್ಲಿ ಭಯೋತ್ಪಾದನೆಯ ವಿಷ ಬೀಜ ಬಿತ್ತುತ್ತಿದ್ದ ಉಗ್ರ ಸಮೀರ್ ಟೈಗರ್ ನನ್ನು ಹತ್ತಿಕ್ಕುವಲ್ಲಿ ಸೈನಿಕರು ಯಶಸ್ವಿಯಾಗಿದ್ದಾರೆ.
ಯಾರೂ ಈ ಸಮೀರ್ ಟೈಗರ್: ಜಮ್ಮು ಕಾಶ್ಮೀರದಲ್ಲಿ ದುರುಳ ಪ್ರತ್ಯೇಕವಾದಿಗಳ ವಿಷಮಂತ್ರಕ್ಕೆ ಬಲಿಯಾಗಿರೋ ಸಮೀರ್ ಟೈಗರ್ ಆರಂಭದಲ್ಲಿ ಕಲ್ಲು ತೂರಾಟಗಾರನಾಗಿದ್ದ. ನಂತರದ ದಿನಗಳಲ್ಲಿ ಇಸ್ಲಾಂ ಮೂಲಭೂತವಾದಿಗಳ ಕುತಂತ್ರಕ್ಕೆ ಬಲಿಯಾಗಿ, ಭಯೋತ್ಪಾದಕರೊಂದಿಗೆ ಕೈ ಜೋಡಿಸಿ, ಮುಸ್ಲಿಂ ಯುವಕರನ್ನು ಉಗ್ರ ಸಂಘಟನೆಗಳಿಗೆ ನೇಮಕ ಮಾಡಲು ಸಹಕಾರ ನೀಡುತ್ತಿದ್ದ. ಉಗ್ರ ಬುರ್ಹಾನ್ ವಾನಿ ಹತ್ಯೆಯಾದ ನಂತರ ಮುನ್ನಲೆಗೆ ಬಂದಿದ್ದ ಟೈಗರ್ ಸಮೀರ್ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿದ್ದ. ಸುಮಾರು ಏಳು ಬಾರಿ ತನ್ನ ಪ್ರಾಣ ಉಳಿಸಿಕೊಂಡಿದ್ದ.
2016 ಮಾರ್ಚ್ 24 ರಂದು ಕಲ್ಲು ತೂರಾಟದ ಆರೋಪದ ಮೇಲೆ ಬಂಧಿತನಾಗಿದ್ದ ಸಮೀರ್, ನಂತರ ಬಿಡುಗಡೆಯಾಗಿದ್ದ. ಬಿಡುಗಡೆಯಾದ ನಂತರ 2016 ಮೇನಲ್ಲಿ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಜೊತೆ ಕೈಜೋಡಿಸಿದ್ದ. ಉಗ್ರ ಬುರ್ಹಾನ ವಾನಿ ಹತ್ಯೆ ನಂತರ ಸಮೀರ್ ಮುನ್ನಲೆಗೆ ಬಂದಿದ್ದ. ದೇಶದ್ರೋಹಿ ಚಟುವಟಿಕೆಗಳಿಗೆ ನಿರಂತರವಾಗಿ ಬೆಂಬಲಿಸುತ್ತ. ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ.
Leave A Reply