ಕೇಂದ್ರದ ಟೂರಿಸ್ಟ್ ಯೋಜನೆಯ ಫಲ: ಶೇ.17 ರಷ್ಟು ವಿದೇಶಿ ವಿನಿಮಯ ಹೆಚ್ಚಳ
ದೆಹಲಿ: ಕೇಂದ್ರ ಸರ್ಕಾರದ ಪ್ರವಾಸೋಧ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಯೋಜನೆಗಳ ಫಲದಿಂದ ದೇಶಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ದೇಶದ ವಿದೇಶಿ ವಿನಿಯಮ ಶೇ.17ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಈ ಮೂಲಕ ಕೇಂದ್ರ ಸರ್ಕಾರ ಪ್ರವಾಸೋದ್ಯಮ ನೀತಿಗಳು, ವಿದೇಶಿಗರಲ್ಲಿ ಮೂಡಿಸಿರುವ ವಿಶ್ವಾಸ, ಭಾರತದ ಸ್ಪಷ್ಟ ಕಲ್ಪನೆಯ ಫಲ ದೊರೆತಂತಾಗಿದೆ.
2017 ಮಾರ್ಚ್ ನಿಂದ 2018 ರ ಮಾರ್ಚ್ ವರೆಗೆ ಶೇ.17 ರಷ್ಟು ವಿದೇಶಿ ವಿನಿಮಯ ಹೆಚ್ಚಳವಾಗಿರುವುದು ಗಮನಾರ್ಹ ಸಂಗತಿ. 2017ರಲ್ಲಿ 14,667 ಕೋಟಿ ರೂಪಾಯಿ ಇದ್ದ ವಿದೇಶಿ ವಿನಿಮಯ, 2018ರ ಮಾರ್ಚ್ ವೇಳೆಗೆ 17,294 ಕೋಟಿ ರೂಪಾಯಿಯಷ್ಟು ಹೆಚ್ಚಳವಾಗಿದೆ. ಈ ದರ 2016ರಲ್ಲಿ ಕೇವಲ 12,985 ರಷ್ಟು ಇತ್ತು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿದೇಶಗಳಲ್ಲಿ ಭಾರತದ ಬಗ್ಗೆ ಮೂಡಿಸಿರುವ ಉತ್ತಮ ಚಿತ್ರಣ ಮತ್ತು ಭಾರತದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳೊಂದಿಗೆ ಒಗ್ಗೂಡಿ ಕೈಗೊಂಡಿರುವ ಕ್ರಮಗಳು ಈ ಹೆಚ್ಚಳಕ್ಕೆ ಕಾರಣ ಎನ್ನಲಾಗಿದೆ. 2016 ರಿಂದ 2017 ರವರೆಗೆ ಶೇ.13.0 ರಷ್ಟಿದ್ದ ವಿದೇಶಿ ವಿನಿಮಯ ದರ ಕೇವಲ ಒಂದೇ ವರ್ಷದಲ್ಲಿ (2017 ರಿಂದ 2018) ಶೇ.17.9ರಷ್ಟು ಹೆಚ್ಚಳವಾಗಿರುವುದು, ಕೇಂದ್ರದ ಯೋಜನೆಗಳ ಫಲ. ಕೇಂದ್ರ ಪ್ರವಾಸೋದ್ಯಮ ಇಲಾಖೆ ಯುಎಸ್ ಡಾಲರ್ ಆಧಾರದಲ್ಲಿ ವಿದೇಶಿ ವಿನಿಮಯ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
Leave A Reply