ಅಮೆರಿಕದ ಒಕ್ಲಾಹಾಮಾ ನಗರದ ಸೆನೆಟ್ ನಲ್ಲಿ ಮೊಳಗಿದ ಸಂಸ್ಕೃತ ಶ್ಲೋಕ
ಒಕ್ಲಾಹಾಮಾ: ಭಾರತ ಪುರಾತನ ಶ್ಲೋಕಗಳ ಶಕ್ತಿ ವಿಶ್ವಾದ್ಯಂತ ಅನುರಣಿಸುತ್ತಿದ್ದು, ಇದೀಗ ವಿಶ್ವದ ದೊಡ್ಡಣ್ಣ ಅಮೆರಿಕದ ಒಕ್ಲಾಹಾಮಾ ನಗರದ ಸೆನೆಟ್ ಆರಂಭವನ್ನು ಸಂಸ್ಕೃತ ಶ್ಲೋಕಗಳನ್ನು ಪಠಿಸುವ ಮೂಲಕ ಆರಂಭಿಸಿದ್ದು, ಭಾರತೀಯ, ಹಿಂದೂ ಸಂಸ್ಕೃತಿಯ ತಾಕತ್ತನ್ನು ವಿಶ್ವಕ್ಕೆ ಮತ್ತೊಮ್ಮೆ ಸಾಬೀತು ಪಡಿಸಿದಂತಾಗಿದೆ.
ಏ.30ರಂದು ಒಕ್ಲಾಹಾಮಾ ನಗರದ ಸೆನೆಟ್ ನ ಸಭೆ ಆರಂಭಕ್ಕೂ ಮುನ್ನ ಯೂನಿವರ್ಸಲ್ ಸೊಸೈಟಿ ಆಫ್ ಹಿಂದೂಯಿಸಂ ಅಧ್ಯಕ್ಷ ರಾಜನ್ ಝಡ್ ಪುರಾತನ ಭಾರತೀಯ ಸಂಸ್ಕೃತ ಗ್ರಂಥಗಳಿಂದ ಆಯ್ದ ಶ್ಲೋಕಗಳನ್ನು ಪಠಿಸುವ ಮೂಲಕ ಸೆನೆಟ್ ಆರಂಭಿಸಿದ್ದು ವಿಶೇಷವಾಗಿತ್ತು. ಸಂಸ್ಕೃತ ಶ್ಲೋಕಗಳನ್ನು ಪಠಿಸಿದ ನಂತರ ರಾಜನ್ ಝಡ್ ಅವರು ಶ್ಲೋಕಗಳ ಮಹತ್ವವನ್ನು, ಅರ್ಥ, ಗೂಡಾರ್ಥಗಳನ್ನು ಇಂಗ್ಲಿಷ್ ನಲ್ಲಿ ತಿಳಿಸುವ ಮೂಲಕ ಸೆನೆಟ್ ಸದಸ್ಯರಿಗೆ ಶ್ಲೋಕಗಳ ಮಹತ್ವವನ್ನು ಅರುಹಿದರು.
ಋಗವೇದ, ಉಪನಿಷತ್, ಭಗವತ್ ಗೀತಾದಲ್ಲಿರುವ ಮಹತ್ವದ ಶ್ಲೋಕಗಳನ್ನು ಓಂ ಮೂಲ ಮಂತ್ರದೊಂದಿಗೆ ಆರಂಭಿಸಿ, ಅದರಿಂದಲೇ ಅಂತ್ಯಗೊಳಿಸಿದ್ದಾರೆ. ರಾಜನ್ ಝಡ್ ಹಿಂದೂ ಮುಖಂಡರಾಗಿದ್ದು, ‘ಅಸತೋಮಾ ಸದ್ಗಮಯ, ತಮಸೋಮಾ ಜ್ಯೋತಿರ್ಗಮಯ, ಮೃತ್ಯೋಮ ಅಮೃತಂಗಮಯ’ ಎಂಬ ಶಾಂತಿ ಮಂತ್ರದ ಮಹತ್ವವನ್ನು ಸೆನೆಟ್ ಸದಸ್ಯರಿಗೆ ಇಂಗ್ಲಿಷ್ ನಲ್ಲಿ ತಿಳಿ ಹೇಳುವ ಮೂಲಕ ಸಮಾಜಸೇವೆ, ಜೀವನದ ಪಾಠವನ್ನು ಕೇವಲ ಒಂದೇ ಶ್ಲೋಕದಲ್ಲಿ ತಿಳಿಹೇಳಿದ್ದು ವಿಶೇಷವಾಗಿತ್ತು.
ಅಮೆರಿಕದಲ್ಲಿ 1.1 ಮಿಲಿಯನ್ ಹಿಂದೂಗಳು ವಾಸ ಮಾಡುತ್ತಿದ್ದು, ಹಿಂದೂತ್ವದ ಶಕ್ತಿ ವಿಶ್ವದೆಲ್ಲೆಡೆ ಪಸರಿಸುತ್ತಿದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿ ನಿಂತಿದೆ.
Leave A Reply