ವಿಶ್ವನಾಯಕನಾಗುವತ್ತ ಭಾರತ: ಮೋದಿ ಆಡಳಿತಕ್ಕೆ ಸ್ವೀಡನ್ ಸಚಿವರ ಶ್ಲಾಘನೆ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ದಿಟ್ಟ ಆಡಳಿತದಿಂದ ಭಾರತ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದ್ದು, ಅದಕ್ಕೆ ಪೂಕರವಾಗಿ ವಿಶ್ವದ ನಾನಾ ರಾಷ್ಟ್ರಗಳು ಭಾರತದ ನೋಟ ಬೀರಿದ್ದಾರೆ. ಈ ಅಂಶ ಇದೀಗ ಮತ್ತೊಮ್ಮೆ ಸಾಬೀತಾಗಿದ್ದು, ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ವಿಶ್ವನಾಯಕನಾಗುತ್ತಿದೆ ಎಂದು ಸ್ವೆಡಿಷ್ ದೇಶದ ಕೌಶಲ ಮತ್ತು ಉದ್ಯಮ ಸಚಿವ ಮೈಕಲ್ ಡ್ಯಾಂಬರ್ಗ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಅವರು, ತಂತ್ರಜ್ಞಾನ ಅಳವಡಿಕೆ ಒಂದು ದೇಶದ ಆರ್ಥಿಕ ಚಿತ್ರಣವನ್ನೆ ಬದಲಾಯಿಸುತ್ತೆ. ಅದನ್ನು ಭಾರತ ಇತ್ತೀಚಿನ ದಿನಗಳಲ್ಲಿ ತೀವ್ರಗೊಳಿಸಿದೆ. ಆದ್ದರಿಂದ ಸ್ವೀಡನ್ ಭಾರತದ ರೀತಿಯನ್ನು ಅಳವಡಿಸಿಕೊಳ್ಳಬೇಕಿದೆ. ಜನರಿಗೆ ದಕ್ಷ ಆಡಳಿತ ನೀಡಲು ಕ್ಯಾಶಲೆಸ್ ಸಮಾಜ ನಿರ್ಮಿಸುವುದು ಮುಖ್ಯ. ಅದನ್ನು ಭಾರತ ಸರ್ಕಾರ ಮಾಡಿ ತೋರಿಸುತ್ತಿದೆ. ಪರಿಣಾಮಕಾರಿಯಾಗಿ ಅಳವಡಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 17ರಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಿ ಸ್ಟಿಫನ್ ಲಾಫ್ನೆನ್ ಭಾರತ ಮತ್ತು ಸ್ವೀಡನ್ ಮಧ್ಯೆ ಜಂಟಿ ಯೋಜನೆಯೊಂದಕ್ಕೆ ಸಹಿ ಹಾಕಿದ್ದರು. ಈ ನಿರ್ಧಾರ ಸ್ವೀಡನ್ ಗೆ ಭಾರಿ ಅನುಕೂಲ ಕಲ್ಪಿಸಲಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಿಂದ ವಿಶ್ವದ ಗಮನ ಸೆಳೆದಿದ್ದು, ನೋಟ್ಯಂತರ, ಕ್ಯಾಶಲೆಸ್ ಸಮಾಜ ನಿರ್ಮಾಣ, ತೆರಿಗೆಯಲ್ಲಿ ಹೊಸ ಬದಲಾವಣೆಯ ನಿರ್ಧಾರಗಳು ದೇಶಕ್ಕೆ ಹೊಸ ರೂಪ ನೀಡಿವೆ. ಈ ನಿಟ್ಟಿನಲ್ಲಿ ಭಾರತ ವಿಶ್ವನಾಯಕನ ಪಟ್ಟ ಅಲಂಕರಿಸುತ್ತಿದೆ ಎಂದು ಹೇಳಿದ್ದಾರೆ.
Leave A Reply