ಮದರಸಾದಲ್ಲಿ ಬಾಲಕಿಯ ಅತ್ಯಾಚಾರ ಮಾಡಿದವ ಬಾಲಾಪರಾಧಿ ಅಲ್ಲ ಎಂದು ಸಾಬೀತು!
ನವದೆಹಲಿ: ದೇಶದಲ್ಲಿ ಎಂತಹ ದುರಂತ ನಡೆಯುತ್ತಿದೆ ನೋಡಿ. ಜಮ್ಮು-ಕಾಶ್ಮೀರದ ಕಠುವಾ ಎಂಬಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಲ್ಲಿ ಇಡೀ ಹಿಂದೂಗಳನ್ನು, ಹಿಂದೂ ದೇವಾಲಯಗಳನ್ನೇ ಕಟಕಟಗೆ ತರಲಾಯಿತು. ದೇವಾಲಯದಲ್ಲಿ ಅತ್ಯಾಚಾರ ಮಾಡಲಾಗಿದೆ ಎಂದು ಇಡೀ ದೇವರನ್ನೇ ಪ್ರಶ್ನೆ ಮಾಡಲಾಯಿತು. ಆದರೆ ಏಪ್ರಿಲ್ 21ರಂದು ದೆಹಲಿ ಗಾಜಿಯಾಬಾದ್ ಮಸೀದಿಯೊಂದರಲ್ಲಿ 10 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಕುರಿತು ಯಾವುದೇ ಮಾಧ್ಯಮಗಳು, ಪ್ರತಿಪಕ್ಷಗಳು, ಬುದ್ಧಿಜೀವಿಗಳು ಪ್ರಶ್ನೆ ಮಾಡುತ್ತಿಲ್ಲ.
ಅಷ್ಟೇ ಅಲ್ಲ, ಹೀಗೆ ಮದರಸಾದಲ್ಲಿಯೇ ಬಾಲಕಿಯನ್ನು ಅತ್ಯಾಚಾರ ಮಾಡಿದ ಆರೋಪಿಗೆ ಶಿಕ್ಷೆ ಪ್ರಮಾಣ ಕಡಿಮೆ ಮಾಡಿಸಲು, ಆತ ಬಾಲಾಪರಾಧಿ ಎಂದು ಸಾಬೀತುಪಡಿಸಲು ಹಲವು ಶಕ್ತಿಗಳು ಪ್ರಯತ್ನಿಸಿದ್ದವು. ಆದರೆ ಈ ವಿಚಾರದಲ್ಲಾದರೂ ಬಾಲಕಿಗೆ ನ್ಯಾಯ ಸಿಗುವ ಲಕ್ಷಣ ಗೋಚರಿಸಿದ್ದು, ಆರೋಪಿ ಬಾಲಾಪರಾಧಿ ಅಲ್ಲ ಎಂದು ವರದಿಯಿಂದ ದೃಢಪಟ್ಟಿದೆ.
ಬಾಲಕಿಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಗುಲಾಮ್ ಶಾಹೀದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತ ಬಾಲಾಪರಾಧಿ ಎಂದು ಹೇಳಲಾಗಿತ್ತು. ಆದರೆ ಆತನ ಮೂಳೆಯ ಸಾಮರ್ಥ್ಯ ಮಾಡಿದ ಬಳಿಕ, ಆತ ಬಾಲಾಪರಾಧಿ ಅಲ್ಲ ಎಂದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದಾಗ್ಯೂ ಗುಲಾಮ್ ಶಾಹೀದ್ 18 ವರ್ಷದೊಳಗಿನವ ಎಂಬ ಕುರಿತು ಆತನ ಪೋಷಕರು ಸಮರ್ಪಕವಾದ ದಾಖಲೆ ಒದಗಿಸುವಲ್ಲಿಯೂ ವಿಫಲವಾಗಿರುವುದು ಪ್ರಕರಣದಲ್ಲಿ ಆರೋಪಿಗೆ ಕಠಿಣ ಶಿಕ್ಷೆಯಾಗುವ ಲಕ್ಷಣ ಇವೆ. ಇಷ್ಟಾದರೂ ಈ ಪ್ರಕರಣ ಮಾತ್ರ ಸುದ್ದಿಯಾಗುತ್ತಿಲ್ಲ, ಯಾರೂ ಕನಿಷ್ಠ ಖಂಡನೆಯನ್ನೂ ವ್ಯಕ್ತಪಡಿಸಿಲ್ಲ.
Leave A Reply