ಸೇನೆ ಬಲಪಡಿಸಲು ಮೋದಿ ದಿಟ್ಟ ಹೆಜ್ಜೆ, ಸೈನ್ಯಕ್ಕಾಗಿ ಖರ್ಚು ಮಾಡುವ ಟಾಪ್ 5 ರಾಷ್ಟ್ರಗಳಲ್ಲಿ ಭಾರತವೂ ಒಂದು!
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಭಾರತೀಯ ಸೇನೆ ಯಾವ ರಾಷ್ಟ್ರವನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಶಕ್ತಿ ಪಡೆದಿದೆ. ಅದಕ್ಕೆ ಮೇಕ್ ಇನ್ ಇಂಡಿಯಾ ಮೂಲಕ ಶಸ್ತ್ರಾಸ್ತ್ರ ತಯಾರಿ, ವಿದೇಶದಿಂದ ಆಮದು, ಸೇನಾ ಶಸ್ತ್ರಾಸ್ತ್ರಗಳ ಆಧುನೀಕರಣ ಸೇರಿ ಹಲವು ಅಂಶಗಳು ಕಾರಣವಾಗಿವೆ. ಹಾಗಾಗಿಯೇ ನಮ್ಮ ಸೇನೆ ಯಾವಾಗಲೂ ಯುದ್ಧಸನ್ನದ್ಧವಾಗಿರುವ ಜತೆಗೆ, ವೈರಿ ರಾಷ್ಟ್ರದ ಎದೆ ನಡುಗಿಸುವಂತಹ ಶಕ್ತಿ ಪಡೆದಿದೆ.
ಹಾಗಂತ, ಸೇನೆ ಬಲಪಡಿಸುವುದು ಎಂದರೆ ಅದು ನೂರಾರು ಕೋಟಿ ರೂಪಾಯಿಯಲ್ಲಿ ಮುಗಿದುಹೋಗುವುದಿಲ್ಲ. ಸಾವಿರಾರು ಕೋಟಿ ರೂಪಾಯಿಗಳನ್ನು ಸುರಿಯಬೇಕಾಗುತ್ತದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮರ್ಪಕವಾಗಿ ಮಾಡಿದ್ದು, 2017ರಲ್ಲಿ ಸೇನೆ ಬಲಪಡಿಸಲು ಖರ್ಚು ಮಾಡಿದ ವಿಶ್ವದ ಎಲ್ಲ ರಾಷ್ಟ್ರಗಳಲ್ಲೇ ಭಾರತಕ್ಕೆ ಐದನೇ ಸ್ಥಾನ ಲಭಿಸಿದೆ.
ಸ್ವೀಡನ್ ನ ಸ್ಟಾಕ್ ಹೋಂ ಇಂಟರ್ ನ್ಯಾಷನಲ್ ಪೀಸ್ ರಿಸರ್ಚ್ ಸಂಸ್ಥೆಯ ವರದಿ ಪ್ರಕಾರ ಭಾರತ ಸೈನ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವ ಟಾಪ್ 5 ದೇಶಗಳಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದೆ.
ಅಂದರೆ 2017ರಲ್ಲಿ ಜಾಗತಿಕವಾಗಿ ಎಲ್ಲ ರಾಷ್ಟ್ರಗಳು 1.73 ಲಕ್ಷ ಕೋಟಿ ಡಾಲರ್ ವ್ಯಯಿಸಿದ್ದು, ಇದರಲ್ಲಿ ಭಾರತ ಮತ್ತು ಚೀನಾದ ಪಾಲೇ ಶೇ.60ರಷ್ಟಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ. 2017ರಲ್ಲಿ ಚೀನಾ ಸೇನೆ ಬಲಪಡಿಸಲು 228 ಬಿಲಿಯನ್ ಅಮೆರಿಕನ್ ಡಾಲರ್ ಹಣ ವ್ಯಯಿಸಿದರೆ, ಭಾರತ 63.9 ಬಿಲಿಯನ್ ಡಾಲರ್ ಖರ್ಚು ಮಾಡಿದೆ. ಅಂದರೆ ಇದು 2016ರಲ್ಲಿ ಖರ್ಚು ಮಾಡಿದ ಹಣಕ್ಕಿಂತ ಶೇ.5.5ರಷ್ಟು ಜಾಸ್ತಿಯಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಬರೀ ದೀಪಾವಳಿಗೊಮ್ಮೆ ಗಡಿಗೆ ತೆರಳಿ ಸೈನಿಕರ ಜತೆ ದೀಪಾವಳಿ ಆಚರಿಸದೆ, ಸೈನಿಕರ ಆತ್ಮಸ್ಥೈರ್ಯ ಮತ್ತು ಭಾರತದ ಶಕ್ತಿ ವೃದ್ಧಿಸಲು ಅಪಾರ ಪ್ರಮಾಣದ ಹಣ ವ್ಯಯಿಸುತ್ತಿದ್ದಾರೆ. ಅದಕ್ಕಾಗಿಯೇ ಭಾರತ ಇಂದು ಜಾಗತಿಕವಾಗಿ ಎದೆಸೆಟೆದು ನಿಲ್ಲುವಂತಾಗಿದೆ.
Leave A Reply