ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಫೋಟೋ ಮುದ್ರಿಸಿ ಸೌಹಾರ್ದ ಮೆರೆದ ಆ ಮುಸ್ಲಿಂ ವ್ಯಕ್ತಿ ಯಾರು ಗೊತ್ತೇ?
ದೇಶದ ಇತಿಹಾಸದ ಉದ್ದಕ್ಕೂ ಅಲ್ಪಸಂಖ್ಯಾತರು ಹಾಗೂ ಹಿಂದೂಗಳ ನಡುವೆ ಕಂದಕ ಸೃಷ್ಟಿಸುವ ಹಲವು ರಾಜಕಾರಣಿಗಳು, 60 ವರ್ಷ ದೇಶವಾಳಿದ ಪಕ್ಷವನ್ನು ನಾವು ನೋಡಿದ್ದೇವೆ. ಇಂದಿಗೂ ಬಿಜೆಪಿ ಸರ್ಕಾರದಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಇದೆ ಎಂದು ಬೊಬ್ಬೆ ಹಾಕುವ ಕಾಂಗ್ರೆಸ್ಸಿಗರು, ಬುದ್ಧಿಜೀವಿಗಳ ಸಂಖ್ಯೆ ಜಾಸ್ತಿಯೇ ಇದೆ.
ಆದರೂ, ಇವರೆಲ್ಲರು ಹೀಗೆ ಬೊಬ್ಬೆ ಹಾಕಿದರೂ, ಉತ್ತರ ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಮಗಳ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ ಹಿಂದೂ ದೇವರ ಭಾವಚಿತ್ರ ಮುದ್ರಿಸುವ ಮೂಲಕ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಮುನ್ನುಡಿ ಬರೆದಿದ್ದಾನೆ.
ಹೌದು, ಉತ್ತರ ಪ್ರದೇಶದ ಸುಲ್ತಾನ್ ಪುರ ಜಿಲ್ಲೆಯ ಬಾಘ್ ಸರಾಯ್ ಎಂಬ ಗ್ರಾಮದ ಮೊಹಮ್ಮದ್ ಸಲೀಂ ಎಂಬಾತನೇ ಇಂತಹ ಸೌಹಾರ್ದಯುತ ನಡೆ ಇಟ್ಟಿದ್ದಾನೆ. ತನ್ನ ಮಗಳ ಮದುವೆ ನಿಶ್ಚಯವಾಗಿದ್ದು, ಸೌಹಾರ್ದದ ಸಂಕೇತವಾಗಿ ಹಿಂದೂ ದೇವರ ಭಾವಚಿತ್ರ ಮುದ್ರಿಸಿದ್ದೇನೆ. ಅಲ್ಲದೆ ರಾಮ ಮತ್ತು ಸೀತೆ ಇರುವ ಕ್ಯಾಲೆಂಡರ್ ಸಹ ಖರೀದಿಸಿದ್ದು, ಹಳ್ಳಿಹಳ್ಳಿಗೂ ತೆರಳಿ ಮದುವೆ ಆಮಂತ್ರಣ ಹಾಗೂ ರಾಮ-ಸೀತೆ ಇರುವ ಕ್ಯಾಲೆಂಡರ್ ನೀಡುತ್ತಿದ್ದೇನೆ ಎಂದು ಸಲೀಂ ತಿಳಿಸಿದ್ದಾರೆ.
ನನಗೆ ಹಿಂದೂ ಧರ್ಮದವರು ಸಹ ಗೆಳೆಯರಿದ್ದಾರೆ. ಅವರಿಗೆ ಅವರದೇ ಆದ ಸಂಪ್ರದಾಯದಲ್ಲಿ ಮದುವೆಗೆ ಸ್ವಾಗತಿಸಲು ಹಿಂದೂ ದೇವತೆಗಳ ಭಾವಚಿತ್ರ ಮುದ್ರಿಸಿದ್ದೇನೆ. ಇದಕ್ಕೆ ವರನ ಕಡೆಯವರೂ ಸಮ್ಮತಿಸಿದ್ದಾರೆ. ಹಿಂದೂ ದೇವತೆಗಳ ಚಿತ್ರ ಇರುವ 350 ಹಾಗೂ ಮುಸ್ಲಿಂ ಸಂಪ್ರದಾಯದಂತೆ 400 ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವವರ ನಡುವೆ, ಹಿಂದೂ ದೇವರೆಂದರೆ ಕೀಳಾಗಿ ಕಾಣುವಂತೆ ಬೋಧಿಸುವ ಮುಸ್ಲಿಂ ಮೌಲ್ವಿಗಳು ಇರುವವರ ನಡುವೆ ಮೊಹಮ್ಮದ್ ಸಲೀಂ ಸೌಹಾರ್ದದ ಮೂರ್ತ ರೂಪವಾಗಿ ಕಾಣುತ್ತಾನೆ. ಆ ರಾಮ-ಸೀತೆ ಆಶೀರ್ವಾದ ಇವರ ಮೇಲಿರಲಿ. ಯಾವ ಮೌಲ್ವಿಯೂ ಇದಕ್ಕೆ ಫತ್ವಾ ಹೊರಡಿಸದಿರಲಿ ಎಂಬುದೇ ನಮ್ಮ ಆಶಯವಾಗಿದೆ.
Leave A Reply