ದೇಶದಲ್ಲಿ ಐಸಿಸ್ ಸಕ್ರಿಯ? ಅಸ್ಸಾಂನಲ್ಲಿ ಐಸಿಸ್ ಹೆಸರುಳ್ಳ ಧ್ವಜ ಪತ್ತೆ

ಗುಹಾವಟಿ: ಭಾರತದ ವಿರುದ್ಧ ಸದಾ ಹಲ್ಲು ಮಸೆಯುವ, ವಿಶ್ವಕ್ಕೆ ಕಂಟಕವಾಗಿರುವ ಭಯೋತ್ಪಾದಕ ಸಂಘಟನೆ ಐಸಿಸ್ ದೇಶದಲ್ಲಿ ಸಕ್ರಿಯವಾಗಿರುವ ಸಾಕ್ಷಿಗಳು ಆಗಾಗ ದೊರೆಯುತ್ತಲೇ ಇವೆ. ಇದೀಗ ದೇಶದಲ್ಲಿ ಐಸಿಸ್ ಸಕ್ರಿಯವಾಗಿರುವ ಕುರಿತು ಮತ್ತೊಂದು ಬಲಿಷ್ಠ ಸಾಕ್ಷಿಯೊಂದು ಅಸ್ಸಾಂನಲ್ಲಿ ದೊರಕಿದೆ. ಅಸ್ಸಾಂನ ಗೋಲ್ಪಾರ್ ದಲ್ಲಿ ಐಸಿಸ್ ಹೆಸರುಳ್ಳ ಕಪ್ಪು ಧ್ವಜಗಳು ದೊರಕಿದ್ದು, ತೀವ್ರ ಆತಂಕ ಮೂಡಿಸಿದೆ.
ಗೋಲ್ಪಾರ್ ನ ಬ್ರಹ್ಮಪುತ್ರ ನದಿಯ ಪಕ್ಕದ ಮರವೊಂದರ ಬಳಿ ಈ ಧ್ವಜಗಳು ದೊರಕಿದ್ದು, ಸ್ಥಳೀಯ ವ್ಯಕ್ತಿಯೊಬ್ಬರು ವಾಯುವಿಹಾರಕ್ಕೆ ಹೋದಾಗ ಧ್ವಜಗಳು ಕಂಡು ಬಂದಿವೆ. ನಿತ್ಯ ನದಿ ಪಕ್ಕದಲ್ಲಿ ವಾಯುವಿಹಾರಕ್ಕೆ ಹೋಗುವ ವ್ಯಕ್ತಿಗೆ ಮರದಲ್ಲಿ ಧ್ವಜಗಳ ಕಂಡು ಬಂದಿವೆ. ಕೂಡಲೇ ವ್ಯಕ್ತಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆದರೆ ಈ ಕುರಿತು ಪ್ರತಿಕ್ರಿಯೇ ನೀಡಿರುವ ಪೊಲೀಸರು ಧ್ವಜಗಳು ಭಯೋತ್ಪಾದಕ ಸಂಘಟನೆಗಳ ಕುರಿತ ಹೋಲಿಕೆ ಇಲ್ಲ. ಆದರೂ ಕೂಡ ಆ ನಿಟ್ಟಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದೊರಕಿರುವ ಧ್ವಜಗಳು ಐಸಿಸ್ ಗೆ ಹೊಂದಿಕೆಯಾಗಿಲ್ಲ. ನಾವು ಧ್ವಜಗಳನ್ನು ವಶಕ್ಕೆ ಪಡೆದಿದ್ದೇವೆ. ಕೈನಿಂದ ಪೇಂಟಿಂಗ್ ಮೂಲಕ ಚಿತ್ರಗಳನ್ನು ಬಿಡಿಸಿದ್ದು, ಉರ್ದು ಮತ್ತು ಅರೆಬಿಕ್ ಅಕ್ಷರಗಳಿಂದ ಬರೆಯಲಾಗಿದೆ. ಈ ಕುರಿತು ಕುಲಂಕಷವಾಗಿ, ನಾನಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಗೋಲ್ಪಾರ್ ಪೊಲೀಸ್ ವರಿಷ್ಠಾಧಿಕಾರಿ ಅಮಿತಾಬ್ ಸಿನ್ಹಾ ಹೇಳಿದ್ದಾರೆ.