ನಕ್ಸಲ್ ನಿಗ್ರಹಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿರುವ ಆ ಮಾಸ್ಟರ್ ಪ್ಲಾನ್ ಯಾವುದು ಗೊತ್ತಾ?
ದೆಹಲಿ: ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದ ಸ್ಥಿತಿಗತಿಯೇ ಬದಲಾಗುತ್ತಿದೆ. ಒಂದೆಡೆ ವಿಶ್ವದೆಲ್ಲೆಡೆ ಜಾಸ್ತಿಯಾಗುತ್ತಿರುವ ನರೇಂದ್ರ ಮೋದಿ ಅವರ ಖ್ಯಾತಿ. ಮತ್ತೊಂದೆಡೆ ಜಾಗತಿಕವಾಗಿ ಹೆಚ್ಚಾಗುತ್ತಿರುವ ಭಾರತದ ಗೌರವ. ಇದರ ನಡುವೆಯೇ ಬಾಲ ಮುದುರಿಕೊಂಡು ಕುಳಿತಿರುವ ಚೀನಾ, ಪಾಕಿಸ್ತಾನ,
ಹಾಗಂತ ನರೇಂದ್ರ ಮೋದಿ ಅವರು ಬರೀ ಹೊರಗಿನ ದುಷ್ಟಶಕ್ತಿಗಳ ನಿರ್ನಾಮ ಮಾಡಲು ಮುಂದಾಗಿಲ್ಲ. ಹೊರಗಿನವರ ಜತೆಗೆ ದೇಶದ ಒಳಗಿರುವ ಕಸವನ್ನು ಸ್ವಚ್ಛಗೊಳಿಸಲು ಮುಂದಾಗಿದ್ದಾರೆ. ಇದಕ್ಕೆ ತಾಜಾ ತಾಜಾ ಉದಾಹರಣೆ ಎಂದರೆ ಜಮ್ಮುಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳಿಗೆ ಎನ್ಐಎ ಬಿಟ್ಟು ಅವರ ರೆಕ್ಕೆ ಕತ್ತರಿಸಿದ್ದು. ಕಲ್ಲು ತೂರಾಟಗಾರರಿಗೆ ತಕ್ಕ ಪಾಠ ಕಲಿಸಿದ್ದು.
ಇಂತಹ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಈಗ ಮತ್ತೊಂದು ದಿಟ್ಟ ನಿರ್ಧಾರ ಕೈಗೊಂಡಿದ್ದು, ದೇಶದಲ್ಲಿ ತಲೆನೋವಾಗಿರುವ ನಕ್ಸಲರನ್ನು ಮಟ್ಟ ಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದೆ.
ಹೌದು, ದೇಶದಲ್ಲಿ ನಕ್ಸಲರು ಜಾಸ್ತಿ ಇರುವ ಹತ್ತು ರಾಜ್ಯಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಶೀಘ್ರವಾಗಿ ಚಾಲನೆ ನೀಡುವ ಜತೆಗೆ ಅವುಗಳನ್ನು ಮುಗಿಸಬೇಕು ಎಂದು ಆಯಾ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಈ ಕುರಿತು ಕೇಂದ್ರ ಪರಿಸರ ಸಚಿವಾಲಯ ನಕ್ಸಲ್ ಪೀಡಿತ ಹತ್ತು ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಕೂಡಲೇ ಈ ರಾಜ್ಯಗಳಲ್ಲಿ ಕಾಮಗಾರಿ ಮುಗಿಸಬೇಕು ಎಂದು ಸೂಚಿಸಿದ್ದಾರೆ.
ಈ ಯೋಜನೆಗಳು ನಕ್ಸಲರನ್ನು ಮಟ್ಟಹಾಕಲು ಸಹಕಾರಿಯಾಗಲಿದ್ದು, ಎಲ್ಲ ಅರಣ್ಯ ಪ್ರದೇಶಗಳ ಗ್ರಾಮಗಳಿಗೂ ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ, ಟೆಲಿಫೋನ್ ಟವರ್ ಗಳ ಸ್ಥಾಪನೆ ಸೇರಿ ಹಲವು ಕಾಮಗಾರಿಗಳು ಕ್ಷಿಪ್ರವಾಗಿ ಮುಗಿದರೆ, ಇದರಿಂದ ನಕ್ಸಲರನ್ನು ಮಟ್ಟಹಾಕಬಹುದು ಎಂಬುದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ. ರಾಜ್ಯ ಸರ್ಕಾರಗಳೂ ಇದಕ್ಕೆ ಒಪ್ಪಿಗೆ ಸೂಚಿಸಿ ಶೀಘ್ರವಾಗಿ ಕಾಮಗಾರಿ ಮುಗಿಸಿದರೆ ನಕ್ಸಲರ ರೆಕ್ಕೆಪುಕ್ಕ ಕತ್ತರಿಸಿದಂತೆಯೇ ಎಂಬ ಮಾತುಗಳು ಕೇಳಿಬರುತ್ತವೆ. ಕೂಡಲೇ ಹಾಗಾಗಲಿ.
Leave A Reply