ಹಿಂದಿ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ವಿನಾಕಾರಣ ಟೀಕಿಸುವ ಮಲ್ಲಿಕಾರ್ಜುನ ಖರ್ಗೆ ಬೀದರ್ ನಲ್ಲಿ ಮಾಡಿದ್ದೇನು?
ಬೀದರ್: ಸಂಸತ್ತಿನಲ್ಲಿ ಪ್ರತಿಪಕ್ಷದಲ್ಲಿ ಸಹ ಕುಳಿತುಕೊಳ್ಳಲು ಸಾಮರ್ಥ್ಯ ಸಂಪಾದಿಸದ, ದೇಶದ 22 ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡು ಮಾಡಲು ಕೆಲಸವಿಲ್ಲದಂತಾಗಿರುವ ಈ ಕಾಂಗ್ರೆಸ್ ನಾಯಕರು ವಿನಾಕಾರಣ ಕೇಂದ್ರ ಸರ್ಕಾರವನ್ನು ಟೀಕಿಸಲು ಮುಂದಾಗಲುತ್ತಾರೆ. ಅದರಲ್ಲೂ ಕರ್ನಾಟಕದಲ್ಲಂತೂ ಕೇಂದ್ರ ಸರ್ಕಾರವನ್ನು ಟೀಕಿಸುವ ದೊಡ್ಡಪಡೆಯೇ ಕಾಂಗ್ರೆಸ್ಸಿನಲ್ಲಿದೆ.
ಇಂತಹ ಕಾಂಗ್ರೆಸ್ ಇತ್ತೀಚೆಗೆ ಹಿಂದಿ ವಿಷಯದಲ್ಲೂ ರಾಜಕೀಯವನ್ನು ಮಿಶ್ರಣ ಮಾಡುವ ಮೂಲಕ ತಾನು ಎಲ್ಲದರಲ್ಲೂ ರಾಜಕೀಯ ಮಾಡುತ್ತೇನೆ ಎಂಬುದನ್ನು ಸಾಬೀತುಪಡಿಸಿತ್ತು. ಕೇಂದ್ರ ಸರ್ಕಾರ ರಾಜ್ಯದ ಮೇಲೆ ಹಿಂದಿ ಹೇರುತ್ತಿದೆ ಎಂದು ಇದೇ ಸಿದ್ದರಾಮಯ್ಯನವರು ಘೀಳಿಟ್ಟಿದ್ದರು. ಇವರಿಗೆ ಮಲ್ಲಿಕಾರ್ಜುನ ಖರ್ಗೆಯವರೂ ಸಾಥ್ ನೀಡಿದ್ದರು. ಆದರೆ ಹೆಮ್ಮೆಯ ನರೇಂದ್ರ ಮೋದಿ ಅವರು ಮಾತ್ರ ವಿದೇಶದಲ್ಲೂ ಹಿಂದಿ ಮಾತಾಡುವ ಮೂಲಕ ಭಾರತದ ಭಾಷೆಯ ಹಿರಿಮೆಯನ್ನು ಎತ್ತಿಹಿಡಿದಿದ್ದರು.
ಇನ್ನು ಹಿಂದಿ ವಿಷಯದಲ್ಲಿ ಕೇಂದ್ರದ ಮೇಲೆ ಇಷ್ಟೊಂದು ವಿಷ ಕಾರುವ ಕಾಂಗ್ರೆಸ್ ಸಾಚಾತನಕ್ಕೆ ಎಷ್ಟೊಂದು ವಿರುದ್ಧವಾಗಿ ನಡೆದುಕೊಂಡಿದೆ ಎಂಬುದಕ್ಕೆ ಬೀದರ್ ನ ಔರಾದ್ ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಇದೇ ಮಲ್ಲಿಕಾರ್ಜುನ ಖರ್ಗೆ ಮತ್ತು ಈಶ್ವರ್ ಖಂಡ್ರೆ ಹಿಂದಿಯಲ್ಲಿ ಭಾಷಣ ಮಾಡುವ ಮೂಲಕ ಕರ್ನಾಟಕದಲ್ಲೇ ಕನ್ನಡವನ್ನು ಮರೆಮಾಚಿಸಿದ್ದಾರೆ.
ಕನ್ನಡದ ನೆಲದಲ್ಲಿ ಮಾತನಾಡುತ್ತಿದ್ದೇವೆ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ, ದೆಹಲಿಯಿಂದ ಬಂದ ಆ ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಕಾಂಗ್ರೆಸ್ಸಿನ ಈ ಮುಖಂಡರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆ ವ್ಯಕ್ತವಾಗಿವೆ.
ಇದಕ್ಕೆ ಕಾಂಗ್ರೆಸ್ಸಿನವರು ಯಾವ ರೀತಿಯಾದರೂ ಸ್ಪಷ್ಟನೆ ನೀಡಿದರೂ, ಕರ್ನಾಟಕದಲ್ಲಿ, ಅದರಲ್ಲೂ ಹೋಗಲೇ, ಬಾರಲೇ ಎನ್ನುವ ಬೀದರ್ ನಂತಹ ಗಂಡು ಮೆಟ್ಟಿದ ನಾಡಿನಲ್ಲಿ, ಮಲ್ಲಿಕಾರ್ಜುನ ಖರ್ಗೆಯವರು ರಾಹುಲ್ ಗಾಂಧಿಯವರನ್ನು ಮೆಚ್ಚಿಸಲು ಎಂಬ ಒಂದೇ ಕಾರಣಕ್ಕೆ ಕನ್ನಡ ಮರೆತು ಹಿಂದಿಯಲ್ಲಿ ಮಾತನಾಡುವ ಮೂಲಕ ಕನ್ನಡಿಗರನ್ನು ಅವಮಾನಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ದಪ್ಪ ಚರ್ಮದ ಕಾಂಗ್ರೆಸ್ ಧುರೀಣರು ಉತ್ತರಿಸುತ್ತಾರೆಯೇ ಎಂಬುದೇ ಅನುಮಾನ.
Leave A Reply