ಕಾಂಗ್ರೆಸ್ ಗೆ ಬಿಗ್ ಶಾಕ್: ಕೈಗೆ ಮತ ನೀಡದಿರಲು ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನಿರ್ಧಾರ
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಎಲ್ಲ ವರ್ಗಗಳನ್ನು ನಿರ್ಲಕ್ಷಿಸುತ್ತಾ ಬಂದಿರುವುದು ಜಗಜಾಹಿರಾಗಿದೆ. ಇದೀಗ ಕಾಂಗ್ರೆಸ್ ನ ವಿಶೇಷವಾಗಿ ಸಿದ್ದರಾಮಯ್ಯನವರ ಹಿಂದುಳಿದವರ ಏಳಿಗೆಯ ಮಂತ್ರ ಹುಸಿಯಾಗಿದೆ. ಚುನಾವಣೆಯಲ್ಲಿ ತಿರುಗುಬಾಣವಾಗುವ ಲಕ್ಷಣ ಗೋಚರಿಸಿವೆ. ಚುನಾವಣೆಗೆ ಕೆಲವೇ ದಿನಗಳು ಬಾಕಿಯಿರುವಾಗಲೇ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ತಂಡವೊಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಕಾಂಗ್ರೆಸ್ ಸರ್ಕಾರಕ್ಕೆ ಮತ ನೀಡದಿರಲು ನಿರ್ಧರಿಸಿದೆ..
ಶಿರಾ ತಾಲೂಕಿನ ಮಾಗೋಡಿನಲ್ಲಿ ನಡೆದ ಹಿಂದುಳಿದ ವರ್ಗಗಳ ಸ್ವಾಮಿಜೀಗಳ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜ್ಯದಲ್ಲಿ ಹಿಂದುಳಿದವ ಹೆಸರಲ್ಲಿ ಅಧಿಕಾರಕ್ಕೇರಿದ ಸಿಎಂ ನಂತರ ಆ ವರ್ಗವನ್ನೇ ಸಂಪೂರ್ಣ ಮರೆತ್ತಿದ್ದಾರೆ. ಅಹಿಂದ ವರ್ಗಕ್ಕೆ ಕಾಂಗ್ರೆಸ್ ಸರ್ಕಾರದಿಂದ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ, ಸೇವಾಲಾಲ್ ಸ್ವಾಮೀಜಿ, ಮಡಿವಾಳ ಮಾಚಿದೇವ ಶ್ರೀಗಳು ಹಾಗೂ ಸಂಗಣ್ಣ ಬಸವಾನಂದ ಸ್ವಾಮೀಜಿ ಸೇರಿ ಹಲವು ಹಿಂದುಳಿದ ವರ್ಗಗಳ ಸಮಾಜದ ಸ್ವಾಮೀಜಿಗಳು ಕಾಂಗ್ರೆಸ್ ಗೆ ಮತ ನೀಡದಿರಲು ನಿರ್ಧಾರ ಕೈಗೊಂಡಿದ್ದಾರ.
ಸಭೆ ನಡೆಸಿದ ನಂತರ ಎಲ್ಲ ಸ್ವಾಮೀಜಿಗಳು ಪಕ್ಷೇತರ ಅಭ್ಯರ್ಥಿ ಸಿ.ಎಂ. ನಾಗರಾಜು ಪರ ಪ್ರಚಾರ ನಡೆಸಿದ್ದಾರೆ. ಹಿಂದುಳಿದ ವರ್ಗಗಳ ಸ್ವಾಮೀಜಿಗಳ ಈ ನಡೆ ಕಾಂಗ್ರೆಸ್ ಗೆ ಭಾರಿ ಹೊಡೆತ ನೀಡುವ ಎಲ್ಲ ಲಕ್ಷಣಗಳು ಗೋಚರಿಸಿವೆ. ಅಲ್ಲದೇ ಸ್ವಾಮೀಜಿಗಳೇ ಬೀದಿಗಿಳಿದು ಕಾಂಗ್ರೆಸ್ ವಿರುದ್ಧ ಪ್ರಚಾರ ಮಾಡಿದ್ದು, ಕೈಗೆ ಭಾರಿ ಆಘಾತ ಮೂಡಿಸಿದೆ. ಸ್ವಾಮೀಜಿಗಳ ಕಾಂಗ್ರೆಸ್ ವಿರುದ್ಧದ ಈ ಅಭಿಯಾನ ರಾಜ್ಯಾಧ್ಯಂತ ಶೀಘ್ರದಲ್ಲೆ ವಿಸ್ತರಿಸಿದರೂ ಅಚ್ಚರಿಯಿಲ್ಲ.
Leave A Reply