• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಪತ್ರಿಕೆಗಳನ್ನು ಕರಪತ್ರದಂತೆ ಹಂಚುವುದರಿಂದ ಪತ್ರಿಕೆ ಮತ್ತು ಪಕ್ಷದ ನೈತಿಕ ದಿವಾಳಿತನ ಬಯಲಾಗುತ್ತದೆ…

Hanumantha Kamath Posted On May 4, 2018
0


0
Shares
  • Share On Facebook
  • Tweet It

ರಾಜ್ಯ ವಿಧಾನಸಭಾ ಚುನಾವಣೆಗೆ ಹೆಚ್ಚೆಂದರೆ ಒಂದು ವಾರ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಎದುರಾಳಿ ಪಕ್ಷದ ಅಭ್ಯರ್ಥಿಗಳು ಅಧಿಕಾರ ನಡೆಸುವಾಗ ಮಾಡಿದ ಲೋಪಗಳು, ಆಡಳಿತ ವೈಫಲ್ಯ, ಸ್ವಜನ ಪಕ್ಷಪಾತ, ಯೋಜನೆಗಳು ಸಮರ್ಪಕವಾಗಿ ಅನುಷ್ಟಾನ ಮಾಡದೇ ಇರುವುದು ಇದೆಲ್ಲ ಚರ್ಚೆಯಲ್ಲಿ ಇರುತ್ತವೆ. ಇದಕ್ಕೆ ಸೃಷ್ಟೀಕರಣ ಕೊಡುವುದು ಎಲ್ಲಾ ಬೇರೆ ಬೇರೆ ಗ್ರೂಪ್ ಗಳಲ್ಲಿ ನಡೆಯುವುದು ಮಾಮೂಲಿ. ಇದೇ ಹೊತ್ತಿಗೆ ಕೆಲವು ಸಂಜೆ ಪತ್ರಿಕೆಗಳಿಗೆ ಈಗ ಫುಲ್ ಡಿಮ್ಯಾಂಡ್ ಶುರುವಾಗಿದೆ. ಆ ಪತ್ರಿಕೆಗಳನ್ನು ಕೆಲವು ದಿನ ಹೆಚ್ಚು ಪ್ರಿಂಟ್ ಮಾಡಲಾಗುತ್ತದೆ. ಅದರ್ಥ ಆ ದಿನ ತುಂಬಾ ಜನ ಆ ಪತ್ರಿಕೆಯನ್ನು ಕೊಂಡು ಓದುತ್ತಾರೆ ಎಂದಲ್ಲ. ಕೆಲವು ರಾಜಕೀಯ ಪಕ್ಷಗಳ ಕಾರ್ಯಕರ್ತರು ರಖಂವಾಗಿ ಖರೀದಿಸಿ ಅದನ್ನು ಮನೆಮನೆಗೆ ಹಂಚಿ ಬರುತ್ತಾರೆ. ಆ ಮೂಲಕ ಬೆಳಿಗ್ಗೆ ನಿಮ್ಮ ಮನೆಗೆ ಹಾಲು, ಪೇಪರ್ ಹಾಕುವ ಹುಡುಗರು ಬರುತ್ತಾರಲ್ಲ, ಆ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಹಾಲು, ಪೇಪರ್ ಹಾಕುವುದು ತುಂಬಾ ಒಳ್ಳೆಯ ಉದ್ಯೋಗ. ಯಾಕೆಂದರೆ ಅವರು ಹಾಲು, ಪೇಪರ್ ಕೊಟ್ಟ ಕಾರಣ ನಮ್ಮ ದಿನ ಶುರುವಾಗುತ್ತದೆ. ಆದರೆ ಚುನಾವಣೆ ಹತ್ತಿರ ಬರುವಾಗ ಸಡನ್ನಾಗಿ ಕೆಲವು ಪೇಪರ್ ಹಾಕುವ ಹುಡುಗರು ಹುಟ್ಟಿಕೊಳ್ಳುತ್ತಾರೆ. ಅವರು ಸಂಜೆ ಪತ್ರಿಕೆಯನ್ನು ನಿಮ್ಮ ಮನೆ ಬಾಗಿಲಿಗೆ ಹಾಕುತ್ತಾ ಹೋಗುತ್ತಾರೆ. ಈ ಮೂಲಕ ಆಯಾ ಪತ್ರಿಕೆಗಳ ಮೌಲ್ಯ (ಇದ್ದಲ್ಲಿ!) ಕಳೆಯುತ್ತಾ ಹೋಗುತ್ತಾರೆ. ಪತ್ರಿಕೆ ಕರಪತ್ರವಾಗಿ ಹೋಗುತ್ತದೆ.

ಅಷ್ಟಕ್ಕೂ ಆ ಪತ್ರಿಕೆಗಳನ್ನು ಜನ ನಂಬುತ್ತಾರಾ?

ನಂಬಲೇ ಬೇಕೆಂಬ ಹಟ ಪತ್ರಿಕೆಯ ಸಂಪಾದಕರಿಗೆ ಇರುವುದಿಲ್ಲ. ಅವರಿಗೆ ಆವತ್ತು ಆ ಪತ್ರಿಕೆಗಳ ಪ್ರಚಾರ ಹೆಚ್ಚು ಆಯಿತು ಎನ್ನುವ ಖುಷಿಯೂ ಇರುವುದಿಲ್ಲ. ಅವರದ್ದೇನಿದ್ದರೂ ಪ್ಯಾಕೇಜ್ ಮಾತುಕತೆ. ಯಾರ ತೇಜೋವಧೆ ಆದರೂ ಅವರಿಗೆ ಅದರಲ್ಲಿ ಸಂಬಂಧವಿಲ್ಲ. ಆ ಪತ್ರಿಕೆಗಳ ಪ್ರತಿಗಳನ್ನು ಕೆಲವು ರಾಜಕೀಯ ಪಕ್ಷಗಳ ಯುವ ಫುಡಾರಿಗಳು ತಮ್ಮ ಅಭ್ಯರ್ಥಿಯನ್ನು ಖುಷಿ ಪಡಿಸಲು ಮನೆಮನೆಗೆ ಹಂಚಿಕೊಂಡು ಬರುತ್ತಾರೆ. ಒಂದು ವಿಕೃತ ಆನಂದವನ್ನು ಇದರಿಂದ ಪಡೆಯುತ್ತಾರೆ. ಅಷ್ಟಕ್ಕೂ ಆ ಪತ್ರಿಕೆಗಳಲ್ಲಿ ಆ ತೇಜೋವಧೆಯ ಹೆಡ್ಡಿಂಗ್ ಮುಖಪುಟದಲ್ಲಿ ಪ್ರಕಟವಾಗುತ್ತದೆ. ಆ ವಿಷಯ ಇರುವ ಪತ್ರಿಕೆಯನ್ನು ಹಂಚುವುದರಿಂದ ಅಭ್ಯರ್ಥಿಯನ್ನು ಸೋಲಿಸಬಹುದು ಎನ್ನುವ ಲೆಕ್ಕಾಚಾರ ಯುವ ಫುಡಾರಿಗಳದ್ದು. ಅವರಿಗೆ ಗೊತ್ತಿದೆ. ಯಾರೂ ಕೂಡ ಅಂಗಡಿ ತನಕ ಹೋಗಿ ಹಣ ಕೊಟ್ಟು ಆ ಪತ್ರಿಕೆಗಳನ್ನು ಖರೀದಿಸುವುದಿಲ್ಲ. ಈ ವಿಷಯ ತಿಳಿದಿರುವುದರಿಂದ ಇವರೇ ಅವರ ಮನೆ ಬಾಗಿಲಿಗೆ ಹೋಗಿ ಕೊಟ್ಟು ಬರುತ್ತಾರೆ. ಒಳಗಿನ ಪುಟಗಳಲ್ಲಿ ಪ್ರಿಂಟ್ ಮಾಡಿದರೆ ಜನ ಆ ಪತ್ರಿಕೆಯನ್ನು ತಿರುಗಿಸಿಯೂ ನೋಡುವುದಿಲ್ಲ ಎಂದು ಗೊತ್ತಿರುವುದರಿಂದ ಮುಖಪುಟದಲ್ಲಿಯೇ ಪ್ರಿಂಟ್ ಮಾಡಿಸಿರುತ್ತಾರೆ. ಅವರಿಗೆ ತಾವು “ನೀಡಿರುವ” ವಿಷಯ ಯಾವಾಗ ಪ್ರಿಂಟ್ ಆಗುತ್ತೆ ಎನ್ನುವುದು ಮೊದಲೇ ಗೊತ್ತಿರುತ್ತದೆ. ಅದೇ ದಿನ ಪತ್ರಿಕೆಗಳನ್ನು ಹಂಚಲು ಕಾರ್ಯಕರ್ತರನ್ನೇ ರೆಡಿ ಮಾಡಿ ಪತ್ರಿಕೆಗಳು ಮನೆ ಬಾಗಿಲಿಗೆ ಮುಟ್ಟುವಂತೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಏನಾಗುತ್ತೆ ಎಂದರೆ ಮತದಾರರಿಗೆ ತಾವು ಯಾರಿಗೆ ವೋಟ್ ಹಾಕಬೇಕೆಂದು ನಿರ್ಧರಿಸಿದ್ದೆವೊ ಅವರ ಬಗ್ಗೆ ಗೊಂದಲ ಮೂಡಿಸುವಲ್ಲಿ ಈ ಪಕ್ಷ ಯಶಸ್ವಿಯಾಗುತ್ತದೆ.

ಇಂತಹ ಗೆಲುವು ಬೇಕಾ?

ಈಗ ನಾನು ಕೇಳುವುದು ಏನೆಂದರೆ ಹೀಗೆ ಮಾಡಿ ಒಂದು ವೇಳೆ ಜಯಗಳಿಸಿದರೂ ಅದರಿಂದ ಆತ್ಮತೃಪ್ತಿ ಸಿಗುತ್ತದಾ? ಅದರಿಂದ ಗೆಲುವು ಸಿಕ್ಕಿದರೂ ಸಮಾಧಾನ ಆಗುತ್ತಾ? ಇವತ್ತು ಹೀಗೆ ಮಾಡುತ್ತಿದ್ದ ಕೈ ಪಕ್ಷವೊಂದರ ಯುವ ಕಾರ್ಯಕರ್ತರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿರುವ ಸುದ್ದಿ ವರದಿಯಾಗಿದೆ. ಇದು ಆ ಪಕ್ಷದ ನೈತಿಕ ದಿವಾಳಿತನ ಎನ್ನದೇ ವಿಧಿಯಿಲ್ಲ. ಸೋಲುವುದಕ್ಕೆ ಹೆದರುವವರು ಮತ್ತು ಹೇಗಾದರೂ ಮಾಡಿ ಗೆಲ್ಲಲೇಬೇಕೆಂದು ನಿರ್ಧರಿಸಿದವರು ಹೀಗೆ ಅಡ್ಡದಾರಿ ಹಿಡಿಯುತ್ತಾರೆ. ಅವರು ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದರೆ ಇಂತಹ ಕೆಲಸಗಳನ್ನು ಮಾಡುವ ಅಗತ್ಯ ಇರುವುದಿಲ್ಲ. ತಮ್ಮ ಕೆಲಸದ ಬಗ್ಗೆ ನಂಬಿಕೆ ಇಲ್ಲದವರು ಇಂತಹ ಕೆಲಸಕ್ಕೆ ಕೈ ಹಾಕುತ್ತಾರೆ. ಇದರೊಂದಿಗೆ ಇಂತಹ ವಿಷಯಗಳನ್ನು ಅಭ್ಯರ್ಥಿಯ ತೇಜೋವಧೆ ಮಾಡಲೆಂದೇ ಹಣ ತೆಗೆದುಕೊಂಡು ಪ್ರಕಟಿಸುವವರು ತಾವು ಪತ್ರಿಕೆಯ ಹೆಸರಿನಲ್ಲಿ ಕರಪತ್ರದ ಉದ್ಯಮ ಮಾಡುತ್ತಿದ್ದೇವೆ ಎಂದು ಒಪ್ಪಿಕೊಂಡಂತೆ ಆಗುತ್ತದೆ. ಮೂರು ಕೊಟ್ಟರೆ ನಿಮ್ಮ ಕಡೆ, ಆರು ಕಡೆ ಅವರ ಕಡೆ ಎಂದು ಹೊರಡುವ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇಯ ಅಂಗವೆನಿಸಿಕೊಂಡಿರುವ ಮಾಧ್ಯಮಗಳ ಹೆಸರನ್ನು ಹಾಳು ಮಾಡುತ್ತಿವೆ. ವೈಯಕ್ತಿಕ ವಿಷಯಗಳನ್ನು ಸುಳ್ಳಿನ ಹೊದಿಕೆ ಹಾಕಿ ರಸವತ್ತಾದ ಹೆಡ್ಡಿಂಗ್ ಕೊಟ್ಟು ಮಂಗಗಳ ಕೈಯಲ್ಲಿ ಕೊಡುವುದರಿಂದ ಅವು ಅದನ್ನೇ ಮಾಣಿಕ್ಯ ಎಂದು ಅಂದುಕೊಳ್ಳುತ್ತವೆ ಮತ್ತು ಹಂಚುತ್ತವೆ ಮತ್ತು ಸಿಕ್ಕಿಬೀಳುತ್ತವೆ!!

0
Shares
  • Share On Facebook
  • Tweet It


- Advertisement -
Fake news


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search