ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದ ಆರೋಪ ಹೊತ್ತಿರುವ ತೌಹಿದ್ ಖಾನ್ ವಿರುದ್ಧ ಏಕೆ ಪ್ರತಿಭಟನೆ ಇಲ್ಲ?
ಭೋಪಾಲ್: ದೇಶದಲ್ಲಿ ಇಬ್ಬಂದಿತನದ ಪರಾಕಾಷ್ಠೆ ನಡೆಯುತ್ತಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಲಭ್ಯವಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಉನ್ನಾವೋ ಹಾಗೂ ಜಮ್ಮುಕಾಶ್ಮೀರದ ಕಠುವಾದಲ್ಲಿ ಬಾಲಕಿಯರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಲಾಯಿತು. ಇಡೀ ಹಿಂದೂ ಧರ್ಮವನ್ನು, ಹಿಂದೂಗಳನ್ನು ಕಟಕಟೆಗೆ ತಂದು ನಿಲ್ಲಿಸಲಾಯಿತು. ಏಕೆಂದರೆ ಅತ್ಯಾಚಾರ ಆರೋಪಿಗಳೆಲ್ಲರೂ ಹಿಂದೂಗಳೇ!
ಆದರೆ ಮಧ್ಯಪ್ರದೇಶದ ರಾಜನಗರ ಎಂಬಲ್ಲಿ ಏಪ್ರಿಲ್ 19ರಂದೇ ಕೇವಲ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಆದರೂ ದೇಶದ ಯಾವ ಮೂಲೆಯಲ್ಲೂ ಪ್ರತಿಭಟನೆ ಮಾಡಿಲ್ಲ. ಯಾರೂ ಅತ್ಯಾಚಾರಿಯನ್ನು ಗಲ್ಲಿಗೇರಿಸಿ, ಸಾರ್ವಜನಿಕವಾಗಿ ಕಲ್ಲಿನಿಂದ ಒಡೆದು ಸಾಯಿಸಿ ಎಂಬ ಕೂಗು ಎದ್ದಿಲ್ಲ. ಏಕೆಂದರೆ ಅತ್ಯಾಚಾರದ ಆರೋಪ ಹೊಂದಿದ ಆರೋಪಿ ಮುಸ್ಲಿಂ. ಹೆಸರು ತೌಹಿದ್ ಖಾನ್.
ಹೌದು, ರಾಜನಗರದ ಪ್ರಸಿದ್ಧ ಖಾಜುರಾಹೋ ದೇವಾಲಯದಿಂದ ಕೇವಲ ಐದು ಕಿಲೋಮೀಟರ್ ದೂರದಲ್ಲಿರುವ ಸ್ಥಳದಲ್ಲಿ ತೌಹಿದ್ ಖಾನ್ ಮೂರು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಕಿಯ ಗುಪ್ತಾಂಗದಿಂದ ರಕ್ತ ಬರುವುದನ್ನು ಕಂಡ ತಾಯಿ, ವೈದ್ಯಕೀಯ ತಪಾಸಣೆ ಬಳಿಕ ಬಾಲಕಿ ಮೇಲೆ ಅತ್ಯಾಚಾರ ಎಸಗಿರುವುದು ತಿಳಿದುಬಂದಿದೆ.
ಕೊನೆಗೆ ಬಾಲಕಿಯ ತಾಯಿ ಸಲ್ಲಿಸಿರುವ ದೂರಿನ ಅನ್ವಯ ತೌಹಿದ್ ಖಾನ್ ನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ ಅನ್ವಯ 376, 450 ಹಾಗೂ ಪೋಕ್ಸೋ ಕಾಯಿದೆಯ ¾ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಒಂದಿಡೀ ಪ್ರಕರಣದಲ್ಲಿ ಎಳೆಯ ಕಂದಮ್ಮನ ಮೇಲೆ ಈತನೇ ಅತ್ಯಾಚಾರ ಎಸಗಿರುವ ಕುರಿತು ಮೇಲ್ನೋಟಕ್ಕೆ ಕಂಡು ಬಂದಿದೆ. ಹಿಂದೂ ದೇವಾಲಯದ ಸನಿಹದಲ್ಲೇ ಅತ್ಯಾಚಾರ ಎಸಗಲಾಗಿದೆ. ಇಷ್ಟಾದರೂ ಮೂರು ವರ್ಷದ ಬಾಲಕಿ ಪರ ಯಾವುದೇ ರಾಹುಲ್ ಗಾಂಧಿ, ಪ್ರಗತಿಪರರು, ಜೀವಪರರು, ಪ್ರಕಾಶ್ ರೈಗಳು ಧ್ವನಿ ಎತ್ತಿಲ್ಲವಲ್ಲ, ಇದಕ್ಕಿಂತ ಇಬ್ಬಂದಿತನ ಬೇಕೆ?
Leave A Reply