ಮೋದಿ ನಿರೀಕ್ಷೆಗಿಂತ ಭಾರತದ ವಿದ್ಯುತ್ತೀಕರಣ ಉತ್ತಮವಾಗಿದೆ: ವಿಶ್ವಬ್ಯಾಂಕ್ ಶ್ಲಾಘನೆ
ವಾಷಿಂಗಟನ್: ದೇಶಕ್ಕೆ ಸ್ವಾತಂತ್ರ್ಯ ದೊರೆತು 70 ವರ್ಷಗಳಾದರೂ ವಿದ್ಯುತ್ ದೊರೆಯದ ಸಾವಿರಾರು ಹಳ್ಳಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ವಿದ್ಯುತ್ ದೊರಕಿಸಿ, ಘೋಷಣೆ ಮಾಡಿದ್ದರು. ಕೇಂದ್ರ ಸರ್ಕಾರದ ಈ ಸಾಧನೆಗೆ ಇಡೀ ಭಾರತ ಶ್ಲಾಘನೆ ವ್ಯಕ್ತಪಡಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶಕ್ಕೆ ವಿದ್ಯುತ್ ದೊರೆತಿರುವ ಘೋಷಣೆ ಮಾಡಿ, ಪ್ರತಿ ಮನೆಗಳಿಗೆ ಬೆಳಕು ನೀಡಲಾಗುವುದು ಎಂದು ಹೇಳಿದ್ದರು. ಇದೀಗ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಈ ಸಾಧನೆಗೆ ವಿಶ್ವಬ್ಯಾಂಕ್ ಶ್ಲಾಘನೆ ವ್ಯಕ್ತಪಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಶೈಲಿಯಿಂದ ವಿದ್ಯುತ್ ಪೂರೈಕೆಯಲ್ಲಿ ಭಾರತ ನಿರೀಕ್ಷೆಗಿಂದ ಉತ್ತಮ ಸಾಧನೆ ಮಾಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನೀಡಿರುವ ದಾಖಲೆಗಳಿಗಿಂತ ಭಾರತದ ವಿದ್ಯುತ್ ವ್ಯವಸ್ಥೆ ಉತ್ತಮ ಗುಣಮಟ್ಟ ತಲುಪಿದೆ.
ಪ್ರಸ್ತುತ ಭಾರತದ ಶೇ.80 ರಷ್ಟು ಜನರಿಗೆ ವಿದ್ಯುತ್ ಸೌಕರ್ಯ ದೊರಕಿದೆ ಎಂದು ಸರ್ಕಾರ ಹೇಳಿದೆ. ಆದರೆ ಭಾರತ ವಿದ್ಯುತ್ ಪೂರೈಕೆಯಲ್ಲಿ ಭಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಶೀಘ್ರದಲ್ಲಿ ಭಾರತದಲ್ಲಿ ವಿದ್ಯುತ್ ಸೌಕರ್ಯ ಹೊಂದಿದವರ ಸಂಖ್ಯೆ ಶೇ.85 ರಷ್ಟು ತಲುಪಿದೆ. ಭಾರತ 2030ರ ವೇಳೆಗೆ ಇಡೀ ದೇಶಾಧ್ಯಂತ ವಿದ್ಯುತ್ ಹೊಂದಿದ ದೇಶವಾಗಲಿದೆ ಎಂದು ಹೇಳಿದೆ.
Leave A Reply