ದುರ್ಗದಲ್ಲಿ ಮೋದಿ ಅಲೆ, ಒಬವ್ವ, ನಾಯಕರನ್ನು ಮರೆತ ಸಿದ್ದ ಸರ್ಕಾರದ ವಿರುದ್ಧ ಛಾಟಿ
ಚಿತ್ರದುರ್ಗ: ಹಿಂದೂಗಳ ಮಾರಣ ಹೋಮ ನಡೆಸಿದ ಟಿಪ್ಪು ಸುಲ್ತಾನನ್ನು ಆರಾಧಿಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಛಾಟಿ ಬೀಸಿದ್ದು, ಕಾಂಗ್ರೆಸ್ ಒನಕೆ ಒಬವ್ವ, ವೀರ ಮದಕರಿ ನಾಯಕರನ್ನು ಮರೆತು, ರಾಜ್ಯದ ಹಿತಾಸಕ್ತಿ ಬದಿಗೊತ್ತಿ. ಕೇವಲ ಚುನಾವಣೆಗಾಗಿ ಸುಲ್ತಾನರ ಜಯಂತಿ ಆಚರಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಛಾಟಿ ಬೀಸಿದ್ದಾರೆ.
ಚಿತ್ರದುರ್ಗದಲ್ಲಿ ನಡೆದ ಬೃಹತ್ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಮೋದಿ, ದಲಿತ, ಕೆಳ ವರ್ಗದ ವೀರ ವನಿತೆ ಒನಕೆ ಒಬವ್ವರನ್ನು ಕಾಂಗ್ರೆಸ್ ಸರ್ಕಾರ ಅವಮಾನ ಮಾಡಿದೆ. ವೋಟಿಗಾಗಿ ಜನರನ್ನು, ಸಮಾಜವನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇತಿಹಾಸವನ್ನು ತಿರುಚಿ, ಸುಲ್ತಾನರಿಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟ ಕಟ್ಟುತ್ತಿದೆ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರ ಚಿತ್ರದುರ್ಗದ ಜನರ ಭಾವನೆಗಳೊಂದಿಗೆ ಆಟವಾಡಿದೆ. ನಮ್ಮ ಹೋರಾಟಗಾರರನ್ನು ಅವಮಾನಿಸಿದೆ. ಆದ್ದರಿಂದ ಈ ಸರ್ಕಾರಕ್ಕೆ ನಾವು ತಕ್ಕ ಪಾಠ ಕಲಿಸಬೇಕು. ರಾಜ್ಯದ ಜನರಿಗೆ ವಿಶ್ವಾಸಘಾತ ಉಂಟು ಮಾಡಿದೆ. ಇಂತಹ ವಿಭಜನಕಾರಿ ಶಕ್ತಿಗಳನ್ನು ಅಧಿಕಾರದಿಂದ ದೂರವಿಡಬೇಕು ಎಂದು ಮೋದಿ ಮನವಿ ಮಾಡಿದರು.
Leave A Reply