ಚೀನಾ, ಅಮೆರಿಕಕ್ಕಿಂತ ವೇಗ ಪಡೆಯಲಿದೆ ಭಾರತ ಆರ್ಥಿಕ ಸ್ಥಿತಿ: ಹಾರ್ವರ್ಡ್ ವಿವಿ
ನ್ಯೂಯಾರ್ಕ್: ಭಾರತ ಭವಿಷ್ಯದ ದಶಕಗಳಲ್ಲಿ ಆರ್ಥಿಕ ಸ್ಥಿತಿಯ ವೇಗ ತೀವ್ರವಾಗಲಿದೆ. ಇಡೀ ವಿಶ್ವದಲ್ಲೇ ಭಾರತ ಆರ್ಥಿಕ ಸ್ಥಿತಿ ತೀವ್ರ ವೇಗ ಪಡೆಯಲಿದೆ. ಭಾರತ ಆರ್ಥಿಕ ವೇಗ ಚೀನಾ ಮತ್ತು ಅಮೆರಿಕಕ್ಕಿಂತಲು ಹೆಚ್ಚು ವೇಗವಾಗಿ ಅಭಿವೃದ್ಧಿ ಹೊಂದಲಿದೆ ಎಂದು ನ್ಯೂಯಾರ್ಕ್ ನ ಹಾರ್ವರ್ಡ್ ವಿವಿ ಶ್ಲಾಘನೆ ವ್ಯಕ್ತಪಡಿಸಿದೆ.
ಹಾರ್ವರ್ಡ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಅಭಿವೃದ್ಧಿ ಕೇಂದ್ರದ ಈ ಚೇತೋಹಾರಿ ವಿಷಯ ಹೊರಹಾಕಿದೆ. ಆರ್ಥಿಕ ನೀತಿಗಳಲ್ಲಿ ಗುಣಮಟ್ಟದ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಕಲ್ಪನೆ ನೀಡುತ್ತಿರುವ ಭಾರತದ ಆರ್ಥಿಕ ವೇಗ ಮುಂದಿನ ದಶಕಗಳಲ್ಲಿ ತೀವ್ರವಾಗಲಿದೆ. ಈ ಸಾಲಿನಲ್ಲಿ ವಿಯೇಟ್ನಾಂ ಕೂಡ ಉತ್ತಮ ಆರ್ಥಿಕ ನಿರ್ಧಾರಗಳ ಮೂಲಕ ಸುಸ್ಥಿರ ಸ್ಥಿತಿ ಕಾಯ್ದುಕೊಂಡಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದೆ.
ಪ್ರಸ್ತುತ ಸರ್ಕಾರದ ನಿರ್ಧಾರಗಳು ಭವಿಷ್ಯಕ್ಕೆ ಪೂರಕ: ಭಾರತ ಆರ್ಥಿಕ ಅಭಿವೃದ್ಧಿ ಹೆಚ್ಚಳವಾಗುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿದ್ದು, ಪ್ರಸ್ತುತ 7.9 ಆರ್ಥಿಕ ಸ್ಥಿತಿ ಹೊಂದಿದೆ. ಭಾರತದ ಸರ್ಕಾರ ಕೈಗೊಳ್ಳುತ್ತಿರುವ ನೂತನ ನಿಯಮಗಳು ಆರ್ಥಿಕ ಸ್ಥಿತಿಯ ಸುಧಾರಣಗೆ ಅನುಕೂಲ ಕಲ್ಪಿಸಲಿವೆ. ಅಲ್ಲದೇ ಭಾರತದಲ್ಲಿ ಕೆಮಿಕಲ್, ವಾಹನಗಳು, ಎಲೆಕ್ಟ್ರಿಷಿಯನ್ ಸೇರಿ ನಾನಾ ವಿಭಾಗಗಳ ಸುಧಾರಣೆ ಆರ್ಥಿಕ ಸುಧಾರಣಗೆ ಭಾರಿ ಕೊಡುಗೆ ನೀಡಲಿವೆ. ಪ್ರಸ್ತುತ ಕೈಗೊಳ್ಳುತ್ತಿರುವ ನಿರ್ಧಾರಗಳು ಮುಂದಿನ ದಶಕಗಳಲ್ಲಿ ಭಾರತದ ಆರ್ಥಿಕ ಸುಧಾರಣೆಗೆ ಮುನ್ನುಡಿ ಬರೆಯಲಿವೆ ಎಂದು ತಿಳಿಸಿದೆ.
Leave A Reply