ಚುನಾವಣೆಗೆ ನಿಂತಿರುವ ಕಾಂಗ್ರೆಸ್ ಅಭ್ಯರ್ಥಿಗಳಲ್ಲಿ ಎಷ್ಟು ಜನ ಕೇಸ್ ಎದುರಿಸುತ್ತಿದ್ದಾರೆ ಗೊತ್ತಾ?
ಬೆಂಗಳೂರು: ಆಡಳಿತ ವಿರೋಧಿ ಅಲೆಯಿದ್ದರೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶತಾಯ-ಗತಾಯ ಗೆಲುವು ಸಾಧಿಸಲೇಬೇಕು ಎಂದು ಶಪಥಗೈದಂತಿರುವ ಕಾಂಗ್ರೆಸ್, ಅದೇ ಭರದಲ್ಲಿ ಅಪರಾಧ ಹಿನ್ನೆಲೆಯುಳ್ಳವರಿಗೂ ಟಿಕೆಟ್ ನೀಡಿದೆ ಎಂಬುದಕ್ಕೆ ಮಹತ್ತರ ಅಂಶವೊಂದು ಬಹಿರಂಗವಾಗಿದ್ದು, ಕಾಂಗ್ರೆಸ್ಸಿನ ಗೂಂಡಾ ಸಂಸ್ಕೃತಿಗೆ ಇದು ಕನ್ನಡಿ ಹಿಡಿದಂತಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಹೌದು, ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಎಂಬ ಸಂಸ್ಥೆ ಈ ಕುರಿತು ಅಧ್ಯಯನ ವರದಿ ಬಿಡುಗಡೆ ಮಾಡಿದ್ದು, ಕಾಂಗ್ರೆಸ್ಸಿನ 220 ಅಭ್ಯರ್ಥಿಗಳಲ್ಲಿ ಶೇ.94ರಷ್ಟು ಅಭ್ಯರ್ಥಿಗಳು 207 ಅಭ್ಯರ್ಥಿಗಳು ಕೋಟ್ಯಧೀಶರು ಎಂದು ತಿಳಿದುಬಂದಿದ್ದು, ಸಮಾಜವಾದಿ ಮುಖ್ಯಮಂತ್ರಿಯವರ ಪಕ್ಷದಲ್ಲಿ ಇಷ್ಟೊಂದು ಕೋಟ್ಯಧೀಶರಿಗೆ ಟಿಕೆಟ್ ನೀಡಲಾಗಿದೆಯಾ ಎಂಬ ಅಚ್ಚರಿ ಕಾಡುತ್ತಿದೆ.
ಅಷ್ಟೇ ಅಲ್ಲ, ವರದಿ ಪ್ರಕಾರ ಈ 220 ಅಭ್ಯರ್ಥಿಗಳಲ್ಲಿ 59 ಅಭ್ಯರ್ಥಿಗಳು, ಅಂದರೆ ಶೇ.27ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ. ಇದರಲ್ಲೇ 32 ಅಭ್ಯರ್ಥಿಗಳು, ಅಂದರೆ ಶೇ.15ರಷ್ಟು ಜನ ಗಂಭೀರ ಅಪರಾಧ ಪ್ರಕರಣ ಎದುರಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ವ್ಯಕ್ತಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದ ಮೊಹಮ್ಮದ್ ನಲಪಾಡ್ ಹ್ಯಾರಿಸ್ ತಂದ ಎನ್.ಎ.ಹ್ಯಾರಿಸ್ ಅವರಿಗೂ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ತಾನು ಕ್ರಿಮಿನಲ್ ಕೇಸು ಎದುರಿಸುತ್ತಿರುವ ಅಭ್ಯರ್ಥಿಗಳಿಗೂ ಟಿಕೆಟ್ ನೀಡುವೆ ಎಂಬುದನ್ನು ಸಾಬೀತುಪಡಿಸಿತ್ತು. ಈಗ ಸುಮಾರು 57 ಜನ ಪ್ರಕರಣ ಎದುರಿಸುತ್ತಿದ್ದು, ಅವರಿಗೂ ಟಿಕೆಟ್ ನೀಡುವ ಮೂಲಕ ಅಚ್ಚರಿ ಮೂಡಿಸಿದೆ.
Leave A Reply