ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ಕಟ್ಟಿದ ಸಿಪಿಎಂ, ಕಾಂಗ್ರೆಸ್ಸಿಗೆ ಬಿಜೆಪಿ ಸರ್ಕಾರ ಹೇಗೆ ತಪರಾಕಿ ನೀಡಿದೆ ನೋಡಿ!
ಅಗರ್ತಲಾ: ತ್ರಿಪುರಾದಲ್ಲಿ ದಶಕಗಳ ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಈಗ ದೇಶದ ಗಮನ ಸೆಳೆಯುತ್ತಿದೆ. ಎರಡು ದಿನದ ಹಿಂದಷ್ಟೇ ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಮರು ನಮಾಜ್ ಮಾಡುವ ಹಾಗಿಲ್ಲ ಎಂದು ಸೂಚಿಸುವ ಮೂಲಕ ಶಾಂತಿ-ಸುವ್ಯವಸ್ಥೆ ಕಾಪಾಡಲು ಮುಂದಾಗಿದ್ದ ರಾಜ್ಯ ಸರ್ಕಾರ ಈಗ ಮತ್ತೊಂದು ಮಹತ್ತರ ನಿರ್ಧಾರ ಘೋಷಿಸಿದೆ.
ಹೌದು, ರಾಜ್ಯಾದ್ಯಂತ ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ಕಟ್ಟುವ ಮೂಲಕ ದರ್ಪ ಮೆರೆದಿದ್ದ ಭಾರತೀಯ ಕಮ್ಯುನಿಸ್ಟ್ ಪಾರ್ಟಿ ಹಾಗೂ ಕಾಂಗ್ರೆಸ್ಸಿಗೆ ಬಿಜೆಪಿ ಸರಿಯಾಗಿಯೇ ತಪರಾಕಿ ನೀಡಿದೆ.
ರಾಜ್ಯಾದ್ಯಂತ ಸಿಪಿಎಂ ಹಾಗೂ ಕಾಂಗ್ರೆಸ್ ಪಕ್ಷಗಳು ಸರ್ಕಾರಿ ಜಾಗದಲ್ಲಿ ಸುಮಾರು ನೂರು ಕಚೇರಿ ಕಟ್ಟಿವೆ. ಇವುಗಳನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ಸರ್ಕಾರವೇ ಈ ಕಾರ್ಯ ಮಾಡಬೇಕಾಗುತ್ತದೆ ಎಂದು ಬಿಪ್ಲಬ್ ಕುಮಾರ್ ನೇತೃತ್ವದ ಸರ್ಕಾರ ಸೂಚನೆ ನೀಡಿದೆ.
ಅಗರ್ತಲಾದ ಹಳೆ ಮೋಟಾರ್ ಸ್ಟಾಂಡ್ ಬಳಿ ನಿರ್ಮಿಸಿದ್ದ ಹಲವು ಪಕ್ಷಗಳ ಕಚೇರಿಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ, ಕೂಡಲೇ ಪಕ್ಷಗಳೇ ಕಚೇರಿ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ಬುಲ್ಡೋಜರ್ ಹರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಆದರೆ ಇದಕ್ಕೆ ಸಿಪಿಎಂ ಹಾಗೂ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿವೆ. ಆದರೂ ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ಕಟ್ಟಿರುವ ಕುರಿತು ಸಿಪಿಎಂ ರಾಜ್ಯ ಕಾರ್ಯದರ್ಶಿ ಬಿಜನ್ ಧರ್ ಒಪ್ಪಿಕೊಂದ್ದಾರೆ. ಆದರೆ, ರಾಜ್ಯ ಸರ್ಕಾರ ರಾಜಕೀಯ ದ್ವೇಷದಿಂದ ಹೀಗೆ ಮಾಡುತ್ತಿದೆ ಎಂದು ಧರ್ ಆರೋಪಿಸಿದ್ದಾರೆ.
ಅಲ್ಲ, ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ನಿರ್ಮಿಸುವ ಕುರಿತು ಸ್ವತಃ ಸಿಪಿಎಂ ಮುಖಂಡರೇ ಒಪ್ಪಿಕೊಂಡಿದ್ದಾರೆ. ಕಾನೂನಿ ಪ್ರಕಾರ ಹೀಗೆ ಮಾಡುವುದು ತಪ್ಪು ಎಂಬುದು ಗೊತ್ತಿದ್ದರೂ ಕಟ್ಟಡ ನಿರ್ಮಿಸಿ, ಈಗ ತೆರವುಗೊಳಿಸಿ ಎಂದು ಸರ್ಕಾರ ನ್ಯಾಯಯುತವಾಗಿ ನಡೆದುಕೊಂಡರೂ, ಇದನ್ನು ರಾಜಕೀಯ ಪ್ರೇರಿತ ಕ್ರಮ ಎನ್ನುವ ಇವರಿಗೆ ಏನೆನ್ನಬೇಕು?
Leave A Reply