ನಮ್ಮ ವಿರುದ್ಧ ಬರೆದರೇ ಹುಷಾರ್!: ವರದಿಗಾರನ ಮೇಲೆ ಸಚಿವ ತನ್ವೀರ್ ಸೇಠ ಬೆಂಬಲಿಗರ ಹಲ್ಲೆ

ಮೈಸೂರು: ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ನಿರಂತರವಾಗಿ ಅಧಿಕಾರಿಗಳ ಮೇಲೆ ಕಿರುಕುಳ ನೀಡುವುದು ಸೇರಿ ನಾನಾ ಅನಾಚಾರಗಳನ್ನು ನಡೆಸಿದ ಸಿದ್ರಾಮಯ್ಯ ಸರ್ಕಾರದ ಸಚಿವರು, ಅವರ ಬೆಂಬಲಿಗರು ಚುನಾವಣೆಯ ಹೊತ್ತಲ್ಲಿ ಮತ್ತೊಮ್ಮೆ ಎಡವಿದ್ದು, ಈ ಬಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋಧ್ಯಮದ ಮೇಲೆಯೇ ದಾಳಿ ಮಾಡಿದ್ದಾರೆ. ಮೈಸೂರಿನಲ್ಲಿ ಸಚಿವ ತನ್ವೀರ್ ಸೇಠ ಬೆಂಬಲಿಗರು ವರದಿಗಾರಿಕೆಗೆ ತೆರಳಿದ್ದ ಆಂಗ್ಲ ಪತ್ರಿಕೆಯ ವರದಿಗಾರನ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆ ಒಡ್ಡಿ ಮನೆಯೊಂದರಲ್ಲಿ ಕೂಡಿ ಹಾಕಿ ಧರ್ಪ ಮೆರೆದಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ತನ್ವೀರ್ ಸೇಠ್ ಸೋಮವಾರ ಬೆಳಗ್ಗೆ ಎನ್.ಆರ್ ಕ್ಷೇತ್ರದ ಗಾಯತ್ರಿಪುರಂ ಬಡಾವಣೆಯಲ್ಲಿ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಈ ಸುದ್ದಿಯನ್ನು ವರದಿ ಮಾಡಲು ತೆರಳಿದ್ದ ವರದಿಗಾರ ಶಿವೇಂದ್ರ ಅರಸ್ ಅವರನ್ನು ತನ್ವೀರ್ ಸೇಠ ಬೆಂಬಲಿಗರು ತಡೆ ಹಿಡಿದಿದ್ದಾರೆ. ವಿಚಾರಣೆ ಆರಂಭಿಸಿದ್ದಾರೆ. ಶಿವೇಂದ್ರ ತಮ್ಮ ಪರಿಚಯ ಹೇಳಿಕೊಂಡರೂ ನಂಬದ ಕಾಂಗ್ರೆಸ್ ಕಾರ್ಯಕರ್ತರು ಶಿವೇಂದ್ರ ಅವರ ಹತ್ತಿರವಿದ್ದ ಪೆನ್ ಮತ್ತು ಪುಸ್ತಕ ಕಿತ್ತುಕೊಂಡು ಸ್ಥಳದಿಂದ ತೆರಳಲು ಬಿಡದೇ, ತಡೆದಿದ್ದಾರೆ.
ಶಿವೇಂದ್ರ ಹತ್ತಿರವಿರುವ ಫೋನ್ ಕಿತ್ತುಕೊಂಡು, ಹಲ್ಲೆ ನಡೆಸಿದ್ದಾರೆ. ಅಲ್ಲದೇ ಬಲವಂತವಾಗಿ ಮನೆಯೊಳಗೆ ಕೂಡಿ ಹಾಕಿದ್ದಾರೆ. ಈ ಮಾಹಿತಿ ತಿಳಿದ ಸಚಿವ ತನ್ವೀರ್ ಸೇಠ್ ನಮ್ಮ ವಿರುದ್ಧ ಬರೆದರೇ ಸುಮ್ಮನೇ ಇರುವುದಿಲ್ಲ ಎಂದು ಧಮ್ಕಿ ಹಾಕಿ, ನಂತರ ಬಿಡುಗಡೆ ಮಾಡಿದ್ದಾರೆ. ವರದಿಗಾರನ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಒಡ್ಡಿ, ಗುಂಡಾಗಿರಿ ಪ್ರದರ್ಶಿಸಿರುವ ಸಚಿವ ತನ್ವೀರ್ ಸೇಠ ವಿರುದ್ಧ ದೂರು ದಾಖಲಿಸಲಾಗಿದೆ.
Leave A Reply