ಜಿನ್ನಾನನ್ನು ಬೆಂಬಲಿಸುವ ಮುಸ್ಲಿಮರ ವಿರುದ್ಧ ಫತ್ವಾ ಹೊರಡಿಸಿದ ಮೌಲ್ವಿ
ದೆಹಲಿ: ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ದೇಶ ವಿಭಜನೆಯ ರೂವಾರಿ ಮಹಮ್ಮದ ಅಲಿ ಜಿನ್ನಾ ಭಾವಚಿತ್ರ ಅಳವಡಿಸಿರುವ ವಿವಾದ ತೀವ್ರವಾಗಿದ್ದು, ದಿನಕ್ಕೊಂದು ರೂಪ ಪಡೆಯುತ್ತಿದೆ. ಜಿನ್ನಾ ಭಾವಚಿತ್ರವನ್ನು ತೆಗೆದು ಹಾಕಬೇಕು ಎಂದು ಆಗ್ರಹಿಸಿ ಹಿಂದೂ ಪರ, ರಾಷ್ಟ್ರಭಕ್ತ ದೇಶಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕೆಲವು ಮುಸ್ಲಿಂ ಸಂಘಟನೆಗಳು ದೇಶವಿರೋಧಿ ಜಿನ್ನಾ ಭಾವಚಿತ್ರ ಇರಲಿ ಎಂದು ಆಗ್ರಹಿಸಿದ್ದವು. ಇದಕ್ಕೆ ಪರ ವಿರೋಧ ಪ್ರತಿಕ್ರಿಯೆ ಬಂದಿದ್ದವು. ಇದೀಗ ದೇಶ ವಿಭಜಕ ಜಿನ್ನಾ ವಿರುದ್ಧ ಮುಸ್ಲಿಮರೆ ತಿರುಗಿಬಿದ್ದಿದ್ದು, ಜಿನ್ನಾನನ್ನು ಸಮರ್ಥಿಸುವವರ ವಿರುದ್ಧ ಮುಸ್ಲಿಂ ಮೌಲ್ವಿಯೊಬ್ಬರು ಫತ್ವಾ ಹೊರಡಿಸುವ ಮೂಲಕ, ದೇಶ ವಿರೋಧಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ.
ಬರೆಲಿಯ ಅಲಾ ಹಜರತ್ ದರ್ಗಾದ ಮೌಲ್ವಿ ಜಿನ್ನಾ ಬೆಂಬಲಿಸುವವರ ವಿರುದ್ಧ ಫತ್ವಾ ಹೊರಡಿಸಿದ್ದಾರೆ. ಭಾರತದ ಯಾವುದೇ ಮುಸ್ಲಿಮರು ಮಹಮ್ಮದ ಅಲಿ ಜಿನ್ನಾರನ್ನು ಬೆಂಬಲಿಸಬಾರದು. ಬೆಂಬಲಿಸುವುದು ತಪ್ಪು. ಜಿನ್ನಾ ಮುಸ್ಲಿಮರಿಗೆ ಮಾದರಿ ವ್ಯಕ್ತಿಯಲ್ಲ. ಆತ ವಿರೋಧಿ ರಾಷ್ಟ್ರದ ಜನಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲಿಘಡ ಮುಸ್ಲಿಂ ವಿವಿಯಲ್ಲಿ ಉಂಟಾಗಿರುವ ಗಲಭೆ ತೀವ್ರವಾಗಿ ಪ್ರತಿಭಟನೆ ವೇಳೆ ಪೊಲೀಸರು ಗಾಯಗೊಂಡಿದ್ದರು. ಅಲ್ಲದೇ ಇತ್ತೀಚೆಗೆ ಮುಸ್ಲಿಂ ಮುಖಂಡರೊಬ್ಬರು ದೇಶದ್ರೋಹಿ ಜಿನ್ನಾನ ಭಾವಚಿತ್ರ ಸುಟ್ಟು ಹಾಕಿದವರಿಗೆ ಒಂದು ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿ, ದೇಶಭಕ್ತಿ ಮೆರೆದಿದ್ದರು. ಇದೀಗ ಜಿನ್ನಾನನ್ನು ಬೆಂಬಲಿಸುವವರಿಗೆ ಫತ್ವಾ ಹೊರಡಿಸಿರುವುದು ಹೊಸ ಬದಲಾವಣೆಗೆ ಸಾಕ್ಷಿಯಾಗಿ ನಿಂತಿದೆ. ದೇಶದ ಮುಸ್ಲಿಂ ದೇಶ ಭಕ್ತರು ಎಂಬುದನ್ನು ದರ್ಗಾ ಮತ್ತು ಕೆಲ ಮುಸ್ಲಿಂ ಮುಖಂಡರು ಸಾಬೀತು ಪಡಿಸುತ್ತಿದ್ದಾರೆ.
Leave A Reply