ಗೋಕಳ್ಳರನ್ನು ರಕ್ಷಿಸುತ್ತಿವೆಯಾ ಹಿಂದೂ ವಿರೋಧಿ ಮಾಧ್ಯಮಗಳು?
ಹೌದು ಇತ್ತೀಚೆಗೆ ಗೋರಕ್ಷಕರ ಮೇಲೆ ಕೇಳಿಬರುತ್ತಿರುವ ಆರೋಪಗಳ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಾಗ ಇಂಡಿಯಾ ಟುಡೇ ಮೂಲಕ ಇಂತಹದ್ದೊಂದು ಮಾಹಿತಿ ಹೊರಬಿದ್ದಿದೆ.ಆ ಮೂಲಕ ತನ್ನ ಸ್ವಾರ್ಥ ಸಾಧನೆಗಾಗಿ “ಗೋರಕ್ಷಕರ ದೌರ್ಜನ್ಯ”ಎಂಬ ಕಟ್ಟುಕತೆಗಳನ್ನು ಸ್ರಷ್ಠಿಸಿ ಗೋಕಳ್ಳರು ಮತ್ತು ಗೋಮಾಂಸ ಮಾಫಿಯಾದೊಂದಿಗೆ ಹಿಂದೂ ವಿರೋಧಿ ಮಾಧ್ಯಮಗಳು ಕೈ ಜೋಡಿಸಿರುವುದು ಬಹಿರಂಗವಾಗಿದೆ.
ಮರಳು ಮಾಫಿಯಾ,ಭೂ ಮಾಫಿಯಾ ಇತ್ಯಾದಿ ಕೇಳಿದ್ದೇವೆ,ಇದರೊಂದಿಗೆ ಪ್ರಸ್ತುತ ಗೋಮಾಂಸ ಮಾಫಿಯಾದ ಬ್ರಹತ್ ಜಾಲ ಬೆಳಕಿಗೆ ಬಂದಿದೆ.ಬಡ, ಮಧ್ಯಮ ವರ್ಗದ ಹಾಗೂ ಕ್ರಷಿಕರನ್ನು ಗುರಿಯಾಗಿಸಿಕೊಂಡು ಮಾರಕಾಯುಧಗಳ ಮೂಲಕ ಹಲ್ಲೆ ಮಾಡಿ,ಮನೆಯವರನ್ನು ಹೆದರಿಸಿ ಬೆದರಿಸಿ ಗೋವುಗಳನ್ನು ಕದಿಯಲಾಗುತ್ತದೆ.ಆ ಮೂಲಕ ಅಮಾನುಷವಾಗಿ ಮೂಕ ಪ್ರಾಣಿಗಳನ್ನು ಹಿಂಸೆ ಕೊಟ್ಟು ಕಸಾಯಿ ಖಾನೆಗಳಿಗೆ ಸಾಗಿಸಲಾಗುತ್ತದೆ.ಕೆಲವೊಂದು ಬಾರಿ ಇದರ ಮಾಹಿತಿ ತಿಳಿದ ಗೋರಕ್ಷಕರು ತಡೆಯಲು ಯತ್ನಿಸಿದಾಗ ಘರ್ಷಣೆ ಸಂಭವಿಸಿ ಬಹುತೇಕ ಘಟನೆಗಳಲ್ಲಿ ಗೋಕಳ್ಳರ ಬಳಿ ಮಾರಕಾಯುಧಗಳಿರುವುದರಿಂದ ಗೋರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತವೆ.100 ರಲ್ಲಿ 5% ಘಟನೆಗಳಲ್ಲಿ ಮಾತ್ರ ಗೋರಕ್ಷಕರು ಗೋಕಳ್ಳರನ್ನು ಸೆದೆ ಬಡಿಯಲು ಯಶಸ್ವಿಯಾಗುತ್ತಾರೆ.ಆದರೆ ಸತ್ಯ ಸಂಗತಿಗಳನ್ನು ಮರೆಮಾಚಿ ಕೇವಲ ಗೋಕಳ್ಳರ ಮೇಲೆ ನಡೆಯುವ ಹಲ್ಲೆಗಳನ್ನು ದೊಡ್ಡ ಮಟ್ಟದಲ್ಲಿ ಸುದ್ಧಿ ಮಾಡಲು ಯಶಸ್ವಿಯಾಗಿರುವ ಮಾಧ್ಯಮಗಳ ಬೆಳವಣಿಗೆ ಆತಂಕಕಾರಿಯಾಗಿದೆ.
ಕೆಲ ಮಾಧ್ಯಮಗಳನ್ನೇ ಖರೀದಿಸುವ ಮಟ್ಟಕ್ಕೆ ಈ ಗೋಮಾಂಸ ಮಾಫಿಯಾ ದಂಧೆ ಬೆಳೆದಿದ್ದು ಗೋಕಳ್ಳರ ಕರಾಳ ಮುಖವನ್ನು ಜಗತ್ತಿಗೆ ಮರೆಮಾಚಿ ನೈಜ ಗೋರಕ್ಷಕರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ.ಅಷ್ಟೇ ಅಲ್ಲದೇ ಪ್ರಧಾನ ಮಂತ್ರಿ ಕಾರ್ಯಾಲಯಕ್ಕೂ ಸುಳ್ಳು ಸುದ್ಧಿಗಳನ್ನು ನೀಡುವ ಮೂಲಕ ದಿಕ್ಕು ತಪ್ಪಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದು ಅತ್ಯಂತ ಆಘಾತಕಾರಿಯಾಗಿದೆ.ಇನ್ನಾದರೂ ವಾಸ್ತವ ಏನೆಂಬುವುದನ್ನು ತಿಳಿದು ಗೋಮಾಂಸ ಮಾಫಿಯಾ ಮಟ್ಟ ಹಾಕಲೇ ಬೇಕಾದ ಅನಿವಾರ್ಯತೆ ಎದುರಾಗಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ.ಹಾಗೂ ಸಾಮಾನ್ಯ ಜನರು ಜನಜಾಗ್ರತಿ ಮೂಲಕ ನೈಜ ಗೋರಕ್ಷಕರ ಆತ್ಮಸ್ಥೈರ್ಯ ಹೆಚ್ಚಿಸಿ ಗೋಕಳ್ಳರಿಂದ ಅಮಾಯಕ ಗೋವುಗಳನ್ನು ರಕ್ಷಿಸಬೇಕಾಗಿದೆ.
Leave A Reply