ಕರ್ನಾಟಕ ಪ್ರಚಾರಕ್ಕೆ ಯೋಗಿ ಏಕೆ ಎನ್ನುವವರು ಯೋಗಿಜೀಯ ಪ್ರತಿಕ್ರಿಯೆ ಕೇಳಿದರೇ ಹೌದಲ್ಲವೇ ಎನ್ನುತ್ತೀರಿ
ದಕ್ಷಿಣ ಕನ್ನಡ: ಸದಾ ವಿಭಜನಕಾರಿ ಭಾವನೆ ಹೊಂದಿರುವ ಕಾಂಗ್ರೆಸ್ಸಿಗರು ಕರ್ನಾಟಕ ಚುನಾವಣೆಯಲ್ಲೂ ದಕ್ಷಿಣ ಭಾರತ, ಉತ್ತರ ಭಾರತ ಎಂಬ ವಿಭಜನೆಯ ಬೀಜ ಮೊಳಕೆ ಒಡೆಸಿದ್ದಾರೆ. ಬಿಜೆಪಿ ಉತ್ತರ ಭಾರತದವರ ಕೈಯಲ್ಲಿದ್ದೇ, ಮೋದಿ, ಯೋಗಿ ಕರ್ನಾಟಕಕ್ಕೆ ಏಕೆ ಬರುತ್ತಾರೆ ಎಂಬ ಪ್ರಶ್ನೆಯನ್ನು ಬಿಜೆಪಿಯವರಿಗೆ ವಿಶೇಷವಾಗಿ ಉತ್ತರ ಪ್ರದೇಶ ಯೋಗಿ ಆದಿತ್ಯನಾಥ್ ಅವರಿಗೆ ಕೇಳುತ್ತಿದ್ದಾರೆ. ಅದಕ್ಕೆ ಯೋಗಿ ಆದಿನತ್ಯಾಥ ನೀಡಿದ ಉತ್ತರ ಮಾತ್ರ ಕಠೋರವಾಗಿದ್ದು, ಕಾಂಗ್ರೆಸ್ಸಿಗರು ಅರಗಿಸಿಕೊಳ್ಳಲು ಕಷ್ಟವಾಗಬಹುದು.
‘ನಾನು ಕರ್ನಾಟಕಕ್ಕೆ ಏಕೆ ಬಂದಿದ್ದೇನೆ ಗೊತ್ತಾ?. ನಾನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಒಂದು ವರ್ಷದಲ್ಲೇ 86 ಲಕ್ಷ ರೈತರ ಸಾಲ ಮನ್ನಾ ಮಾಡಿದ್ದೇನೆ. ರಾಜ್ಯದಲ್ಲಿ ತಾಂಡವವಾಡುತ್ತಿದ್ದ ಭ್ರಷ್ಟಾಚಾರವನ್ನು ಮಟ್ಟಹಾಕಿದ್ದೇನೆ. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಸೌಲಭ್ಯ ಕಲ್ಪಿಸಿದ್ದೇನೆ. ರಾಜ್ಯಕ್ಕೆ ಕಂಟಕವಾಗಿರುವ, ಉತ್ತರ ಪ್ರದೇಶದ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಹಾಳು ಮಾಡಿದ ಗುಂಡಾ ಸಂಸ್ಕೃತಿಯನ್ನು ಮಟ್ಟ ಹಾಕಿ ಶಾಂತಿ ಸ್ಥಾಪಿಸಿದ್ದೇನೆ. ನನ್ನ ಈ ಕಾರ್ಯಗಳನ್ನು ಸಿದ್ದರಾಮಯ್ಯಗೆ ಮಾದರಿಯಾಗಬೇಕು. ಇದೆಲ್ಲವನ್ನು ಮಾಡಲು ಸಿದ್ದರಾಮಯ್ಯನವರಿಗೆ ಸಾಧ್ಯವಾಗಿಲ್ಲ. ಅದನ್ನು ಹೇಳಲು ರಾಜ್ಯಕ್ಕೆ ಬಂದಿದ್ದೇನೆ ಎಂದು ತೀಕ್ಷ ಪ್ರತಿಕ್ರಿಯೆಯನ್ನು ಯೋಗಿ ಆದಿತ್ಯನಾಥ ನೀಡಿದ್ದಾರೆ.
Leave A Reply