ಕೇಂದ್ರ ಸರ್ಕಾರದ ಮಹತ್ತರ ಆಯುಷ್ಮಾನ್ ಯೋಜನೆ ದೇಶಾದ್ಯಂತ ಚಾಲನೆ ಯಾವಾಗ ಗೊತ್ತಾ?
Posted On May 9, 2018
0
ದೆಹಲಿ: ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆೆ ಬಂದ ಬಳಿಕ ತೆಗೆದುಕೊಂಡ ಸರ್ಜಿಕಲ್ ಸ್ಟ್ರೈಕ್, ನೋಟು ನಿಷೇಧ, ಜಿಎಸ್‌ಟಿ ಜಾರಿ ಸೇರಿ ಹಲವು ದಿಟ್ಟ ನಿರ್ಧಾರಗಳ ನಂತರದ ಮಹತ್ತರ ನಿರ್ಧಾರ ಎಂದೇ ಖ್ಯಾಾತವಾಗಿರುವ, ವಿಶ್ವದ ಬೃಹತ್ ಆರೋಗ್ಯ ಯೋಜನೆ ಎಂದೇ ಹೇಳಲಾಗುತ್ತಿಿರುವ ಕೇಂದ್ರ ಸರ್ಕಾರದ ಮಹತ್ತರ ಆಯುಷ್ಮಾನ್ ಭಾರತ್ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲು ಮುಹೂರ್ತ ನಿಗದಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಹೌದು, ಮೂಲಗಳ ಪ್ರಕಾರ 2018ರ ಆಗಸ್‌ಟ್ 15ರಂದು ಕೆಂಪು ಕೋಟೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಭಾರತದ ಧ್ವಜ ಹಾರಿಸಿದ ಬಳಿಕ, ಅದೇ ಕೋಟೆ ಮೇಲೆ ನಿಂತು ಆಯುಷ್ಮಾನ್ ಭಾರತ್ ಯೋಜನೆಯನ್ನು ದೇಶಾದ್ಯಂತ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಈ ಕುರಿತು ವಿಮಾ ಯೋಜನೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದುಘ, ಆಯುಷ್ಮಾನ್ ಯೋಜನೆ ಜಾರಿಗಾಗಿ ಎಲ್ಲ ಸರ್ಕಾರಿ ವಿಮಾ ಕಂಪನಿಗಳು ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೇ ಛತ್ತೀಸ್‌ಗಡದ ಬಿಜಾಪುರ ಜಿಲ್ಲೆಯಲ್ಲಿ ಯೋಜನೆಯ ಮೊದಲ ಹಂತವಾಗಿ ಆರೋಗ್ಯ ಕೇಂದ್ರವೊಂದಕ್ಕೆ ಪ್ರಧಾನಿ ಮೋದಿ ಅವರು ಏ.14ರಂದು ಚಾಲನೆ ನೀಡಿದ್ದಾರೆ. ಈಗ ಆಗಸ್‌ಟ್ 15ರಂದು ದೇಶಾದ್ಯಂತ ಯೋಜನೆ ಜಾರಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಆಯುಷ್ಮಾನ್ ಭಾರತ್ ಕೇಂದ್ರ ಸರ್ಕಾರದ ಮಹತ್ತರ ಯೋಜನೆಯಾಗಿದ್ದು, ಈ ಯೋಜನೆ ಅನ್ವಯ ದೇಶದ 10 ಕೋಟಿ ಕುಟುಂಬಗಳ 50 ಕೋಟಿ ಜನ ವಾರ್ಷಿಕ 5 ಲಕ್ಷ ರೂಪಾಯಿವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲಿದ್ದಾರೆ. ಅಲ್ಲದೆ ಇದು ವಿಶ್ವದ ಬೃಹತ್ ಆರೋಗ್ಯ ಯೋಜನೆ ಎಂದೇ ಖ್ಯಾತಿಯಾಗಿದೆ.
Trending Now
ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
December 15, 2025
ಅನ್ಯಧರ್ಮ ಅವಹೇಳನ: ವಿಮಾನ ನಿಲ್ದಾಣದಲ್ಲೇ ಆರೋಪಿ ಸೆರೆ
December 15, 2025









