ತನ್ನ ಪ್ರಾಣವನ್ನೇ ಒತ್ತೆಯಿಟ್ಟು ಡಕಾಯಿತರಿಂದ ಮಹಿಳೆಯ ರಕ್ಷಿಸಿದ ಯೋಧನಿಗೊಂದು ಸೆಲ್ಯೂಟ್!
Posted On May 9, 2018
0

ದೇಶದಲ್ಲಿ ಯೋಧರ ಕುರಿತು ಎಷ್ಟು ಹಾಡಿಹೊಗಳಿದರೂ ಕಡಿಮೆಯೇ. ಅವರಿಗೆ ನಾವು ಎಷ್ಟು ಕೃತಜ್ಞರಾಗಿದ್ದರೂ, ಅದು ತೃಣ ಮಾತ್ರವೇ. ಅದು ದೇಶದ ಒಳಗಿರಲಿ, ಗಡಿ ಬದಿಯಿರಲಿ, ಯೋಧ ದೇಶದ ಜನರ ರಕ್ಷಣೆಗೆ ತನ್ನ ಪ್ರಾಣವನ್ನೇ ಮುಡಿಪಾಗಿಡುತ್ತಾನೆ ಎಂಬುದು ಮತ್ತೊೊಮ್ಮೆ ಸಾಬೀತಾಗಿದೆ.

ರೈಲು ಸಂಚರಿಸುವಾಗ ರಾತ್ರಿ ಇಬ್ಬರು ಡಕಾಯಿತರು ಕಿಟಕಿಯಿಂದ ಕೈ ಹಾಕಿ ಮಹಿಳೆಯ ಮೈಮೇಲಿನ ಒಡೆಯಲು ಕಸಿಯಲು ಮುಂದಾಗಿದ್ದಾರೆ. ಈ ವೇಳೆ ಯೋಧ ಕಾರ್ಯಪ್ರವೃತ್ತರಾಗಿದ್ದು, ಡಕಾಯಿತರೊಂದಿಗೆ ಹೋರಾಡಿದ್ದಾರೆ.
ಕಿಟಕಿಯಿಂದಲೇ ಇಬ್ಬರು ಡಕಾಯಿತರ ಕಳ್ಳತನ್ನವನ್ನು ಯೋಧ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ತಪ್ಪಿಸಿದ್ದಾನೆ. ಈ ವೇಳೆ ಕಳ್ಳರು ಚಾಕುವಿನಿಂದ ಯೋಧನ ಕೈಗೆ ಕುಯ್ದರು, ಯೋಧ ಹೋರಾಟ ಬಿಡದೆ, ಡಕಾಯಿತರ ಕಳ್ಳತನ ತಪ್ಪಿಿಸಿದ್ದಲ್ಲದೆ, ಮಹಿಳೆಯನ್ನು ರಕ್ಷಿಿಸಿದ್ದಾನೆ.
ಈ ಕುರಿತು ಮಾಹಿತಿ ಪಡೆದ ಸೈನ್ಯದ ಹಿರಿಯ ಅಧಿಕಾರಿಗಳು ಯೋಧನ ಸಾಹಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಹಿರಿಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ಪೋಸ್ಟ್ ಮಾಡಿದ್ದುಘಿ, ಅಪಾರ ಮೆಚ್ಚುವೆ ವ್ಯಕ್ತವಾಗಿದೆ. ಅದೇನೆ ಇರಲಿ ಮಹಿಳೆ ರಕ್ಷಣೆಗಾಗಿ ತನ್ನ ಪ್ರಾಣವನ್ನೇ ಒತ್ತೆೆ ಇಟ್ಟು, ಹೋರಾಡಿ ರಕ್ಷಿಸಿರುವುದಕ್ಕೆ ನಾವೆಲ್ಲ ಸೆಲ್ಯೂಟ್ ಹೊಡೆಯಲೇಬೇಕು.
Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
September 17, 2025