ಸೈನಿಕರ ಕ್ಷಮೆಗೆ ಮಿಡಿಯಿತು ಉಗ್ರನ ಮನ, ಪ್ರಾಣಭಿಕ್ಷೆ ನೀಡಿದ ಯೋಧರಿಗೆ ನಮನ
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ಜಮ್ಮು-ಕಾಶ್ಮೀರದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಪಾಕಿಸ್ತಾನಿ ಉಗ್ರರನ್ನು ಹೆಡೆಮುರಿಕಟ್ಟಲಾಗುತ್ತಿದೆ. ಪಾಕಿಸ್ತಾನದಿಂದ ಹಣಪಡೆದ ಪ್ರತ್ಯೆಕತಾವಾದಿಗಳಿಗೆ ಎನ್ಐಎ ಮೂಲಕ ಬಿಸಿ ಮುಟ್ಟಿಸಲಾಗಿದೆ.
ಹಾಗಂತ ಬರೀ ಗುಂಡಿನ ದಾಳಿಗಳ ಮೂಲಕವೇ ಜಮ್ಮು-ಕಾಶ್ಮೀರದಲ್ಲಿ ತಪ್ಪು ಮಾಡಿದವರಿಗೆ ಪಾಠ ಕಲಿಸುತ್ತಿಲ್ಲ. ಬದಲಾಗಿ ಕಲ್ಲು ತೂರಾಟಗಾರರಿಗೆ ನಾಗರಿಕರಂತೆ ಜೀವನ ನಡೆಸಲು ಪ್ರಕರಣ ಕೈಬಿಟ್ಟು ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ.
ಇದೇ ರೀತಿ ಇತ್ತೀಚೆಗೆ ಕಾಶ್ಮೀರದ ಬಾರಾಮುಲ್ಲಾದಲ್ಲಿ ಗುಂಡಿನ ದಾಳಿ ಮಾಡಿ ಮೂವರು ಯುವಕರನ್ನು ಹತ್ಯೆಗೈದ ಉಗ್ರನನ್ನು ಸೈನಿಕರು ಬಂಧಿಸಿದ್ದು, ಕೊಲ್ಲದೆ ಬಿಟ್ಟ ಯೋಧರಿಗೆ ಉಗ್ರ ಕೃತಜ್ಞತೆ ಸಲ್ಲಿಸಿದ್ದಾನೆ.
ಹೌದು, ಕಳೆದ ಏ.30ರಂದು ಲಷ್ಕರೆ ತಯ್ಯಬಾ ಉಗ್ರ ಸಂಘಟನೆಯ ಐಜಾಜ್ ದಾಳಿ ಮಾಡಿ ಮೂವರನ್ನು ಕೊಂದಿದ್ದ. ಇದಕ್ಕೆ ಪ್ರತಿಯಾಗಿ ಕಾರ್ಯಾಚರಣೆ ನಡೆಸಿದ ಸೈನಿಕರು ಐಜಾಜ್ ಸೇರಿ ನಾಲ್ವರು ಉಗ್ರರನ್ನು ಬಂಧಿಸಿದ್ದಾರೆ.
ಹೀಗೆ ಯೋಧರು ಎನ್ ಕೌಂಟರ್ ಮಾಡಿ ಬಿಸಾಕದೆ ಪ್ರಾಣಭಿಕ್ಷೆ ನೀಡಿರುವ ಕುರಿತು ಉಗ್ರ ಐಜಾಜ್ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ಪಾಕಿಸ್ತಾನದ ಪಿತೂರಿಯಿಂದ ನಾವು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಿದ್ದೆವು. ಆದರೆ ಯೋಧರು ಮಾತ್ರ ನಮ್ಮನ್ನು ಹತ್ಯೆ ಮಾಡದೆ ಪ್ರಾಣಭಿಕ್ಷೆ ನೀಡಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಎಂದಿದ್ದಾನೆ. ಅಲ್ಲದೆ, ಉಗ್ರ ಸಂಘಟನೆ ಸೇರಿರುವ ಎಲ್ಲರೂ ವಾಪಸ್ ಮನೆಗೆ ಬಂದು ನಾಗರಿಕರಾಗಿ ಬದುಕಬೇಕು ಎಂದು ಸಹ ಕರೆ ನೀಡಿದ್ದಾನೆ.
ಒಟ್ಟಿನಲ್ಲಿ ಸೈನಿಕರು ತೋರಿದ ಕರುಣೆಯಿಂದ ಉಗ್ರನೊಬ್ಬನ ಮನಸ್ಸು ಬದಲಾವಣೆಯಾಗಿ ನಾಗರಿಕನಂತೆ ಬದುಕುತ್ತೇನೆ ಎಂದು ಹೇಳಿರುವುದಲ್ಲದೆ, ಸಂಘಟನೆ ಬಿಟ್ಟು ಮಾನವರಾಗಿ ಎಂದು ಕರೆ ನೀಡಿರುವುದು ಸ್ವಾಗತಾರ್ಹವಾಗಿದೆ.
Leave A Reply