ಯೋಗಿ ಆದಿತ್ಯನಾಥರು ಸಿಎಂ ಕ್ರಮಕ್ಕೆ ಅಂಜಿ ಆರೋಪಿಯೊಬ್ಬ ಹೇಗೆ ಶರಣಾಗಿದ್ದಾನೆ ನೋಡಿ!
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಗಣನೀಯವಾಗಿ ಅಪರಾಧ ಪ್ರಕರಣ ಕಡಿಮೆಯಾಗುತ್ತಿವೆ ಎಂಬುದಕ್ಕೆ ಇತ್ತೀಚೆಗೆ ಕಳ್ಳತನ ಸೇರಿ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾದವರು ಖುದ್ದು ಪೊಲೀಸ್ ಠಾಣೆಗೆ ಶರಣಾಗುತ್ತಿರುವುದು ಸಾಕ್ಷಿಯಾಗಿದೆ.
ಇದರ ಹಿಂದೆ ಯೋಗಿ ಆದಿತ್ಯನಾಥರ ಆದೇಶ ಇದೆ ಎಂಬುದು ಸಹ ಎಲ್ಲರಿಗೂ ಗೊತ್ತಿದ್ದು, ಈಗ ಇಂಥಾದ್ದೇ ಘಟನೆಯೊಂದು ಸುದ್ದಿಯಾಗಿದ್ದು, ಹಲವು ದರೋಡೆ, ಕೊಲೆ ಯತ್ನ ಸೇರಿ ಹಲವು ಪ್ರಕರಣಗಲ್ಲಿ ಭಾಗಿಯಾಗಿದ್ದ ಆರೋಪಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ.
ದೀಪಸ್ರಾವ್ ಎಂಬಲ್ಲಿ ನೆಲೆಸಿದ್ದ ಫೈಜನ್ ಅಹ್ಮದ್ ಎಂಬಾತ ಹಲವು ಕಳ್ಳತನ ಹಾಗೂ ಕೊಲೆಗೆ ಯತ್ನ ಆರೋಪದಲ್ಲಿ ಪ್ರಕರಣ ದಾಖಲಾದ ಕಾರಣ 2014ರಿಂದಲೇ ತಲೆಮರೆಸಿಕೊಂಡಿದ್ದ.
ಆದರೆ ಯೋಗಿ ಆದಿತ್ಯನಾಥರು ಯಾವಾಗ ಆಡಳಿತಕ್ಕೆ ಬಂದು ಅಪರಾಧಿಗಳನ್ನು ಹೆಡೆಮುರಿಕಟ್ಟಲು ಶುರು ಮಾಡಿದರೋ ಈತನಿಗೆ ಭಯವಾಗಿದೆ. ಅಲ್ಲದೆ ಎನ್ಕೌಂಟರ್ ಮೂಲಕ ಗೂಂಡಾಗಳನ್ನು ಮಟ್ಟ ಹಾಕುವ ಕ್ರಮದಿಂದ ಈತ ತೀರಾ ಭೀತಿಗೊಳಗಾಗಿದ್ದಾನೆ ಎಂದು ತಿಳಿದುಬಂದಿದೆ.
ಹಾಗಾಗಿ ಅಹ್ಮದ್ ಅಮ್ರೋಹಾ ಪೊಲೀಸ್ ವರಿಷ್ಠಾಕಾರಿ ಕಚೇರಿಗೆ ಬಂದು ಶರಣಾಗಿದ್ದಾನೆ.
ಅಲ್ಲದೆ ಆತನ ಕೊರಳಿನಲ್ಲಿ ಭಿತ್ತಿಪತ್ರವೊಂದು ಸಿಕ್ಕಿದ್ದು, ನಾನು ಇನ್ನೆಂದೂ ಅಪರಾಧದಲ್ಲಿ ತೊಡಗುವುದಿಲ್ಲ ಎಂದು ಪ್ರಮಾಣ ಮಾಡುತ್ತೇನೆ. ನನಗೆ ಗುಂಡು ಹಾರಿಸಬೇಡಿ ಎಂದು ಬರೆದುಕೊಂಡಿರುವುದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ.
ಪೊಲೀಸ್ ವರಿಷ್ಠಾಕಾರಿ ಕಚೇರಿಗೆ ಆಗಮಿಸುವ ಮುನ್ನ ಆತ ಮಾಧ್ಯಮದವರಿಗೆ ತಾನು ಶರಣಾಗುವ ಕುರಿತು ಮಾಹಿತಿ ನೀಡಿದ್ದ. ಬಳಿಕ ಕಚೇರಿಗೆ ತೆರಳಿದ ಅಹ್ಮದ್ ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಬ್ರಿಜೇಶ್ ಸಿಂಗ್ ಅವರನ್ನು ಭೇಟಿಯಾಗಿ ಶರಣಾಗಿದ್ದಾನೆ.
ಇನ್ನೆಂದೂ ನಾನು ಯಾವುದೇ ಕಳ್ಳತನ, ಕೊಲೆ ಮಾಡುವುದಿಲ್ಲ. ನನ್ನನ್ನು ಕೊಲ್ಲಬೇಡಿ, ನನ್ನ ಕೊನೆ ಉಸಿರಿರುವವರೆಗೂ ಜೈಲಿನಲ್ಲೇ ಉಳಿಯುತ್ತೇನೆ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಆರೋಪಿಯನ್ನು ಕಸ್ಟಡಿಗೆ ವಹಿಸಿದ್ದಾರೆ.
ಒಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಆಡಳಿತಕ್ಕೆ ಬಂದ ಬಳಿಕ ಅಪರಾಧ ಪ್ರಕರಣದಲ್ಲಿ ಸಿಲುಕಿದ ಆರೋಪಿಗಳೇ ಖುದ್ದು ಪೊಲೀಸ್ ಠಾಣೆಗೆ ಬಂದು ಶರಣಾಗುತ್ತಿರುವುದು ಉತ್ತಮ ಬೆಳವಣಿಗೆಯ ಜತೆಗೆ ಯೋಗಿ ಆದಿತ್ಯನಾಥರ ದಕ್ಷತೆಯ ಪ್ರತಿಬಿಂಬವೂ ಆಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಗೌರಿ ಲಂಕೇಶ್, ಎಂ.ಎಂ.ಕಲಬುರ್ಗಿ ಹತ್ಯೆಯಾದರೂ, 22 ಹಿಂದೂಗಳ ಮಾರಣ ಹೋಮ ನಡೆಸಿದರೂ ರಾಜ್ಯ ಸರ್ಕಾರ ಮಾತ್ರ ಮಗುಮ್ಮಾಗಿ ಕುಳಿತಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
Leave A Reply