ಹರ್ಯಾಣ ಸರ್ಕಾರದ ಮತ್ತೊಂದು ಮಹತ್ವದ ನಿರ್ಧಾರ, ಮಹಿಳೆಯರ ಶಿಕ್ಷಣಕ್ಕೆ 31 ಕಾಲೇಜು ಸಹಕಾರ!
ಚಂಡೀಗಡ: ಇತ್ತೀಚೆಗೆ ಹರ್ಯಾಣದ ಬಿಜೆಪಿ ನೇತೃತ್ವದ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಹಲವು ಮಹತ್ತರ ನಿರ್ಧಾರಗಳನ್ನು ತೆಗೆದುಕೊಂಡು ದೇಶಾದ್ಯಂತ ಸುದ್ದಿಯಾಗುತ್ತಿದೆ. ಕಳೆದ ವಾರ ಸಾರ್ವಜನಿಕ ಸ್ಥಳದಲ್ಲಿ ಮುಸ್ಲಿಮರು ನಮಾಜ್ ಮಾಡುವಂತಿಲ್ಲ ಹಾಗೂ ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ಕಟ್ಟಿದ ಕಟ್ಟಡ ತೆರವುಗೊಳಿಸಬೇಕು ಎಂದು ಸಿಪಿಎಂ ಹಾಗೂ ಕಾಂಗ್ರೆಸ್ಸಿಗೆ ತಪರಾಕಿ ನೀಡಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.
ಇಂತಹ ಹರ್ಯಾಣ ಸರ್ಕಾರ ಈಗ ಮತ್ತೊಂದು ಮಹತ್ವದ ಯೋಜನೆ ರೂಪಿಸಿದ್ದು, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಬರೋಬ್ಬರಿ 31 ಕಾಲೇಜುಗಳನ್ನು ನಿರ್ಮಿಸಿದೆ.
ಈ ಕುರಿತು ಹರ್ಯಾಣ ಶಿಕ್ಷಣ ಸಚಿವ ರಾಮ್ ವಿಲಾಸ್ ಶರ್ಮಾ ಮಾತನಾಡಿದ್ದು, ಸುಮಾರು 31 ಕಾಲೇಜುಗಳ ನಿರ್ಮಾಣ ಕಾರ್ಯ ಆರಂಭಿಸಲಾಗುತ್ತದೆ. ಪ್ರಸಕ್ತ ಸಾಲಿನಿಂದ, ಅಂದರೆ ಜುಲೈನಿಂದ ಹೆಣ್ಣುಮಕ್ಕಳಿಗೆ ಕಾಲೇಜುಗಳಲ್ಲಿ ತರಗತಿ ಆರಂಭವಾಗುತ್ತವೆ, ಸರ್ಕಾರದ ಹಲವು ಸಂಸ್ಥೆ ಹಾಗೂ ಬಾಡಿಕೆ ಕಟ್ಟಡದಲ್ಲಿ ತರಗತಿ ನಡೆಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಎಲ್ಲ 31 ಕಟ್ಟಡಗಳ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಆರಂಭಿಸಲಾಗುತ್ತದೆ. ಕಾಮಗಾರಿ ಮುಗಿದ ಕೂಡಲೇ ಸರ್ಕಾರಿ ಕಟ್ಟಡ ಹಾಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಶಾಲೆಗಳನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ವಿವರಿಸಿದ್ದಾರೆ.
Leave A Reply