ಹೆಸರು ಬದಲಿಸಿ ಯುವತಿಯ ಪ್ರೀತಿಸಿದ ಮುಸ್ಲಿಂ ಯುವಕ, ಯುವತಿ ಏನಾದಳು ಗೊತ್ತೇ?
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾದೇಶದಿಂದ ಒಳನುಸುಳುವ ಮುಸ್ಲಿಮರು ಹಿಂದೂಗಳ ಆಚರಣೆಗೆ ಅಡ್ಡಿಯಾಗುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಲವ್ ಜಿಹಾದ್ ಪ್ರಕರಣಗಳು ಸಹ ಜಾಸ್ತಿಯಾಗುತ್ತಿರುವುದು ಭೀತಿ ಹುಟ್ಟಿಸಿದೆ.
ಹೌದು, ಪಶ್ಚಿಮ ಬಂಗಾಳದ ದಕ್ಷಿಣ ಪರಗಣ 24 ಜಿಲ್ಲೆಯ ಫಾಲ್ತಾ ಪೊಲೀಸ್ ಸ್ಟೇಷನ್ ವ್ಯಾಪ್ತಿಯ ದಿಗಿರ್ ಪುರ ಎಂಬಲ್ಲಿ ಮುಸ್ಲಿಂ ಯುವಕನೊಬ್ಬ ಹಿಂದೂ ಹೆಸರಿನಲ್ಲಿ ಯುವತಿಯನ್ನು ಪ್ರೀತಿಸಿ, ಈಗ ನಿಜಬಣ್ಣ ಬಯಲಾಗಿದ್ದು, ಇದರಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದು ಲವ್ ಜಿಹಾದ್ ಎಂಬ ಆರೋಪಗಳು ಕೇಳಿಬಂದಿವೆ.
ದ್ವಿತೀಯ ಪಿಯುಸಿ ಓದಿದ್ದ ಪ್ರಿಯಾ ಮೊಂಡೊಲ್ ಎಂಬ ಯುವತಿಯ ಮೊಬೈಲ್ ಗೆ ಮಿಸ್ಡ್ ಕಾಲ್ ಬಂದಿದೆ. ಅದಕ್ಕೆ ಪ್ರತಿಯಾಗಿ ವಾಪಸ್ ಕರೆ ಮಾಡಿದ ಪ್ರಿಯಾ ಯಾರೆಂದು ಕೇಳಿದ್ದಾಳೆ. ಅದಕ್ಕೆ ತನ್ನ ಹೆಸರು ರಾಜೇಶ್ ಎಂದೂ, ಸೂರ್ಯಪುರದಿಂದ ಕರೆ ಮಾಡುತ್ತಿದ್ದೇನೆ ಎಂದೂ ತಿಳಿಸಿದ್ದಾನೆ. ಹೀಗೆ ಮೊಬೈಲಿನಲ್ಲಿ ಸ್ನೇಹಿತರಾದ ಅವರು ಪ್ರೇಮಿಗಳು ಆಗಲು ತುಂಬ ಸಮಯ ತೆಗೆದುಕೊಂಡಿರಲಿಲ್ಲ.
ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದು, ಸೋ ಕಾಲ್ಡ್ ರಾಜೇಶ್ ಯುವತಿಯ ಮನೆಗೆ ಬಂದು, ತನ್ನೆ ಹೆಸರು ರಾಜೇಶ್, ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಯುವತಿ ತಂದೆಗೆ ಗುರುತಿನ ಚೀಟಿ ನೀಡಿದ್ದಾನೆ. ಆದರೆ ಎಚ್ಚೆತ್ತುಕೊಂಡ ಅವರ ತಂದೆ, ಇದು ನಕಲಿ ಐಡಿ ಎಂದೂ, ಮಗಳನ್ನು ಕೊಡುವುದಿಲ್ಲವೆಂದೂ ತಿಳಿಸಿ ವಾಪಸ್ ಕಳುಹಿಸಿದ್ದಾರೆ.
ಆದರೆ ತನ್ನ ಪ್ರೀತಿಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದ ಯುವತಿ ಅದೇ ಮೇ 8ರ ಮಧ್ಯಾಹ್ನ ಡೈಮಂಡ್ ಹಾರ್ಬರ್ ರೈಲ್ವೆ ನಿಲ್ದಾಣದಲ್ಲಿ ರಾಜೇಶ್ ನನ್ನು ಭೇಟಿಯಾಗಿದ್ದಾಳೆ. ಆಗ ಆತನ ಹೆಸರು ರಾಜೇಶ್ ಅಲ್ಲ, ಮಮುದ್ ಶೇಖ್ ಎಂಬುದು ಗೊತ್ತಾಗಿದೆ. ಆಗ ಇಬ್ಬರೂ ಜಗಳವಾಡಿದ್ದು, ಮನನೊಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಂಗಾಳದ ದೈನಿಕ್ ಜುಗಾಸಂಖ ಪತ್ರಿಕೆ ವರದಿ ಮಾಡಿದೆ.
Leave A Reply