ಭಾರತೀಯ ಸೈನಿಕರಿಗೆ ಶೀಘ್ರದಲ್ಲೇ ದೊರೆಯಲಿದೆ ಹೈಟೆಕ್ ರಕ್ಷಣಾ ಕವಚ
ದೆಹಲಿ: ಗಡಿಯಲ್ಲಿ ಮತ್ತು ಭಾರತದಲ್ಲಿ ದೇಶದ್ರೋಹಿಗಳ ವಿರುದ್ಧ ಹೋರಾಡುವ ಸೈನಿಕರಿಗೆ ಸಾಮಾನ್ಯ ಬುಲೆಟ್ ಅಷ್ಟೇ ಅಲ್ಲ ಎಕೆ 47 ಗನ್ ಮತ್ತು ಹಾರ್ಡ್ ಸ್ಟೀಲ್ ಹೊಂದಿರುವ ಬುಲೆಟ್ ಗಳಿಂದಲೂ ಯಾವುದೇ ಹಾನಿಯಾಗದಂತ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಶೀಘ್ರದಲ್ಲಿ ಸೈನಿಕರ ರಕ್ಷಣೆಗೆ ದೊರೆಯಲಿವೆ ಎಂದು ಸೈನ್ಯದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವದಲ್ಲೇ ಆಘಾತಕಾರಿಯಾಗಿರುವ ಎಕೆ 47 ಗನ್ ನಿಂದ ರಕ್ಷಣೆ ನೀಡುವಂತ ಬುಲೆಟ್ ಫ್ರೂಫ್ ಜಾಕೆಟ್ ಗಳು ಈ ಮುಂಚೆ ಇರಲಿಲ್ಲ. ಭಾರತದಲ್ಲಿ ಕೇವಲ ಸಾಮಾನ್ಯ ಗನ್ ಗಳಿಂದ ರಕ್ಷಿಸುವ ಜಾಕೆಟ್ ಗಳನ್ನು ಮಾತ್ರ ಸಿದ್ಧಪಡಿಸಲಾಗುತ್ತಿತ್ತು. ಇದೀಗ ಸಿದ್ಧಪಡಿಸುತ್ತಿರುವ ವಿಶೇಷ ಜಾಕೆಟ್ ಗಳಿಂದ ದೇಹದ ನಾಲ್ಕು ಭಾಗದಲ್ಲಿ ರಕ್ಷಣೆ ದೊರೆಯಲಿದ್ದು, ಸೈನಿಕರಿಗೆ ಯಾವುದೇ ಗಾಯಗಳು ಆಗದಂತೆ ರಕ್ಷಣೆ ಒದಗಿಸುತ್ತವೆ. ಇಂಡಿಯನ್ ಡಿಫೇನ್ಸ್ ಮೆಟಿರಿಯಲ್ಸ್ ಆಂಡ್ ಸ್ಟೋರ್ಸ್ ರಿಸರ್ಚ್ ಆ್ಯಂಡ್ ಡೆವಲಪ್ ಮೆಂಟ್ ಎಸ್ಟಾಬ್ಲಿಷಮೆಂಟ್ ಸಂಸ್ಥೆ ನಿರಂತರವಾಗಿ ಐದು ವರ್ಷ ಸಂಶೋಧನೆ ನಡೆಸಿ ಈ ಜಾಕೆಟ್ ಗಳನ್ನು ಸಿದ್ಧಪಡಿಸಿದ್ದು, ಯಾವುದೇ ದಿಕ್ಕಿನಿಂದ ಗುಂಡು ಬಂದರೂ ಸೈನಿಕರನ್ನು ರಕ್ಷಿಸುತ್ತದೆ.
ಸೈನಿಕರ ಕುತ್ತಿಗೆ, ಹಿಂಬಾಗ, ಎದೆಯ ಭಾಗ ಮತ್ತು ತೊಡೆಯ ಭಾಗದಲ್ಲೂ ರಕ್ಷಣೆ ನೀಡುವಂತೆ ಸಿದ್ಧಪಡಿಸಲಾಗಿದೆ. ಈ ಜಾಕೆಟ್ ಗಳು ಕಡಿಮೆ ಭಾರವನ್ನು ಹೊಂದಿದ್ದು, ಸೈನಿಕರ ಕಾರ್ಯಾಚರಣೆಗೆ, ಕಾರ್ಯಗಳಿಗೆ ಯಾವುದೇ ಅಡ್ಡಿ ಪಡಿಸುವುದಿಲ್ಲ. 10.4 ಕಿಲೋ ಭಾರವಿದ್ದು, ವಿಶ್ವದ ಪ್ರಮುಖ ದೇಶಗಳು ಬಳಸುವ ಬುಲೆಟ್ ಫ್ರೂಫ್ ಜಾಕೆಟ್ ಗಳಿಗಿಂತ ಉತ್ತಮ ಮತ್ತು ಕಡಿಮೆ ಭಾರ ಹೊಂದಿವೆ ಎನ್ನುತ್ತಾರೆ ಅಧಿಕಾರಿಗಳು.
Leave A Reply