ಭಾರತದ ಸೈನ್ಯಕ್ಕೆ ದೊರೆಯಲಿದೆ ಅಗ್ನಿ-5 ಕ್ಷಿಪಣಿಯ ಬಲ, ವಿರೋಧಿಗಳ ಎದೆಯಲ್ಲಿ ನಡುಕ
ದೆಹಲಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶದ ರಕ್ಷಣಾ ಕ್ಷೇತ್ರಕ್ಕೆ ಹೊಸ ಬಲ ಬಂದಿದೆ. ಇದೀಗ ಭಾರತೀಯ ಸೈನ್ಯಕ್ಕೆ ಅಣ್ವಸ್ತ್ರ ಹೊತ್ತ್ಯೊಯುವ ಸಾರ್ಮರ್ಥ್ಯ ಹೊಂದಿರುವ ಶಕ್ತಿಶಾಲಿ ಖಂಡಾಂತರ ಕ್ಷಿಪಣಿ ಅಗ್ನಿ-5 ಶೀಘ್ರದಲ್ಲೇ ಸೈನ್ಯದ ಕೈ ಸೇರಲಿದೆ.
5,500 ರಿಂದ 5,800 ಕಿ.ಮೀ ಗುರಿ ತಲುಪುವ ಸಾಮರ್ಥ್ಯ ಹೊಂದಿರುವ ಅಗ್ನಿ-5 ಕ್ಷಿಪಣಿಯನ್ನು ಜನವರಿಯಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪರೀಕ್ಷೆ ಯಶಸ್ವಿಯಾಗಿದ್ದು, ಮೇ ತಿಂಗಳಾಂತ್ಯದಲ್ಲಿ ಮತ್ತೊಂದು ಸುತ್ತಿನ ಪರೀಕ್ಷೆ ನಡೆಸಿದ ನಂತರ ಕ್ಷಿಪಣಿ ಸೈನ್ಯದ ಕೈ ಸೇರಲಿದೆ. ವಿಶ್ವದ ಕೆಲವೇ ರಾಷ್ಟ್ರಗಳು ಐದು ಸಾವಿರ ಕಿ.ಮೀ. ದೂರ ಸಾಗುವ ಸಾಮರ್ಥ್ಯ ಹೊಂದಿದ್ದು, ಇದೀಗ ಭಾರವೂ ಆ ರಾಷ್ಟ್ರಗಳ ಪಟ್ಟಿಗೆ ಸೇರಲಿದೆ. ಪ್ರಸ್ತುತ ಅಮೆರಿಕ, ಚೀನಾ, ಫ್ರಾನ್ಸ್ ಹಾಗೂ ಬ್ರಿಟನ್ ಗಳು ಮಾತ್ರ ಈ ಸಾಮರ್ಥ್ಯದ ಕ್ಷಿಪಣಿಯನ್ನು ಹೊಂದಿವೆ.
2012ರಿಂದ ಆರಂಭವಾದ ಅಗ್ನಿ-5 ಕ್ಷಿಪಣಿ ಪರೀಕ್ಷೆ 2015, 2016ರಲ್ಲೂ ಪ್ರಾಥಮಿಕ ಪರೀಕ್ಷೆಗಳು ನಡೆದಿದ್ದವು, ಕಳೆದ ಜನವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಜಲಂತರ್ಗಾಮಿ ಮೂಲಕ ಕ್ಷಿಪಣಿ ಉಡಾಯಿಸುವಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಶೀಘ್ರದಲ್ಲಿ ಈ ಸಮಸ್ಯೆಗಳು ಬಗೆಹರಿಯಲಿದೆ.
1500 ಕೆ.ಜಿ ಅಣ್ವಸ್ತ್ರವನ್ನು ಐದು ಸಾವಿರ ಕಿ.ಮೀ.ವರೆಗೆ ಹೊತ್ತ್ಯೊಯುವ ಸಾಮರ್ಥ್ಯ ಹೊಂದಿದ್ದು, ಡಿಆರ್ ಡಿಒ ಸಂಸ್ಥೆ ಈ ಕ್ಷಿಪಣಿಯನ್ನು ಸಿದ್ಧಪಡಿಸಿದೆ. ಅಗ್ನಿ-5 ಕ್ಷಿಪಣಿಯಿಂದ ಚೀನಾ, ಆಫ್ರಿಕಾ ಸೇರಿ ಐರೋಪ್ಯ ದೇಶಗಳ ಮೇಲೂ ಭಾರತ ದಾಳಿ ನಡೆಸುವ ಸಾಮರ್ಥ್ಯ ಹೊಂದಲಿದೆ.
Leave A Reply