ಸೈನ್ಯಕ್ಕೆ ದೇಶಿ ಶಸ್ತ್ರಾಸ್ತ್ರ, ಸೈನ್ಯ ಸಿದ್ಧಪಡಿಸಿದೆ 15,000 ಕೋಟಿ ವೆಚ್ಚದ ಭರ್ಜರಿ ಪ್ಲಾನ್
ದೆಹಲಿ: ಭಾರತದ ಸೈನ್ಯಕ್ಕೆ ಹಲವು ವರ್ಷಗಳ ನಿರಂತರ ಪ್ರಯತ್ನದ ನಂತರ, ಇದೀಗ ದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ದೊರೆಯುವ ಸಮಯ ಕೂಡಿ ಬಂದಿದೆ. ದೇಶದ ಸೈನ್ಯ ವಿದೇಶಿ ಶಸ್ತ್ರಾಸ್ತ್ರಗಳ ಮೇಲೆ ಅವಲಂಬನೆಯಿಂದ ಆಗುತ್ತಿರುವ ವಿಳಂಬ ಹಾಗೂ ಶಸ್ತ್ರಾಸ್ತ್ರ ಸಂಗ್ರಹ ಸಮಸ್ಯೆಯನ್ನು ನೀಗಿಸಲು 15,000 ಕೋಟಿ ರೂಪಾಯಿ ವೆಚ್ಚ ಶಸ್ತ್ರಾಸ್ತ್ರ ಉತ್ಪಾದನೆ ಯೋಜನೆಯನ್ನು ಸೈನ್ಯ ರೂಪಿಸಿದೆ.
ಈ ಯೋಜನೆಯಲ್ಲಿ ಸೇನೆ ಮತ್ತು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳು ಉಸ್ತುವಾರಿ ವಹಿಸಿಕೊಳ್ಳಲಿದ್ದು, 11 ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ನಡೆಯಲಿವೆ. 10 ವರ್ಷ ಗುರಿ ನಿಗದಿಪಡಿಸಲಾಗಿದೆ. ಏಪ್ರಿಲ್ ನಲ್ಲಿ ನಡೆದ ಸೇನೆಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ.
ಶಸ್ತ್ರಾಸ್ತ್ರ ಪೂರೈಕೆಯಲ್ಲಿ ಎಲ್ಲ ಕಂಪೆನಿಗಳು ನಿಗದಿಪಡಿಸಿರುವ ಗಡುವನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಈ ಕುರಿರು ಸೇನೆ ಕಠೋರ ನಿಲುವು ತಳೆಯಲಿದೆ. ಶಸ್ತ್ರಾಸ್ತ್ರಗಳನ್ನು ದೇಶಿಯವಾಗಿ ತಯಾರಿಸುವ ಈ ಅತಿ ದೊಡ್ಡ ಯೋಜನೆಯನ್ನು ಪ್ರಥಮ ಹಂತದಲ್ಲಿ ನೋಡಿಕೊಂಡು, ಮುಂದಿನ ಉತ್ಪಾದನಾ ಗುರಿಗಳನ್ನು ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶಕ್ಕೆ ಶಸ್ತ್ರಾಸ್ತ್ರ ಕೊರತೆ ನೀಗಿಸಿ, 30 ದಿನಗಳವರೆಗೆ ನಿಂತರವಾಗಿ ಯುದ್ದಕ್ಕೆ ಸಾಕಾಗುವಷ್ಟು ಶಸ್ತ್ರಾಸ್ತ್ರ ಸಂಗ್ರಹ ಮಾಡುವುದು, ವಿದೇಶಿ ಅವಲಂಬನೆಯನ್ನು ತಪ್ಪಿಸಲು ಈ ಯೋಜನೆ ಪೂರಕವಾಗಲಿದೆ. ಆರಂಭದಲ್ಲಿ ರಾಕೆಟ್‌ಗಳು, ವಾಯು ರಕ್ಷಣಾ ವ್ಯವಸ್ಥೆ (ಏರ್ ಡಿಫೆನ್ಸ್ ಸಿಸ್ಟಂ), ಆರ್ಟಿಲರಿ ಗನ್‌ಗಳು, ಪದಾತಿದಳ ಸಮರ ವಾಹನಗಳು, ಗ್ರೆನೇಡ್ ಲಾಂಚರ್‌ಗಳು ಹಾಗೂ ಯುದ್ಧಭೂಮಿಯಲ್ಲಿ ಬಳಸುವ ಇತರ ಶಸ್ತ್ರಾಸ್ತ್ರಗಳನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ.
Leave A Reply