ಜಸ್ಟಿಸ್ ಫಾರ್ ಆಸೀಫಾ ಎಂದು ಬೊಗಳೇ ಬಿಟ್ಟ ಕಮ್ಯುನಿಸ್ಟ್ನಾಯಕನಿಂದಲೇ ಬಾಲಕಿಗೆ ಲೈಂಗಿಕ ಕಿರುಕುಳ
ತಿರುವನಂತಪುರ: ಭಾರತದಲ್ಲಿ ಬುದ್ದಿಜೀವಿಗಳು, ಎಡಬಿಡಂಗಿಗಳು ತಾವು ಮಾತನಾಡುವುದೊಂದು, ಮಾಡುವುದೊಂದು ಎಂಬುದು ಪದೇ ಪದೆ ಸಾಬೀತಾಗುತ್ತಿದೆ. ಅಲ್ಲದೇ ತಮ್ಮಲ್ಲಿ ನೈತಿಕತೆ ಇಲ್ಲ ಎಂಬುದಕ್ಕೆ ಇಲ್ಲೊಂದು ಸಾಕ್ಷಿ ದೊರೆತಿದೆ. ಕಾಶ್ಮೀರದಲ್ಲಿ ನಡೆದಿದೆ ಎನ್ನಲಾದ ಬಾಲಕಿಯ ಕೊಲೆ, ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಹೋರಾಟ ಮಾಡಿದ, ಕೇರಳದ ಕಮ್ಯುನಿಸ್ಟ್ ಮುಖಂಡ ಮೋದೀನ್ ಕುಟ್ಟಿ ತಾನೇ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ದೃಶ್ಯ ಇದೀಗ ವೈರಲ್ ಆಗಿದೆ. ಅಲ್ಲದೇ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಕಮ್ಯುನಿಸ್ಟ ಮನಸ್ಥಿತಿಯ ನೈಜ ಸ್ಥಿತಿಯ ಅನಾವರಣವಾಗಿದೆ.
ಈ ಕುರಿತು ಮಲ್ಲಪುರಂ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದು, ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆಸಿರುವ ಕುರಿತು ಸೂಕ್ತ ತನಿಖೆ ನಡೆಸುತ್ತಿದ್ದಾರೆ. ಏಪ್ರಿಲ್ 18ರಂದು ನಡೆದ ಘಟನೆಯಲ್ಲಿ 60 ವರ್ಷದ ಕಮ್ಯುನಿಸ್ಟ್ ಮುಖಂಡ ಸಿನೆಮಾ ಥೆಟರ್ ನಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಈ ಕುರಿತ ವಿಡಿಯೋಗಳು ಥೇಟರ್ ನಲ್ಲಿರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ದೃಶ್ಯಗಳಲ್ಲಿ ತಾಯಿ ಪಕ್ಕದಲ್ಲಿ ಕುಳಿತ ಬಾಲಕಿಗೆ 60 ವರ್ಷದ ವ್ಯಕ್ತಿ ಕಿರುಕುಳ ನೀಡಿದ್ದಾನೆ.
ಈ ದೃಶ್ಯಗಳು ಮಾಧ್ಯಮದಲ್ಲಿ ಬಹಿರಂಗವಾಗುತ್ತಲೇ ಪೊಲೀಸರು ಕಮ್ಯುನಿಸ್ಟ್ ಮುಖಂಡನನ್ನು ವಶಕ್ಕೆ ಪಡೆದಿದ್ದಾರೆ. ಕಾಶ್ಮೀರದಲ್ಲಿ ನಡೆದಿದ್ದ ಬಾಲಕಿ ಆಸೀಫಾ ಅತ್ಯಾಚಾರ ಕೊಲೆಯನ್ನು ಖಂಡಿಸಿ, ಮೋದೀನ್ ಕುಟ್ಟಿ ಹೋರಾಟ ನಡೆಸಿದ್ದ. ಹಲವು ಪ್ರತಿಭಟನೆಗಳಲ್ಲಿ ಭಾಗಿಯಾಗಿದ್ದ. ಇದೀಗ ಆತನ ನಿಜ ಬಣ್ಣ ಬಯಲಾಗಿದೆ.
Leave A Reply