ಕನ್ನಡ ಅಸ್ಮಿತೆಯ ನಾಟಕವಾಡಿದ ಕಾಂಗ್ರೆಸ್ ಗೆ ಮೋದಿ ಹೇಳಿದ್ದೇನು ಗೊತ್ತೇ?
ದೆಹಲಿ: ಕರ್ನಾಟಕದ ಚುನಾವಣೆಯಲ್ಲಿ ಕರ್ನಾಟಕ ಧ್ವಜ, ಕನ್ನಡ ಭಾಷೆ ಹೆಸರಲ್ಲಿ ರಾಜಕೀಯ ಮಾಡಿದ ಕಾಂಗ್ರೆಸ್ ತನ್ನ ಹಿಂದಿ ಹೇರಿಕೆ ಎಂದು ಬೊಗಳೇ ಬಿಡುತ್ತಲೇ ವಿಧಾನಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದೆ. ಕಾಂಗ್ರೆಸ್ ಚುನಾವಣೆಗಾಗಿ ನಡೆಸಿ ಕೊಳಕು ತಂತ್ರಗಳಲ್ಲಿ ಒಂದಾದ ಹಿಂದಿ ಹೇರಿಕೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ನಡೆದ ಬಿಜೆಪಿ ವಿಜಯೋತ್ಸವದ ಕಾರ್ಯಕ್ರಮದಲ್ಲಿ ತಕ್ಕ ಪ್ರತಿಯುತ್ತರ ನೀಡಿದ್ದಾರೆ.
‘ಕಾಂಗ್ರೆಸ್ಸಿಗರು ಕರ್ನಾಟಕದಲ್ಲಿ ಭಾಷೆ ಹೆಸರಲ್ಲಿ ದೇಶವನ್ನು ಒಡೆದು ಆಳುವ ಪ್ರಯತ್ನ ಮಾಡಿದರು. ಆದರೆ ಕರ್ನಾಟಕದ ಜನ ಕುತಂತ್ರಿಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ಹಿಂದಿಗಳ ಪಕ್ಷ ಎಂದು ಜನರಲ್ಲಿ ಸುಳ್ಳು ಬಿತ್ತುತ್ತಿದ್ದಾರೆ. ಆದರೆ ಗುಜರಾತ, ಮಹಾರಾಷ್ಟ್ರ, ಅಸ್ಸಾಂ, ಗೋವಾ ಇದಾವುದೇ ರಾಜ್ಯಗಳು ಹಿಂದಿ ಭಾಷೆಯ ರಾಜ್ಯಗಳಲ್ಲ. ಈ ಸತ್ಯವನ್ನು ಅರಿತು ಕೂಡ ಜನರಲ್ಲಿ ಸುಳ್ಳು ಬಿಜೆಪಿ ಹಿಂದಿವಾಲಾಗಳ ಪಕ್ಷ. ಕನ್ನಡದ ಮೇಲೆ ಹಿಂದಿ ಹೇರಲಾಗುತ್ತಿದೆ ಎಂದು ಕಾಂಗ್ರೆಸ್ ಜನರ ದಿಕ್ಕು ತಪ್ಪಿಸಲು ಪ್ರಯತ್ನ ಮಾಡಿತ್ತು. ಆದರೆ ಕರ್ನಾಟಕದ ಜನ ಕಾಂಗ್ರೆಸ್ ಕುತಂತ್ರಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಕರ್ನಾಟಕದ ಜನ ಬಿಜೆಪಿ ಸರ್ಕಾರದ ಅಭಿವೃದ್ಧಿ ಮತ್ತು ಅಖಂಡ ರಾಷ್ಟ್ರೀಯತೆಗೆ ಬೆಲೆ ನೀಡಿದ್ದಾರೆ. ಕಾಂಗ್ರೆಸ್ ಅವನತಿಗೆ ಮುನ್ನುಡಿ ಬರೆದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಮೂಲಕ ಭಾರತೀಯ ಜನತಾ ಪಕ್ಷ ಕೇವಲ ಹಿಂದಿವಾಲಾಗಳ ಪಕ್ಷವಲ್ಲ ಅದು ಅಖಂಡ ಭಾರತವನ್ನು ಪ್ರತಿನಿಧಿಸುವ ಪಕ್ಷ ಎಂಬ ಸಂದೇಶವನ್ನು ಮತ್ತೊಮ್ಮೆ ದೇಶಕ್ಕೆ ಸಾರಿದ್ದಾರೆ. ಅಲ್ಲದೇ ಒಡೆದು ಆಳುವ ಕಾಂಗ್ರೆಸ್ ಗೂ ಕೂಡ ತಕ್ಕ ಪಾಠವನ್ನು ಪ್ರಧಾನಿ ನರೇಂದ್ರ ಮೋದಿ ಬೋಧಿಸಿದ್ದಾರೆ.
Leave A Reply