ರಾಜ್ಯದಲ್ಲಿ ಧರ್ಮ ಒಡೆಯಲು ಮುಂದಾದ ಸಿದ್ದರಾಮಯ್ಯನವರಿಗೆ ಜನ ಹೇಗೆ ಪಾಠ ಕಲಿಸಿದ್ದಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಸಾಕ್ಷಿ!
ಐದು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಿದ್ದರಾಮಯ್ಯನವರು, ತಮ್ಮ ಅವಧಿಯಲ್ಲಿ ಮಾಡಿದ ಉಪದ್ವ್ಯಾಪಗಳು ಒಂದೆರಡಲ್ಲ. ಸೀಮಿತ ಸಮುದಾಯಕ್ಕಾಗಿ ಶಾದಿ ಭಾಗ್ಯ ಯೋಜನೆ ತಂದರು, ಸೀಮಿತ ವರ್ಗದ ವಿದ್ಯಾರ್ಥಿಗಳಿಗಾಗಿ ಪ್ರವಾಸ ಭಾಗ್ಯ ಯೋಜನೆ ಜಾರಿಗೊಳಿಸಿ ಮಕ್ಕಳಿಂದಲೇ ಉಗಿಸಿಕೊಂಡರು, ಧರ್ಮಾಂಧ ಟಿಪ್ಪುವಿನ ಜಯಂತಿ ಆಚರಿಸಿದರು, ಹಿಂದೂಗಳ ಕೊಲೆಯಾದರೂ ಸುಮ್ಮನಿದ್ದರು, ಕೊನೆಗೆ ಹಿಂದೂ ಧರ್ಮ ಒಡೆಯಲು ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸ್ಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುವ ಮೂಲಕ ಒಡೆದು ಆಳುವ ನೀತಿ ಅನುಸರಿಸಿದರು.
ಆದರೆ ಹೀಗೆ ಧರ್ಮ ಒಡೆಯಲು ಮುಂದಾದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಇಡೀ ರಾಜ್ಯದ ಜನ ತಕ್ಕ ಪಾಠವನ್ನೇ ಕಲಿಸಿದ್ದಾರೆ. ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ತಿರಸ್ಕರಿಸಿದ್ದಾರೆ. ಅಷ್ಟಕ್ಕೂ ಲಿಂಗಾಯತ ಪ್ರತ್ಯೇಕ ಲಿಂಗಾಯತ ಧರ್ಮದ ಪರ ನಿಂತ ಸಿದ್ದರಾಮಯ್ಯನವರಿಗೆ ಲಿಂಗಾಯತರೇ ಹೇಗೆ ಪಾಠ ಕಲಿಸಿದ್ದಾರೆ ಗೊತ್ತಾ? ಲಿಂಗಾಯತರೇ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ಸನ್ನು ಹೇಗೆ ಮಕಾಡೆ ಮಲಗಿಸಿದ್ದಾರೆ ಎಂಬುದನ್ನು ಇಲ್ಲಿ ಸಾಕ್ಷಿ ಸಮೇತ ವಿವರಿಸಲಾಗಿದೆ ನೋಡಿ.
ಹೌದು, ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಪರ ಒಲವು ತೋರಿಸಿದಾಗಲೇ, ಹಲವು ಸ್ವಾಮೀಜಿಗಳ ಪರ ಬ್ಯಾಟಿಂಗ್ ಮಾಡಿದಾಗಲೇ ಜಾಗೃತ ಲಿಂಗಾಯತರು ಸಿದ್ದರಾಮಯ್ಯನವರನ್ನು ವಿರೋಧಿಸಿದ್ದರು. ಆದರೆ ಬ್ರಿಟಿಷರ ಮನಸ್ಥಿತಿಯನ್ನೇ ಬಾಡಿಗೆ ಪಡೆದವರಂತೆ ಆಡಿದ ಸಿದ್ದರಾಮಯ್ಯನವರು ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದರು.
ಇದೇ ಕಾರಣಕ್ಕಾಗಿಯೇ ಲಿಂಗಾಯತರೇ ಜಾಸ್ತಿ ಇರುವ ಬಾಂಬೆ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಈ ಬಾರಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ಆ ಮೂಲಕ ಹಿಂದೂ ಧರ್ಮವನ್ನು ಒಡೆಯಲು ಬಂದವರಿಗೆ ತಕ್ಕ ಪಾಠ ಕಲಿಸುತ್ತೇವೆ ಎಂಬ ಸಂದೇಶವನ್ನು ಈ ಭಾಗದ ಲಿಂಗಾಯತರು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸೋಲಿಸಿ, ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಸಾಬೀತುಪಡಿಸಿದ್ದಾರೆ.
ಬಾಂಬೆ ಕರ್ನಾಟಕದಲ್ಲಿ ಲಿಂಗಾಯತರೇ ಜಾಸ್ತಿ ಇದ್ದು, ಈ ಬಾರಿ ಇವರೆಲ್ಲಿ ಬಹುತೇಕರು ಬಿಜೆಪಿಯನ್ನೇ ಬೆಂಬಲಿಸಿದ್ದಾರೆ. 2013ರ ಚುನಾವಣೆಯಲ್ಲಿ ಲಿಂಗಾಯತರು ಕಾಂಗ್ರೆಸ್ ಪರ ನಿಂತಿದ್ದು, ಬಿಜೆಪಿಯ ಕೇವಲ 13 ಶಾಸಕರನ್ನು ಆಯ್ಕೆಮಾಡಿದ್ದರು. ಆದರೆ ಧರ್ಮ ಒಡೆಯಲು ನಿಂತ ಸಿದ್ದರಾಮಯ್ಯನವರ ವಿರುದ್ಧವಾಗಿ 2018ರ ಚುನಾವಣೆಯಲ್ಲಿ ಮತ ಹಾಕಿದ್ದು, ಬಿಜೆಪಿ 30 ಶಾಸಕರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ.
ಅಷ್ಟೇ ಅಲ್ಲ, 2013ರಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಬಿಜೆಪಿಯ ಕೇವಲ 4 ಅಭ್ಯರ್ಥಿಗಳು ಮಾತ್ರ ಗೆದ್ದಿದ್ದರು. ಈ ಭಾಗದ ತುಂಬ ಶಾಸಕರು ಕಾಂಗ್ರೆಸ್ಸಿನವರೇ ಆಗಿದ್ದರು. ಆದರೆ ಈ ಬಾರಿ ಹೈದರಾಬಾದ್ ಕರ್ನಾಟಕ ಪ್ರದೇಶದ ಜನ ಕಾಂಗ್ರೆಸ್ಸನ್ನು ಸೋಲಿಸಿದ್ದು, ಸುಮಾರು 12 ಬಿಜೆಪಿಯ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ. ಆ ಮೂಲಕ ಧರ್ಮ ಒಡೆಯಲು ಮುಂದಾದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ರೆಕ್ಕೆ-ಪುಕ್ಕ ಕತ್ತರಿಸಿದ್ದಾರೆ.
Leave A Reply