ಇಲ್ಲಿ ಬಿಎಸ್ ವೈ ಸರ್ಕಾರ ಸಾಲಮನ್ನಾ ಮಾಡಲು ಚಿಂತನೆ ನಡೆಸಿದರೆ, ಅಲ್ಲಿ ಕೇಂದ್ರ ಸರ್ಕಾರ ನೀರಾವರಿಗೆ ಹಣ ಮೀಸಲಿಟ್ಟಿದೆ
ದೆಹಲಿ: ರಾಜ್ಯದಲ್ಲಿ ಸರ್ಕಾರ ರಚಿಸಿದ ಕೆಲವೇ ಗಂಟೆಗಳಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಸಾಲ ಮನ್ನಾ ಮಾಡಲು ಮುಂದಾಗಿದ್ದರೆ, ಅಲ್ಲಿ ಕೇಂದ್ರ ಸರ್ಕಾರ ಸದ್ದಿಲ್ಲದೆ ರೈತರ ಅನುಕೂಲಕ್ಕಾಗಿ ಹಣ ಮೀಸಲಿಡುವ ಮೂಲಕ ಬಿಜೆಪಿ ರೈತರ ಪರ ಎಂಬುದನ್ನು ಸಾಬೀತುಪಡಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಇದುವರೆಗೆ ಫಸಲ್ ಬಿಮಾ ಯೋಜನೆ, ಕೃಷಿ ಸಿಂಚಾಯಿ ಯೋಜನೆ, ರೈತರ ಬೆಳೆಗೆ ಒಂದೂವರೆ ಪಟ್ಟು ಬೆಂಬಲ ಬೆಲೆ ಘೋಷಿಸುವ ಮೂಲಕ ರೈತರ ಪರವಾಗಿ ನಿಂತಿದೆ. ಈಗ ರೈತರ ಆದಾಯ ಹೆಚ್ಚಿಸುವ ದೃಷ್ಟಿಯಿಂದ ನೀರಾವರಿ ಅಭಿವೃದ್ಧಿಗೆ 5000 ಸಾವಿರ ರೂಪಾಯಿ ಮಂಜೂರು ಮಾಡಲು ಸಚಿವ ಸಂಪುಟ ಸಭೆ ಅಂಕಿತ ಹಾಕಿದೆ.
ಹೌದು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಡಿಯಲ್ಲಿ ಸಣ್ಣ ನೀರಾವರಿ ಫಂಡ್ (ಎಂಇಪಿ) ಆಗಿ 5 ಸಾವಿರ ಕೋಟಿ ರೂಪಾಯಿ ಮಂಜೂರು ಮಾಡಿದೆ. ಕೇಂದ್ರ ಸರ್ಕಾರ ಕೃಷಿ ಸಿಂಚಾಯಿ ಯೋಜನೆ ಅನ್ವಯ 10 ಲಕ್ಷ ಹೆಕ್ಟೇರ್ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಒದಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಈಗ ಸಣ್ಣ ನೀರಾವರಿ ಫಂಡ್ ಆಗಿ 5,000 ಕೋಟಿ ರೂಪಾಯಿ ಮಂಜೂರು ಮಾಡಿದ್ದು, ಪ್ರಸಕ್ತ ಸಾಲಿನಲ್ಲಿ ಈಗಾಗಲೇ 2000 ಕೋಟಿ ರೂಪಾಯಿ ನೀಡಿದೆ. 2019-20ನೇ ಸಾಲಿನಲ್ಲಿ ಉಳಿದ 3000 ಕೋಟಿ ರೂಪಾಯಿ ನೀಡುವುದಾಗಿ ಸರ್ಕಾರ ತಿಳಿಸಿದೆ. ಸಣ್ಣ ನೀರಾವರಿ ಅಭಿವೃದ್ಧಿಗಾಗಿ ವಿವಿಧ ತಂತ್ರಜ್ಞಾನ ಅಳವಡಿಕೆ, ನೀರಿನ ಪೂರೈಕೆ ಸೇರಿ ಹಲವು ಅಂಶಗಳನ್ನು ಈ ಹಣದ ಮೂಲಕ ಅಭಿವೃದ್ಧಿಗೊಳಿಸಲಾಗುತ್ತದೆ.
Leave A Reply