ರಸ್ತೆ ಕಾಮಗಾರಿಯ ಭ್ರಷ್ಟ ಗುತ್ತಿಗೆದಾರರಿಗೆ ಸಚಿವ ನಿತಿನ್ ಗಡ್ಕರಿ ಹೇಗೆ ಎಚ್ಚರಿಕೆ ನೀಡಿದ್ದಾರೆ ನೋಡಿ!
ಭೋಪಾಲ್: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಮೇಲೆ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಪ್ರಸ್ತುತ 400ಕ್ಕೂ ಅಧಿಕ ರಸ್ತೆ ಯೋಜನೆಗಳು ಮುಗಿಯುವ ಹಂತದಲ್ಲಿದ್ದರೆ, 200 ಯೋಜನೆಗಳಿಗೆ ಚಾಲನೆ ನೀಡುವ ಚಿಂತನೆಯಲ್ಲಿ ಸರ್ಕಾರವಿದೆ.
ಹೀಗೆ ಯಾವುದೇ ಸರ್ಕಾರಗಳು ಯೋಜನೆಗಳನ್ನೇನೋ ಜಾರಿಗೆ ತರುತ್ತವೆ. ಆದರೆ ಆ ಯೋಜನೆಗಳು ಎಷ್ಟರಮಟ್ಟಿಗೆ ಜಾರಿಗೆ ಬಂದವು, ಎಷ್ಟರಮಟ್ಟಿಗೆ ಕಾಮಗಾರಿ ಗುಣಮಟ್ಟದಿಂದ ಕೂಡಿದೆ, ಗುತ್ತಿಗೆದಾರರು ಹೇಗೆ ಕಾಮಗಾರಿ ಪೂರ್ಣಗೊಳಿಸಲು ಬದ್ಧತೆ ತೋರಿಸುತ್ತಾರೆ ಎಂಬುದನ್ನು ಗಮನಹರಿಸುವುದು ತುಸು ಕಷ್ಟಸಾಧ್ಯ.
ಆದರೆ ಈ ಮಾತಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ವಿರುದ್ಧವಾಗಿದ್ದು, ಕಳಪೆ ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿದರೆ, ರಸ್ತೆ ಯೋಜನೆಗಳಲ್ಲಿ ಭ್ರಷ್ಟಾಚಾರ ಎಸಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಸರ್ಕಾರ ಭ್ರಷ್ಟಾಚಾರವನ್ನು ಎಂದಿಗೂ ಸಹಿಸುವುದಿಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸುವ ರಸ್ತೆ ಯೋಜನೆಗಳು ಸಮರ್ಪಕವಾಗಿ ಜಾರಿಗೊಳಿಸಬೇಕು. ಇದಕ್ಕಾಗಿ ಗುತ್ತಿಗೆದಾರರು ಬದ್ಧತೆ ತೋರಿಸಬೇಕು. ಒಂದು ವೇಳೆ ಗುತ್ತಿಗೆದಾರರು ಅಕ್ರಮ ಎಸಗಿದರೆ ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.
ರಸ್ತೆ ಯೋಜನೆಗಳು ದೇಶದ ಅಭಿವೃದ್ಧಿಯನ್ನು ಬಿಂಬಿಸುತ್ತವೆ. ಅದಕ್ಕಾಗಿಯೇ ಕೇಂದ್ರ ಸರ್ಕಾರ ರಸ್ತೆ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ರಸ್ತೆ ಕಾಮಗಾರಿಗಳಿಗೆ ನೀಡುವ ಹಣ ಗುತ್ತಿಗೆದಾರರದ್ದಲ್ಲ, ಯೋಜನೆಗೆ ಸೀಮಿತವಾದ ಹಣ ಅದೇ ಕಾರಣಕ್ಕೆ ಮಾತ್ರ ಬಳಸಬೇಕು ಎಂದು ಸೂಚಿಸಿದ್ದಾರೆ.
Leave A Reply