ಕಾಶ್ಮೀರ ಗಡಿಯಲ್ಲಿ ಭಾರತದ ಪ್ರತಿದಾಳಿಗೆ ಬೆದರಿದ ಪಾಕಿಸ್ತಾನ ಭಾರತೀಯ ಸೇನೆಗೆ ಹೇಗೆ ಅಂಗಲಾಚಿದೆ ನೋಡಿ!
ಶ್ರೀನಗರ: ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನದ ಹೆಡೆಮುರಿ ಕಟ್ಟಲಾಗುತ್ತಿದೆ. ಪಾಕ್ ದಾಳಿಗೆ ಪ್ರತಿದಾಳಿ, ಪ್ರತಿಯಾಗಿ ಒಳನುಸುಳುವಿಕೆ, ಸರ್ಜಿಕಲ್ ಸ್ಟ್ರೈಕ್, ಉಗ್ರರ ವಿರುದ್ಧ ಕಾರ್ಯಾಚರಣೆ ಮಾಡುವ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲಾಗಿದೆ.
ಇಷ್ಟಾದರೂ ಪಾಠ ಕಲಿಯದ ಪಾಕಿಸ್ತಾನ ಕಳೆದ ಮೂರು ದಿನಗಳಿಂದ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮ ಉಲ್ಲಂಘಿಸಿ ದಾಳಿ ಮಾಡುತ್ತಿದೆ. ಆದರೆ ಭಾರತದ ಹೆಮ್ಮೆಯ ಸೈನಿಕರು ಸಹ ಪ್ರತಿದಾಳಿ ಮೂಲಕ ಪಾಕಿಸ್ತಾನವನ್ನು ಹಿಮ್ಮೆಟ್ಟಿಸುತ್ತಿವೆ. ಭಾರತೀಯ ಸೈನಿಕರ ಪ್ರತಿದಾಳಿಯಿಂದ ಹೆದರಿರುವ ಪಾಕಿಸ್ತಾನ ಈಗ ಬಿಎಸ್ಎಫ್ ಸೈನಿಕರು ಪ್ರತಿದಾಳಿ ಮಾಡಬಾರದು ಎಂಬುದಾಗಿ ಕೋರುತ್ತೇವೆ ಎಂದು ಭಾರತೀಯ ಸೈನ್ಯಕ್ಕೆ ಮನವಿ ಮಾಡಿದೆ.
ಪಾಕಿಸ್ತಾನ ಗಡಿಯಲ್ಲಿ ಎಂದಿಗೂ ಶಾಂತಿಯನ್ನೇ ಬಯಸುತ್ತದೆ. ಮುಂದೆ ಪಾಕಿಸ್ತಾನಿ ಸೈನಿಕರು ಭಾರತದೊಳಕ್ಕೆ ನುಸುಳುವುದಿಲ್ಲ. ಗಡಿಯಲ್ಲಿ ಶಾಂತಿ ನೆಲೆಸುವ ದೃಷ್ಟಿಯಿಂದ ಬಿಎಸ್ಎಫ್ ಸೈನಿಕರು ಪಾಕಿಸ್ತಾನದ ಮೇಲೆ ನಡೆಸುತ್ತಿರುವ ಪ್ರತಿದಾಳಿ ನಿಲ್ಲಿಸಬೇಕು ಎಂದು ಪಾಕಿಸ್ತಾನ ಭಾರತೀಯ ಸೈನ್ಯಕ್ಕೆ ಅಂಗಲಾಚಿ ಬೇಡಿಕೆಕೊಂಡಿದೆ.
ಕಳೆದ ಮೂರು ದಿನಗಳಿಂದ ಪಾಕಿಸ್ತಾನ ಗಡಿಯಲ್ಲಿ ಅಪ್ರಚೋದಿತ ದಾಳಿ ಮಾಡುವ ಮೂಲಕ ಭಾರತೀಯ ಸೈನಿಕರಿಗೆ ತಲೆನೋವು ತಂದಿತ್ತು. ಆದರೆ ವೀರ ಬಿಎಸ್ಎಫ್ ಯೋಧರು ಪಾಕಿಸ್ತಾನ ಒಳನುಗ್ಗಿ, ಪಾಪಿರಾಷ್ಟ್ರದ ಸೇನಾನೆಲೆಗಳನ್ನು ಧ್ವಂಸ ಮಾಡಿದ್ದರು. ಇದರಿಂದ ಪಾಕಿಸ್ತಾನಕ್ಕೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಹಾನಿಯಾಗಿತ್ತು. ಹಾಗಾಗಿ ಪಾಕಿಸ್ತಾನ ಭಾರತದ ಕಾಲು ಹಿಡಿದು ಪ್ರತಿದಾಳಿ ನಿಲ್ಲಿಸುವಂತೆ ಮನವಿ ಮಾಡಿದೆ.
Leave A Reply