ಮಹಿಳೆಯರ ಸಬಲೀಕರಣಕ್ಕಾಗಿ ತ್ರಿಪುರ ಸರ್ಕಾರ ಮಹತ್ತರ ನಿರ್ಧಾರ ತೆಗೆದುಕೊಂಡಿದೆ ನೋಡಿ!
Posted On May 21, 2018
0
ಅಗರ್ತಲಾ: ಕಮ್ಯುನಿಸ್ಟರ ಆಡಳಿತದಿಂದ ಬಗ್ಗಡವಾಗಿದ್ದ ತ್ರಿಪುರಾದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಹಲವು ಸುಧಾರಣೆಗಳಾಗುತ್ತಿವೆ. ಇತ್ತೀಚೆಗೆ ತ್ರಿಪುರಾದ ಸರ್ಕಾರಿ ಜಾಗದಲ್ಲಿ ಪಕ್ಷದ ಕಚೇರಿ ನಿರ್ಮಿಸಿದ್ದ ಸಿಪಿಎಂ ಹಾಗೂ ಕಾಂಗ್ರೆಸ್ಸಿಗೆ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ಅವರು ಟಾಂಗ್ ನೀಡಿದ್ದಲ್ಲದೆ, ತೆರವುಗೊಳಿಸುವಂತೆ ಆದೇಶಿಸಿದ್ದು ದೇಶದ ಗಮನ ಸೆಳೆದಿತ್ತು.
ಈಗ ತ್ರಿಪುರಾ ಸರ್ಕಾರ ಮತ್ತೊಂದು ಮಹತ್ತರ ನಿರ್ಧಾರ ತೆಗೆದುಕೊಂಡಿದ್ದು, ಈ ಬಾರಿ ಮಹಿಳೆಯರ ಏಳಿಗೆಯ ದೃಷ್ಟಿಯಿಂದ ಹೆಜ್ಜೆ ಮುಂದಿಡುತ್ತಿದೆ.
ಹೌದು, ತ್ರಿಪುರಾ ಸರ್ಕಾರ ಮಹಿಳಾ ಸಬಲೀಕರಣಕ್ಕಾಗಿ ಮಹತ್ತರ ಹೆಜ್ಜೆ ಇಟ್ಟಿದ್ದು, ನೂತನ ನೇಮಕಾತಿ ನೀತಿಯೊಂದನ್ನು ಘೋಷಿಸಿದೆ. ಈ ನೀತಿಯನ್ವಯ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಮಹಿಳೆಯರು ಮೀಸಲಾತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ತ್ರಿಪುರಾ ಶಿಕ್ಷಣ ಹಾಗೂ ಕಾನೂನು ಸಚಿವ ರತನ್ ಲಾಲ್ ನಾಥ್ ಪ್ರತಿಕ್ರಿಯೆ ನೀಡಿದ್ದು, ಸರ್ಕಾರಿ ಉದ್ಯೋಗದಲ್ಲಿ ಮಹಿಳೆಯರಿಗೂ ಪ್ರಾತಿನಿಧ್ಯ ನೀಡಬೇಕು, ಅವರೂ ಮುಖ್ಯವಾಹಿನಿಗೆ ಬರಬೇಕು ಎಂಬ ದೃಷ್ಟಿಯಿಂದ ನೂತನ ನೇಮಕಾತಿ ನೀತಿಯನ್ನು ಘೋಷಣೆ ಮಾಡಲಾಗಿದೆ. ಇದರಿಂದ ಮಹಿಳೆಯರು ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಮೀಸಲಾತಿ ಸೌಲಭ್ಯ ಪಡೆಯುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.ಅದರಲ್ಲೂ ಎಡಪಕ್ಷಗಳು ರಚಿಸಿರುವ, ಪ್ರಸ್ತುತ ಅಳವಡಿಸಿಕೊಳ್ಳಲಾಗಿರುವ ನೇಮಕಾತಿ ನೀತಿ ಹಲವು ದೋಷಗಳಿಂದ ಕೂಡಿದೆ. ಹಾಗಾಗಿ ಸರ್ಕಾರ ನೂತನ ಹಾಗೂ ಪಾರದರ್ಶಕತೆಯಿಂದ ಕೂಡಿರುವ ನೇಮಕಾತಿ ಪಾಲಿಸಿ ಘೋಷಿಸಿದ್ದು ಕೂಡಲೇ ಜಾರಿಗೊಳಿಸಲಾಗುತ್ತದೆ. ಪಾಲಿಸಿ ಮೂಲಕ ಮಹಿಳೆಯರಿಗೆ ಸೌಲಭ್ಯ ಕಲ್ಪಿಸುವುದು ಸಹ ಸರ್ಕಾರದ ಮಹತ್ತರ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
January 23, 2026









