ಜೀವನವಿಡೀ ಹಿಂದೂ ಆಗಿದ್ದವನು ಸತ್ತ ನಂತರ ಕ್ರಿಷ್ಚಿಯನ್ ಆಗುವನೇ?
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ಒಬ್ಬನ ದೇಹಾಂತವಾದಾಗ RIP ಶಬ್ದ ಬಳಸುವುದು ಸಾಂಕ್ರಾಮಿಕ ರೋಗದಂತೆ ಹರಡಿ ಬಿಟ್ಟಿದೆ. ಕ್ರೈಸ್ತ ಧರ್ಮದ ಪ್ರಕಾರ ” ಜಡ್ಜ್ ಮೆಂಟ್ ಡೇ” ಬಂದಾಗಲೇ ಆತ ನಿಜವಾಗಿ ಮರಣ ಹೊಂದುತ್ತಾನೆ ಅಲ್ಲಿಯ ವರೆಗೆ ತನ್ನ ಶರೀರವನ್ನು ಕಾಯ್ದುಕೊಂಡು ವಿಶ್ರಾಂತಿ ತೆಗೆದುಕೊಂಡಿರು (Rest In Peace) ಎಂದು ಪ್ರಾರ್ಥಿಸಲಾಗುತ್ತದೆ. ಆದ್ದರಿಂದಲೇ ಅವರ ಶರೀರವನ್ನು ಸುಡುವುದಿಲ್ಲ ಬದಲಾಗಿ ಶವಪೆಟ್ಟಿಗೆಯಲ್ಲಿಟ್ಟು ಹೂತಿಡುತ್ತಾರೆ. ಮುಂದೊಂದು ದಿನ ಭೂಕಂಪ, ಪ್ರಳಯ ಇತ್ಯಾದಿ ಸಂಭವಿಸಿದಾಗ ಆ ಶರೀರ ಮತ್ತೆ ಮೇಲೆ ಬಂದು ಜೀವ ಬರಬಹುದು ಎಂಬ ನಂಬಿಕೆ ಅವರಲ್ಲಿದೆ.
ಆದರೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಶರೀರ ನಶ್ವರ ಆತ್ಮ ಮಾತ್ರ ಅಮರ. ಶರೀರದ ಒಳಗಿರುವ ಆತ್ಮ ಒಂದೋ ಬೇರೆ ಶರೀರವನ್ನು ಪ್ರವೇಶಿಸುತ್ತದೆ ಇಲ್ಲವೇ ಜೀವನ ಮರಣ ಎಂಬ ಕಾಲಚಕ್ರ ಕೊನೆಗೊಂಡು ಮೋಕ್ಷ ಪಡೆಯುತ್ತದೆ.ಆದ್ದರಿಂದಲೇ ಹಿಂದೂ ಸಂಪ್ರದಾಯದ ಪ್ರಕಾರ ಶರೀರವನ್ನು ಅಗ್ನಿಯಲ್ಲಿ ಸುಟ್ಟು ಪಂಚಭೂತಗಳಲ್ಲಿ ಲೀನ ಮಾಡಲಾಗುತ್ತದೆ. ಇದರಂತೆ ಆತ್ಮಕ್ಕೆ ವಿಶ್ರಾಂತಿ ಎಂಬುವುದೇ ಇಲ್ಲವಾದ್ದರಿಂದ Rest in peace ಅರ್ಥಹೀನವಾದದ್ದು. ಪ್ರತಿಯೊಬ್ಬ ಹಿಂದು ಮೋಕ್ಷಕ್ಕೋಸ್ಕರ ಪ್ರಾರ್ಥನೆ ಮಾಡುವುದು ಇದಕ್ಕೋಸ್ಕರ. ಇದರ ಬದಲು ಸದ್ಗತಿ, ಓಂ ಶಾಂತಿ, ಶ್ರಧ್ಧಾಂಜಲಿ ಮುಂತಾದ ಪದಗಳನ್ನು ಬಳಸಬಹುದು.
ತಮ್ಮ stautus ಗೋಸ್ಕರವೋ ಅಥವಾ ಅರ್ಥ ಗೊತ್ತಿಲ್ಲದೇ RIP ಶಬ್ದ ಬಳಸುತ್ತಿದ್ದಾರೋ ಗೊತ್ತಿಲ್ಲ. ಇನ್ನಾದರೂ ಈ ಮಾಹಿತಿಯನ್ನು ಸಾಧ್ಯವಾದಷ್ಟು ಪರಿಸರದಲ್ಲಿರುವ ಹಿಂದೂಗಳಿಗೆ ತಲುಪಿಸಿ ಪಾಶ್ಚಾತ್ಯ RIP ಶಬ್ದವನ್ನು ಶೋಕ ಪ್ರಕಟಿಸಲು ಬಳಸದಿರೋಣ. ನೈಜ ವಿದ್ಯಾವಂತರಾಗೋಣ, ಧರ್ಮದ ಸಾರ ತಿಳಿಯಲು ಪ್ರಯತ್ನ ಪಡೋಣ.
2 Comments
This one sided article. In Karnataka itself Lingayaths and other Hindu caste people bury the bodies. There is varied belief system. Look at Jains, Sikhs, Buddhists rituals who are also considered as Indians if not Hindus…
ಲೇಖನದಲ್ಲಿ ಹುರುಳಿಲ್ಲ…