2 ಕೋಟಿ ವೆಚ್ಚದಲ್ಲಿ ಶ್ರೀಕೃಷ್ಣ ದೇವಸ್ಥಾನ ಜೀರ್ಣೋದ್ಧಾರಕ್ಕೆ ಪಾಕ್ ಸರ್ಕಾರ ನಿರ್ಧಾರ
ದೆಹಲಿ: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಕಾರ ಶ್ರೀಕೃಷ್ಣನ ದೇವಸ್ಥಾನದ ಜೀರ್ಣೋದ್ಧಾರಕ್ಕೆ 2 ಕೋಟಿ ರೂ ಅನುದಾನ ಬಿಡುಗಡೆ ಮಾಡಿದೆ. ಇಸ್ಲಾಮಾಬಾದ್ ಮತ್ತು ರಾವಲ್ಪಿಂಡಿ ಅವಳಿ ನಗರದಲ್ಲಿರುವ ಏಕೈಕ ಹಿಂದೂ ದೇವಾಲಯ ಕೃಷ್ಣ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಪಂಜಾಬ್ ಪ್ರಾಂತ್ಯದ ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲಿ ಜೀರ್ಣೋದ್ಧಾರ ಕಾಮಗಾರಿ ಆರಂಭವಾಗಲಿದೆ. ಪಂಜಾಬ್ ಪ್ರಾಂತ್ಯದಲ್ಲಿರುವ ಹಿಂದೂಗಳು ಹಬ್ಬಗಳನ್ನು ಆಚರಿಸಲು, ಪೂಜೆಗಳನ್ನು ಕೈಗೊಳ್ಳು ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ.
ಸ್ಥಳೀಯ ಟ್ರಸ್ಟ್ ಆಸ್ತಿಗಳ ಮಂಡಳಿಯ(ಇಟಿಪಿಬಿ) ಡೆಪ್ಯುಟಿ ಆಡಳಿತಾಧಿಕಾರಿ ಮೊಹಮ್ಮದ್ ಆಸಿಫ್ ಈ ಕುರಿತು ಮಾಹಿತಿ ನೀಡಿದ್ದು, ಪಂಜಾಬ್ ಪ್ರಾಂತ್ಯದ ಶಾಸನ ಸಭೆಯ ಸದಸ್ಯರು ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದ್ದರು. ಆದ್ದರಿಂದ ಸರ್ಕಾರ 2 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜೀಣೋದ್ಧಾರ ಪೂರ್ಣವಾದ ನಂತರ ದೇವಾಲಯವನ್ನು ಸಾರ್ವಜನಿಕರ ಭೇಟಿಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಸ್ಥಳೀಯ ಹಿಂದೂಗಳ ಮನವಿ ಮಾಡಿದ್ದು, ಪ್ರಸ್ತುತ ಚಿಕ್ಕದಾಗಿರುವ ದೇವಸ್ಥಾನದ ಅಭಿವೃದ್ಧಿ ಪಡಿಸಬೇಕು.ದೇವಸ್ಥಾನದ ಅಕ್ಕಪಕ್ಕದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸಿ, ದೇವಸ್ಥಾನವನ್ನು ವಿಸ್ತಾರಗೊಳಿಸಬೇಕು ಎಂದು ಸ್ಥಳೀಯ ಹಿಂದೂ ಮುಖಂಡ ಜಗ್ ಮೋಹನ್ ಅರೋರಾ ಮನವಿ ಮಾಡಿದ್ದಾರೆ.
1897 ರಲ್ಲಿ ರಾವಲ್ಪಿಂಡಿಯಲ್ಲಿ ಈ ದೇವಸ್ಥಾನ ನಿರ್ಮಾಣವಾಗಿದ್ದು, ಸ್ವಾತಂತ್ರ್ಯ ಹೋರಾಟ, ಭಾರತ ಪಾಕ್ ದೇಶ ವಿಭಜನೆ ವೇಳೆಯಲ್ಲಿ ಮುಚ್ಚಲ್ಪಟ್ಟಿತ್ತು. 1949ರಲ್ಲಿ ದೇವಸ್ಥಾನ ಪುನರ್ ಆರಂಭವಾಗಿತ್ತು. 1970 ರಲ್ಲಿ ಪಾಕಿಸ್ತಾದ ಸ್ಥಳೀಯ ಟ್ರಸ್ಟ್ ಆಸ್ತಿಗಳ ಮಂಡಳಿಗೆ ದೇವಸ್ಥಾನ ವಶಕ್ಕೆ ಪಡೆದಿತ್ತು. ದೇವಸ್ಥಾನದಲ್ಲಿ ನಿತ್ಯ ಬೆಳಗ್ಗೆ ಮತ್ತು ರಾತ್ರಿ ಪೂಜಾ ಕಾರ್ಯಗಳು ನಡೆಯುತ್ತಿದ್ದು, ಆರು-ಏಳು ಜನ ಭಾಗವಹಿಸುತ್ತಾರೆ.
Leave A Reply