ದೌರ್ಜನ್ಯ ಮೆರೆದ ಕಾಂಗ್ರೆಸ್ಸಿಗರ ಎದೆಯಲ್ಲಿ ನಡುಕ ಹುಟ್ಟಿಸಿದ ಬಿಜೆಪಿ ಮುಖಂಡ ರಾಮ್ ಮಾಧವ್ ಹೇಳಿಕೆ
ವಾಷಿಂಗ್ಟನ್: 1984ರಲ್ಲಿ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಹತ್ಯೆ ನಂತರ ದೇಶಾದ್ಯಂತ ವಿಶೇಷವಾಗಿ, ದೆಹಲಿ, ಪಂಜಾಬ್ ಸೇರಿ ನಾನಾ ಕಡೆ ಸಿಖ್ ರ ಮೇಲೆ ನಡೆದ ದೌರ್ಜನ್ಯ ಎಸಗಿದವರಿಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಬಿಜೆಪಿ ಮುಖಂಡ ರಾಮ್ ಮಾಧವ್ ಸೂಚ್ಯವಾಗಿ ಹೇಳಿದ್ದಾರೆ.
ವಾಷಿಂಗ್ಟನ್ ನಲ್ಲಿ ಸಿಖ್ ಸಮುದಾಯ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ‘1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಸೂಕ್ತ ನ್ಯಾಯ ಒದಗಿಸಲಾಗುವುದು. ದಂಗೆಯ ಆರೋಪಿಗಳನ್ನು ಶಿಕ್ಷೆ ಕೊಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.
ಸಿಖ್ ರ ಮೇಲೆ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವವವರ ವಿರುದ್ಧ 186 ಪ್ರಕರಗಳ ಕುರಿತು ನ್ಯಾ.ಧಿಂಗ್ರಾ ನೇತೃತ್ವದ ಆಯೋಗ ತನಿಖೆ ನಡೆಸುತ್ತಿದೆ. ಸಿಖ್ ರ ಮೇಲೆ ನಡೆದ ಹಿಂಸಾಚಾರದ ಘಟನೆಗಳ ನೇತೃತ್ವದ ವಹಿಸಿದ ಮುಖಂಡರಿಗೆ ವಾರಂಟ್ ಹೊರಡಿಸಲಾಗಿದೆ. ಹೊಸದಾಗಿ ಕೆಲವು ಎಫ್ ಐಆರ್ ಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ವಾಷಿಂಗ್ಟನ್ ನಲ್ಲಿ ಬಿಜೆಪಿ ಮುಖಂಡ ರಾಮ್ ಮಾಧವ್ ನೀಡಿರುವ ಈ ಹೇಳಿಕೆ ಹಿಂಸಾಚಾರದಲ್ಲಿ ಭಾಗಿಯಾಗಿದ್ದ, ವಿಶೇಷವಾಗಿ ಕಾಂಗ್ರೆಸ್ ಮುಖಂಡರಲ್ಲಿ ನಡುಕ ಹುಟ್ಟಿಸಿದೆ.
Leave A Reply