ಕರಾವಳಿಯಲ್ಲಿ ಸೋತ ಕಾಂಗ್ರೆಸ್ಸಿಗರು ಪಾಕಿಸ್ತಾನಕ್ಕೆ ಜೈ ಎನ್ನುತ್ತಾ ಹಲ್ಲೆಗೆ ಮುಂದಾಗುತ್ತಿದ್ದಾರೆ!!
ಚುನಾವಣೆ ಎಂದರೆ ಸೋಲು ಮತ್ತು ಗೆಲುವು ಇದ್ದದ್ದೇ. ಇತಿಹಾಸ ಎರಡನ್ನು ಕೂಡ ಸಮಾನವಾಗಿ ನೋಡಿದೆ. ದೊಡ್ಡ ದೊಡ್ಡ ರಾಜಕಾರಣಿಗಳು ಕೂಡ ಎರಡನ್ನೂ ಅನುಭವಿಸಿದ್ದಾರೆ. ಎಲ್ಲಾ ಪಕ್ಷಗಳ ಕಾರ್ಯಕರ್ತರು ಕೂಡ ತಮ್ಮ ಪಕ್ಷದ ಬಂಗಾರದ ಯುಗವನ್ನು ಮತ್ತು ಸೋಲಿನ ಕರಾಳ ಲೋಕ ಎರಡನ್ನೂ ಕಂಡಾಗಿದೆ. ಯಾವ ಪಕ್ಷ ಕೂಡ ಶಾಶ್ವತ ಅಲ್ಲ, ಹಾಗೆ ಯಾವ ನಾಯಕ ಕೂಡ ಪರ್ಮನೆಂಟ್ ಅಲ್ಲ. ಇಲ್ಲಿ ಪಕ್ಷಗಳ ಕಾರ್ಯಕರ್ತರು ಹೊಡೆದಾಡಿಕೊಳ್ಳುತ್ತಿದ್ದರೆ ಅತ್ತ ನಾಯಕರುಗಳು ಎಸಿ ಕೋಣೆಯಲ್ಲಿ ಕುಳಿತು ಐಸ್ ಕ್ರೀಂ ಸವಿಯುತ್ತಿರುತ್ತಾರೆ. ಆದ್ದರಿಂದ ಚುನಾವಣೆಗಳಲ್ಲಿ ತಮ್ಮ ಪಕ್ಷದ ನಾಯಕರು ಗೆದ್ದರು, ತಮ್ಮ ಪಕ್ಷ ಗೆದ್ದಿತು ಎಂದು ವಿಜಯೋತ್ಸವ ಆಚರಿಸುವುದು ಓಕೆ. ಆದರೆ ಎದುರಾಳಿ ಪಕ್ಷ ಸೋತಿತು ಎಂದು ವಿಜಯೋತ್ಸವ ಆಚರಿಸುವುದು ಮತ್ತು ಅದೇ ಸಮಯ ಬಳಸಿಕೊಂಡು ತಮ್ಮ ಪಕ್ಷಕ್ಕೆ ಮತ ಹಾಕದವರ ಮನೆ ಮೇಲೆ ಕಲ್ಲು ಬಿಸಾಡುವುದು, ಪಟಾಕಿಗೆ ಬೆಂಕಿ ಹಚ್ಚಿ ಮನೆ ಮೇಲೆ ಎಸೆಯುವುದು ಮತ್ತು ಅದನ್ನು ಪ್ರಶ್ನಿಸಲು ಬಂದವರಿಗೆ ತಲೆ ಒಡೆಯುವುದು ಎಲ್ಲಾ
ಅನಾಗರಿಕ ಸಮಾಜದ ನಡವಳಿಕೆಗಳು.
ಕಾಂಗ್ರೆಸ್ಸಿಗರಿಗೆ ಸೋಲು ಅರಗಿಸಲಾಗುತ್ತಿಲ್ಲ…
ಪ್ರಾರಂಭದಲ್ಲಿ ಮಂಗಳೂರಿನ ಹೊರವಲಯದ ಅಡ್ಯಾರ್ ಪದವಿನಲ್ಲಿ ಗಲಾಟೆ ಮಾಡಲಾಯಿತು. ಬಿಜೆಪಿ ಕಾರ್ಯಕರ್ತರ ವಾಹನಗಳ ಮೇಲೆ ಅನ್ಯ ಧರ್ಮದ ಐವತ್ತು ಜನ ಕೈಯಲ್ಲಿ ಮಾರಕ ಆಯುಧಗಳನ್ನು ಹಿಡಿದು ಮುಗಿಬಿದ್ದರು. ಸಡನ್ನಾಗಿ ನಡೆದ ದಾಳಿಯಿಂದ ಹಲ್ಲೆಗೊಳಗಾದ ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ಸೇರಿದರು. ಈಗ ವಿಟ್ಲ ಪರಿಸರದಲ್ಲಿ ಇಂತಹುದೇ ಘಟನೆ ನಡೆದಿದೆ. ವಿಟ್ಲ ಪರಿಸರದ ಕೆಲಿಂಜ, ಕುಡ್ತಮು ಗೇರುಗಳಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ. ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕೂಡಲೇ ಹೀಗೆ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಲು ಕಾಂಗ್ರೆಸ್ಸಿನ ಒಂದು ಗುಂಪು ತಯಾರಾಗುತ್ತದೆ ಎಂದರೆ ನಾವು ಸಭ್ಯ ಕರಾವಳಿಯಲ್ಲಿ ಇದ್ದೇವಾ ಎನ್ನುವ ಅನುಮಾನವನ್ನು ಅವರು ಮೂಡಿಸುತ್ತಿದ್ದಾರೆ.
ಅಷ್ಟಕ್ಕೂ ಕಾಂಗ್ರೆಸ್ಸಿಗರು ಮತ್ತು ಜೆಡಿಎಸ್ ನವರು ಯಡಿಯೂರಪ್ಪನವರ ರಾಜೀನಾಮೆಯೆ ತಮ್ಮ ಗೆಲುವು ಎಂದು ಅಂದುಕೊಂಡು ಬೇರೆಯವರ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ ಎಂದರೆ ಅವರು ಅದೆಂತಹ ಮಾನಸಿಕ ವಿಪ್ಲಲದಿಂದ ನರಳುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಬೇರೆಯವರ ಸೋಲನ್ನು ತಮ್ಮ ಗೆಲುವು ಎಂದು ಸಂಭ್ರಮಿಸುವುದು ಕೂಡ ಒಂದು ವಿಜಯೋತ್ಸವ ಎಂದು ಅಂದುಕೊಳ್ಳುತ್ತಾರಲ್ಲ, ಅದೇ ಹಾಸ್ಯಾಸ್ಪದ. ಅದರೊಂದಿಗೆ ಒಂದಿಷ್ಟು ಕಲಿತವರು ಎಂದುಕೊಂಡ ಮಂಗಳೂರು ನಗರ ದಕ್ಷಿಣದ ನಿಕಟಪೂರ್ವ ಜನಪ್ರತಿನಿಧಿಗಳು ಕೂಡ ಇಂತಹ ಅರೆಪ್ರಜ್ಞಾವಂತವರೊಂದಿಗೆ ಕೈಜೋಡಿಸುತ್ತಾರಲ್ಲ, ಇದಕ್ಕೆ ಏನು ಹೇಳುವುದು.
ಇನ್ನೆಷ್ಟು ರಕ್ತ ಹರಿಯಲು ಇವರ ಸಿದ್ಧತೆ ಇದೆಯೊ…
ಹೀಗೆ ನೋಡಿದರೆ ಕಾಂಗ್ರೆಸ್ಸಿಗರಿಗೆ ಬರುವ ದಿನಗಳಲ್ಲಿ ಮೂರು ಮೂರು ವಿಜಯೋತ್ಸವ ಆಚರಿಸಲು ಮತ್ತು ಈ ಮೂಲಕ ಬೇರೆಯವರಿಗೆ ತೊಂದರೆ ಕೊಡಲು ಅವಕಾಶ ಸಿಗಲಿದೆ. ಅದು ಹೇಗೆಂದರೆ ನಾಡಿದ್ದು ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ವಿಜಯೋತ್ಸವ ಅದರ ನಂತರ ಯುಟಿ ಖಾದರ್ ಮಂತ್ರಿಯಾಗುವಾಗ ವಿಜಯೋತ್ಸವ, ಒಂದು ವೇಳೆ ಕುಮಾರಸ್ವಾಮಿ ಆಪ್ತ ಹಾಗೂ ಮಾಜಿ ಶಾಸಕ ಮೊಯ್ದೀನ್ ಬಾವ ಅಣ್ಣ ಫಾರೂಕ್ ಉಸ್ತುವಾರಿ ಸಚಿವರಾದರೆ ಆಗ ವಿಜಯೋತ್ಸವ, ಫಾರೂಕ್ ಮಂತ್ರಿಯಾದಾಗ ಡಬ್ಬಲ್ ವಿಜಯೋತ್ಸವ ಒಂದು ತಮ್ಮ ಪಕ್ಷದ ಮಾಜಿ ಶಾಸಕರ ಸಹೋದರ ಎಂದು ಮತ್ತೊಂದು ತಮ್ಮ ಸಹೋದರ ಪಕ್ಷ ಜೆಡಿಎಸ್ ನಿಂದ ಮಂತ್ರಿ ಎಂದು ಡಬ್ಬಲ್ ವಿಜಯೋತ್ಸವ. ಹೀಗೆ ವಿಜಯೋತ್ಸವ ಮಾಡುತ್ತಾ, ಪಾಕಿಸ್ತಾನದ ಪರವಾಗಿ ಜೈಕಾರ ಹಾಕುತ್ತಾ ಕಾಂಗ್ರೆಸ್ಸಿನ ಬಾಲಗೋಂಚಿಗಳು ವಿಜಯೋತ್ಸವ ಮಾಡುತ್ತಿದ್ದರೆ ಅವರೊಂದಿಗೆ ಫ್ರೀ ಇರುವ ಮಾಜಿಗಳು ವಿಜಯೋತ್ಸವ ಆಚರಿಸುತ್ತಿದ್ದಾರೆ.
ವಿಜಯೋತ್ಸವವನ್ನು ಸಿಹಿ ತಿಂಡಿ ಹಂಚುವ ಮೂಲಕ ಸಂಭ್ರಮಿಸಲಿ. ಅನಾಥ ಮಕ್ಕಳ ಆಶ್ರಮಕ್ಕೆ ತೆರಳಿ ಊಟ ಬಡಿಸಲಿ, ಗೋಶಾಲೆಗಳಿಗೆ ತೆರಳಿ ಆರ್ಥಿಕ ಸಹಾಯ ಮಾಡಲಿ, ಸರಕಾರಿ ಶಾಲೆಗಳಿಗೆ ಪೀಠೋಪಕರಣ ಕೊಟ್ಟು ಸಹಾಯ ಮಾಡಲಿ, ಶ್ರಮದಾನ ಮಾಡಿ ಯಾವುದಾದರೂ ಕೆರೆ ಅಭಿವೃದ್ಧಿ ಮಾಡಲಿ. ಇದೆಲ್ಲ ಬಿಟ್ಟು ದೇಶದ್ರೋಹಿ ರಾಷ್ಟ್ರ ಪಾಕಿಸ್ತಾನಕ್ಕೆ ಜೈಕಾರ ಹಾಕುವುದು, ಪಟಾಕಿ ಹೊಡೆದು ಬೇರೆಯವರ ಮನೆ ಮೇಲೆ ಬಿಸಾಡುವುದು, ಬಿಜೆಪಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡಿ ತಲೆ ಹೊಡೆಯುವುದು ಹೀಗೆ ಮಾಡಿದರೆ ಇದನ್ನು ವಿಜಯೋತ್ಸವ ಎನ್ನುತ್ತಾರಾ? ಯಾಕೋ ಕಾಂಗ್ರೆಸ್ಸಿನ ಪುಢಾರಿಗಳಿಗೆ ಸರಿಯಾಗಿ ಗೈಡ್ ಮಾಡಬೇಕಾದವರು ಇಂತವರೊಂದಿಗೆ ಸೇರಿ ತಾವು ಕೂಡ ಲೈಮ್ ಲೈಟ್ ನಲ್ಲಿ ಇರಬೇಕು ಎಂದು ಬಯಸುತ್ತಿರುವುದರಿಂದ ಸೋತ ದು:ಖ ಅರಗಿಸಿಕೊಳ್ಳಲಾಗದವರು ಏನೇನೋ ಮಾಡುತ್ತಿದ್ದಾರೆ!
Leave A Reply