ಮೋದಿ ಸರ್ಕಾರವೇ ಗುರಿ: ಬಿಜೆಪಿ ಸೋಲಿಸಲು ಚರ್ಚ್ ಗಳಿಂದಲೇ ನಡೆಯುತ್ತಿದ್ದೇಯೇ ಕುತಂತ್ರ?
ದೆಹಲಿ: ದೇಶದಲ್ಲಿ ರಾಷ್ಟ್ರೀಯವಾದಿ ಪ್ರಧಾನಿ ನರೇಂದ್ರ ಮೋದಿ ಆಡಳಿತ ಬಂದಾಗಿನಿಂದ ದೇಶದಲ್ಲಿ ವಿರೋಧ ಪಕ್ಷಗಳು ಸೇರಿ ಹಲವು ಧಾರ್ಮಿಕ ಸಂಘಟನೆ ಸೇರಿ ನಾನಾ ಸಂಘಟನೆಗಳು ಮೋದಿ ವಿರುದ್ಧ ಸದಾ ಷಡ್ಯಂತ್ರ ಮಾಡುತ್ತಲೇ ದಿನ ದೂಡುತ್ತಿವೆ. ಒಳ ಸಂಚಿನ ಮೂಲಕ ಮೋದಿ ಅವರ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಲು ಯತ್ನಿಸುತ್ತಿವೆ.
ಅದಕ್ಕೆ ಕ್ರಿಶ್ಚಿಯನ್ ಧಾರ್ಮಿಕ ಕೇಂದ್ರಗಳಾದ ಚರ್ಚ್ ಗಳು ಹೊರತಾಗಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಕೊನೆಗೊಳಿಸಬೇಕು. 2019ಕ್ಕೆ ಹೊಸ ಸರ್ಕಾರ ಅಸ್ಥಿತ್ವಕ್ಕೆ ತರಬೇಕು. ಆದ್ದರಿಂದ ಎಲ್ಲ ಚರ್ಚ್ ಗಳು ಒಂದೀಡಿ ವರ್ಷ ಪ್ರಾರ್ಥನೆ ಸಲ್ಲಿಸಬೇಕು ಎಂದು ದೆಹಲಿಯ ಚರ್ಚ್ನ ಆರ್ಚ್ ಬಿಷಫ್ 2019ಕ್ಕೆ ಸರ್ಕಾರ ಬದಲಿಸಲು ಕ್ಯಾಂಪೇನ್ ಮಾಡುವ ಕುರಿತು ಪತ್ರವನ್ನು ಬರೆದಿದ್ದಾರೆ.
ದೇಶದಲ್ಲಿ ಪ್ರಜಾಪ್ರಭುತ್ವದ ಉಳಿಸಬೇಕು. ಆದ್ದರಿಂದ 2019ಕ್ಕೆ ಸರ್ಕಾರ ಬದಲಿಸಲು ದೇಶದಲ್ಲಿರುವ ಎಲ್ಲ ಕ್ಯಾತೊಲಿಕ್ ಸಮುದಾಯದವರು ಹೋರಾಡಬೇಕು ಎಂದು ಆರ್ಚ್ ಬಿಷಪ್ ಅನಿಲ್ ಕುಟೋ ಪತ್ರದಲ್ಲಿ ಕೋರಿದ್ದಾರೆ.
ಈ ಕುರಿತು ರಾಷ್ಟ್ರೀಯ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಚರ್ಚ್ ನ ಕಾರ್ಯದರ್ಶಿ ‘ಆರ್ಚ್ ಬಿಷಪ್ ದೇಶದ ಕುರಿತು ಮಾತಾನಾಡಲು ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಭಾರತೀಯ ನಿವಾಸಿಯಾಗಿ ದೇಶದ ರಾಜಕಾರಣ, ಸರ್ಕಾರದ ಕುರಿತು ಮಾತನಾಡಿದ್ದಾರೆ. ಬಿಷಪ್ ದೇಶಕ್ಕಾಗಿ ಪ್ರಾರ್ಥಿಸಿ ಎಂದು ಹೇಳಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇತ್ತೀಚೆಗೆ ನಡೆದ ಕರ್ನಾಟಕದ ಚುನಾವಣೆಯಲ್ಲಿ ಕೆಲವು ಮಸೀದಿಗಳು ಕಾಂಗ್ರೆಸ್ ಗೆ ಮತ ನೀಡಬೇಕು ಎಂದು ಮನವಿ ಮಾಡಿದ್ದರು. ಅಲ್ಲದೇ ಗುಜರಾತ್ ಚುನಾವಣೆಯಲ್ಲಿ ಕ್ರಿಶ್ಚಿಯನ್ ಪಾದ್ರಿಯೊಬ್ಬ ಬಿಜೆಪಿ ಮತ ನೀಡಬಾರದು ಎಂದು ನೇರವಾಗಿ ಪತ್ರ ಬರೆದಿದ್ದ. ಈ ಎಲ್ಲ ಅಂಶಗಳನ್ನು ಗಮನಿಸಿದರೇ ದೇಶಕ್ಕೆ ಸುಭದ್ರ, ಬಲಿಷ್ಠ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಳಗಿಸಲು ಎಲ್ಲರೂ ಹುನ್ನಾರ ನಡೆಸಿದ್ದಾರೆ ಎಂಬುದು ಸಾಬೀತಾಗುತ್ತಿದೆ.
Leave A Reply