ಯೋಗಿ ಆದಿತ್ಯನಾಥರಿಂದ ಮತ್ತೊಂದು ದಿಟ್ಟ ನಿರ್ಧಾರ, ಇಂಗ್ಲಿಷ್ ಕಲಿಸುವಂತೆ ಮದರಸಾಗಳಿಗೆ ಸೂಚನೆ!
ಲಖನೌ: ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರು ಮುಖ್ಯಮಂತ್ರಿಯಾದ ಬಳಿಕ ಹಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಅವುಗಳಲ್ಲಿ ನೋಂದಣಿಯಾಗದ ಮದರಸಾಗಳ ನೋಂದಣಿ ರದ್ದುಗೊಳಿಸಿದ್ದು ಪ್ರಮುಖವಾಗಿದೆ, ಅಷ್ಟೇ ಮದರಸಾಗಳು ಬರೀ ಧರ್ಮಬೋಧನೆಗಷ್ಟೇ ಸೀಮಿತವಾಗದೆ ಎನ್ ಸಿಇಆರ್ ಟಿ ಪಠ್ಯ ಬೋಧಿಸಬೇಕು ಎಂಬುದು ಸಹ ಯೋಗಿ ಆದಿತ್ಯನಾಥರು ತೆಗೆದುಕೊಂಡ ಪ್ರಮುಖ ನಿರ್ಧಾರವಾಗಿದೆ.
ಇಂತಹ ದಿಟ್ಟ ಯೋಗಿ ಆದಿತ್ಯನಾಥರು ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದು, ಮದರಸಾಗಳಲ್ಲಿ ಉರ್ದು ಜತೆಗೆ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಅದರಲ್ಲೂ ಅರ್ಬಿ-ಫಾರ್ಸಿ ಉರ್ದು ಮದರಸಾ ಬೋರ್ಡ್ ಕಳೆದ ಮೇ 15ರಂದು ನಡೆಸಿದ ಸಭೆಯಲ್ಲಿ ಎಲ್ಲ ಮದರಸಾಗಳೂ ಇಂಗ್ಲಿಷ್ ಹಾಗೂ ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ನೀಡುವಂತಾಗಬೇಕು ಎಂದು ಸಲಹೆ ನೀಡಲಾಗಿತ್ತು. ಅದರಂತೆ ಉತ್ತರ ಪ್ರದೇಶ ಸಚಿವ ಸಂಪುಟ ಆದೇಶ ಹೊರಡಿಸಿದ್ದು, ಎಲ್ಲ ಮದರಸಾಗಳೂ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಶಿಕ್ಷಣ ನೀಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಎಲ್ಲ ಮದರಸಾಗಳೂ ಕಡ್ಡಾಯವಾಗಿ ಎನ್ ಸಿಇಆರ್ ಟಿ ಅನ್ವಯ ಇಂಗ್ಲಿಷ್ ಮತ್ತು ಹಿಂದಿ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಜತೆಗೆ, ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾದಂತಹ ಮಾನವಿಕ ಹಾಗೂ ಮಕ್ಕಳ ಭವಿಷ್ಯ ರೂಪಿಸುವ ವಿಷಯಗಳನ್ನು ಸಹ ಕಲಿಸಬೇಕು ಎಂದು ಸೂಚಿಸಲಾಗಿದೆ.
ಒಟ್ಟಿನಲ್ಲಿ ಮದರಸಾಗಳು ಎಂದರೆ ಬರೀ ಉರ್ದು ಮಾಧ್ಯಮದಲ್ಲಿ ಶಿಕ್ಷಣ ನೀಡುವ ಹಾಗೂ ಬರೀ ಧರ್ಮಬೋಧನೆಯನ್ನೇ ಮಾಡುವ ಸಂಸ್ಥೆಗಳು ಎನ್ನಲಾಗುತ್ತಿತ್ತು. ಆದರೆ ಯೋಗಿ ಆದಿತ್ಯನಾಥರು ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ಬಳಿಕ ಮದರಸಾಗಳ ಚಹರೆಯನ್ನೇ ಬದಲಿಸುತ್ತಿದ್ದು, ಮಕ್ಕಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುವ ಹಾಗೆ ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್ ಬೋಧನೆಗೆ ಅನುವು ಮಾಡಿಕೊಟ್ಟಿರುವುದು ಶ್ಲಾಘನೀಯವಾಗಿದೆ.
Leave A Reply