ಭಾರತದ ಮೇಲೆ ಎಲ್ ಇಟಿ ಕೆಂಗಣ್ಣು: ನಡೆಯುತ್ತಿದೇ ಭಾರಿ ಸಿದ್ಧತೆ
ದೆಹಲಿ: 26/11ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್, ಭಯೋತ್ಪಾದಕ ಹಫೀಸ್ ಸಯೀದ್ ನೇತೃತ್ವದ ಉಗ್ರ ಸಂಘಟನೆ ಎಲ್ ಇಟಿ ತನ್ನ ದುಷ್ಕೃತ್ಯಗಳ ಸಂಚು ಮುಂದುವರಿಸಿದ್ದು, ಭಾರತದಲ್ಲಿ ಭಾರಿ ಪ್ರಮಾಣದಲ್ಲಿ ದಾಳಿ ನಡೆಸಲು ಭಾರಿ ಸಂಚು ರೂಪಿಸಿರುವುದು ಎನ್ ಐಎ ತನಿಖೆಯಿಂದ ಬಹಿರಂಗವಾಗಿದ್ದು. ಇಡೀ ತರಬೇತಿಯ ವಿವರವನ್ನು ಇಲ್ಲಿ ಎಳೆ ಎಳೆಯಾಗಿ ಬಿಚ್ಚಿಸಲಾಗಿದೆ.
ಲಷ್ಕರ್ ಈ ತಯ್ಯಬಾ ಸಂಘಟನೆಯ ವಿದ್ಯಾರ್ಥಿ ಘಟಕ ಅಲ್ ಮಹಮ್ಮದಿಯಾ ಸ್ಟುಡೆಂಟ್ ನ ಭಯೋತ್ಪಾದಕರು ಭಾರತೀಯ ಇಂಟಲಿಜನ್ಸಿ ಏಜೇನ್ಸಿಗಳು ಟ್ರೆಸ್ ಮಾಡಲು ಆಗದಂತ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಸಿದ್ಧಪಡಿಸಿದೆ. ಎಲ್ ಇಟಿಯ ಉಗ್ರರು ದಾಳಿ ವೇಳೆಯಲ್ಲಿ ಪರಸ್ಪರ ಸಂಪರ್ಕ ಸಾಧಿಸಲು ಈ ಸಂಶೋಧನೆ ಕೈಗೊಂಡಿದ್ದು, ಅಪ್ಪಿ ತಪ್ಪಿ ಯಾವುದೇ ಇಂಟಲಿಜನ್ಸಿ ಏಜೇನ್ಸಿಗಳು ಟ್ರೇಸ್ ಮಾಡಿದರೆ ಕೂಡಲೇ ಕರೆ ಕಟ್ ಆಗುವಂತ ತಂತ್ರಜ್ಞಾವನ್ನು ಅಭಿವೃದ್ಧಿಪಡಿಸಿದ್ದು, ಭಾರತೀಯ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ.
ಏಪ್ರಿಲ್ 7ರಂದು ಕುಪ್ವಾರದ ಜುಗ್ದಿಯಾಲ್ ಪ್ರದೇಶದಲ್ಲಿ ಬಂಧಿತನಾದ ಎಲ್ ಇಟಿ ಉಗ್ರ ಮುಲ್ತಾನ್ ಮೂಲದ ಜೈಬುಲ್ಹಾ ಅಲಿಯಾಸ್ ಹಮ್ಜಾ ಈ ಕುರಿತ ಸ್ಫೋಟಕ ಮಾಹಿತಿಯನ್ನು ಹೊರ ಹಾಕಿದ್ದಾನೆ. ಪಾಕಿಸ್ತಾನದ ತೆರಿಗೆ ಅಧಿಕಾರಿಯೊಬ್ಬರ ಮಗನಾಗಿರುವ ಜೈಬುಲ್ಹಾ ನೀಡಿರುವ ಮಾಹಿತಿ ಪ್ರಕಾರ ಪಾಕಿಸ್ತಾನದಲ್ಲಿ ಭಾರತದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು 450 ಯುವಕರನ್ನು ನೇಮಕ ಮಾಡಿದ್ದು, ಅವರೆಲ್ಲರಿಗೂ ತರಬೇತಿ ನೀಡಲಾಗುತ್ತಿದೆ. ಅದರಲ್ಲಿ ಕೆಲವರಿಗೆ ಆಘಾತಕಾರಿ ಹತ್ಯಾರಗಳ ಬಳಕೆ ಬಗ್ಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಬುರ್ಹಾನ್ ವಾನಿ ಹೆಸರಲ್ಲಿ ಅವರಲ್ಲಿ ದೇಶವಿರೋಧಿ ಕೃತ್ಯಕ್ಕೆ ಪ್ರಚೋದನೆ ನೀಡಲಾಗುತ್ತಿದೆ. 15 ರಿಂದ 25 ವರ್ಷದ ಯುವಕರನ್ನು ನೇಮಕ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾನೆ.
ಲಷ್ಕರ್ ಸಂಘಟನೆಯ ಪೋಷಕ ವಿಭಾಗ ಜಮಾತ್ ಉದ್ ದಾವಾ ಕೂಡ ಪಾಕ್ ಆಕ್ರಮಿತ ಕಾಶ್ಮೀರದ ಮಷ್ಕರ್ ಕೈಬರ್ ಪ್ರದೇಶದ ಅರಣ್ಯದಲ್ಲಿ ಕೆಲವು ತಂಡಗಳಿಗೆ ತರಬೇತಿ ನೀಡುತ್ತಿದೆ. ವಿಶೇಷವಾಗಿ ಈ ತರಬೇತಿ ಕೇಂದ್ರದಲ್ಲಿ ಆತ್ಮಾಹುತಿ ಬಾಂಬರ್ ಗಳನ್ನು ತಯಾರು ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ಜೈಬುಲ್ಹಾ ತಿಳಿಸಿದ್ದಾನೆ.
ಪ್ರಸ್ತುತ ಭಾರತದ ಮೇಲೆ ದುಷ್ಕೃತ್ಯ ನಡೆಸಲು ಏಳು ಕ್ಯಾಂಪ್ ಗಳನ್ನು ಭಯೋತ್ಪಾದಕರು ನಡೆಸುತ್ತಿದ್ದಾರೆ. ತಬುಕ್ ಇನ್ ಮನ್ಸೇರಾ(ದೈಹಿಕ ತರಬೇತಿ), ಮುಜಾಫರಬಾದ್ ನಲ್ಲಿ ಅಕ್ಸಾ ಮಸ್ಕಾರ್(ಹತ್ಯಾರಗಳ ತರಬೇತಿ), ಕರಾಚಿಯಲ್ಲಿ ಫುಡ್ ಸೇಂಟ್ರ (ಆಹಾರ ಪೂರೈಕೆ ತರಬೇತಿ), ಮುಜಾಫರಬಾದನಲ್ಲಿ ದಖನ್(ಗುಡ್ಡಗಾಡಿನಲ್ಲಿ ಹೋರಾಡುವ ತರಬೇತಿ) ಮುರಿದ್ಕೆನಲ್ಲಿ ದೌರಾ ಬೈಟ್ ಉಲ್ ರಿಜ್ವಾನ್ (ಯುದ್ಧ ತಂತ್ರ), ಮುಜಾಫರಬಾದ್ ನಗರದಲ್ಲೇ ಖಲೀದ್ ಬಿನ್ ವಲೀದ್ (ಮುಖ್ಯ ಕಚೇರಿ ಇಲ್ಲಿಂದಲೇ ಆಹಾರ, ಬಟ್ಟೆ, ಆಯುದ್ಧಗಳು, ವಾಹನಗಳು ಪೂರೈಕೆಯಾಗುತ್ತವೆ). ಕೈಬರ್ ಪ್ರದೇಶದಲ್ಲಿ ಆತ್ಮಾಹುತಿ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ.
Leave A Reply