ರಾಜ್ಯದ ಜನರಿಗೆ ಸ್ಪಂದಿಸಿದ ಹರಿಯಾಣ ಬಿಜೆಪಿ ಸರ್ಕಾರ, ಟ್ಯಾಂಕರ್ ಮೂಲಕ ನೀರು ಒದಗಿಸಲು ಸೂಚನೆ!
ಇತ್ತೀಚೆಗೆ ಹರಿಯಾಣದ ಮನೋಹರ ಲಾಲ್ ಖಟ್ಟರ್ ಸರ್ಕಾರ ಹಲವು ಪ್ರಮುಖ ನಿರ್ಧಾರಗಳಿಗೆ ಸುದ್ದಿಯಾಗುತ್ತಿದೆ. ಹಲವು ವಾರಗಳ ಹಿಂದೆ ಮುಸ್ಲಿಮರು ಸಾರ್ವಜನಿಕ ಸ್ಥಳಗಳಲ್ಲಿ ನಮಾಜು ಮಾಡಬಾರದು ಎಂದು ಆದೇಶ ಹೊಡಿಸಿದ್ದು ದೇಶಾದ್ಯಂತ ಸುದ್ದಿಯಾಗಿತ್ತು.
ಈಗ ಈ ಬಿಜಪಿ ಸರ್ಕಾರ ಮತ್ತೊಂದು ಪ್ರಮುಖ ನಿರ್ಧಾರ ಕೈಗೊಂಡಿದ್ದು, ನೀರಿಲ್ಲದೆ ಬಳಲುತ್ತಿರುವ ಪ್ರತಿ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಜನರಿಗೆ ನೀರಿನ ಅಭಾವವಾಗದಂತೆ ನೋಡಿಕೊಳ್ಳಬೇಕು ಎಂದು ಆದೇಶ ಹೊರಡಿಸಿದೆ.
ಇನ್ನೇನು ಮುಂದಿನ ತಿಂಗಳಿನಿಂದಲೇ ಮುಂಗಾರು ಆರಂಭವಾಗುವ ಲಕ್ಷಣಗಳಿದ್ದರೂ, ರಾಜ್ಯದಲ್ಲಿ ಇನ್ನೂ ತಾಪಮಾನ 40 ಡಿಗ್ರಿ ಸೆಲ್ಶಿಯಸ್ ಇರುವುದರಿಂದ ಹಲವೆಡೆ ನೀರಿನ ಅಭಾವ ಉಂಟಾಗಿದೆ. ಆದರೆ ಇದನ್ನು ನಿರ್ಲಕ್ಷಿಸದ ರಾಜ್ಯ ಸರ್ಕಾರದ ಪ್ರತಿ ಊರಿಗೂ ನೀರಿನ ಶುದ್ಧ ನೀರು ಸರಬರಾಜು ಮಾಡಬೇಕು ಎಂದು ಸೂಚಿಸಲಾಗಿದೆ.
ಹಿಸಾರ್ ಪ್ರದೇಶ ಕಳೆದ ಬುಧವಾರ 45.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ಅದಕ್ಕಾಗಿ ಸರ್ಕಾರ ಯಾವ ಗ್ರಾಮಗಳು ಇನ್ನೂ ನೀರಿನ ಸಮಸ್ಯೆ ಎದುರಿಸುತ್ತೇವೆಯೋ, ಆ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಸೂಚಿಸಿದೆ. ಅಷ್ಟೇ ಅಲ್ಲ, ಜೂನ್ ಅಂತ್ಯಕ್ಕೆ ಭಾರಿ ಮಳೆ ಬಂದು ನೆರೆಹಾವಳಿ ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಇದ್ದು, ಅದಕ್ಕಾಗಿ ಸಹ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶ ಹೊರಡಿಸಿದೆ.
ಯಾವುದೇ ಸರ್ಕಾರ ರಾಜ್ಯದ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವುದು, ಮಳೆಗಾಲ ಬರುತ್ತದೆ ಎಂದು ಮುಂಜಾಗ್ರತೆ ಕ್ರಮ ವಹಿಸಿಕೊಳ್ಳುವುದು ಉತ್ತಮ ಸರ್ಕಾರದ ಲಕ್ಷಣ. ಅರ್ಧತಾಸು ಮಳೆಬಂದರೂ ಕೆಲವು ಪ್ರದೇಶ ಜಲಾವೃತವಾಗುವ ಬೆಂಗಳೂರಿನಲ್ಲಿ ಇದುವರೆಗೆ ಐದು ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ಸರ್ಕಾರ ಯಾವ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ.
Leave A Reply