ಬಿಜೆಪಿ ಎಂದರೇ ವಿರೋಧ ಪಕ್ಷಗಳಿಗಷ್ಟೇ ಅಲ್ಲ, ನಕ್ಸಲರಿಗೂ ನಡುಕ.. ಅದಕ್ಕಿಲ್ಲಿದೆ ನೋಡಿ ಸಾಕ್ಷಿ
ರಾಯಪುರ: ದೇಶಾದ್ಯಂತ ಕೆಂಪು ಉಗ್ರರ ಅಟ್ಟಹಾಸವನ್ನು ಮಟ್ಟ ಹಾಕುತ್ತಿರುವ ಬಿಜೆಪಿ ವಿರುದ್ಧ ನಕ್ಸಲರು ತಮ್ಮ ದ್ವೇಷ ಮುಂದುವರಿಸಿದ್ದು, ಬಿಜೆಪಿ ಮುಖಂಡರನ್ನು ಗುರಿಯಾಗಿಟ್ಟುಕೊಂಡು ಬಾಂಬ್ ದಾಳಿ ನಡೆಸುವ ಮೂಲಕ ತಮ್ಮ ಬಿಜೆಪಿ ವಿರೋಧಿ ನಿಲುವನ್ನು ಬಹಿರಂಗಪಡಿಸಿದ್ದಾರೆ.
ಛತ್ತೀಸಗಢದ ಕಂಕೇರ್ ಜಿಲ್ಲೆಯಲ್ಲಿರುವ ಬಿಜೆಪಿ ಸಂಸದ ವಿಕ್ರಂ ಉಸೇಂದಿ ಅವರ ತೋಟದ ಮನೆ ಮೇಲೆ ಸುಧಾರಿತ ಸ್ಫೋಟಕ ಬಳಸಿ ನಕ್ಸಲರು ದಾಳಿ ಮಾಡುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆದಿದ್ದಾರೆ
‘ನಕ್ಸಲರ ಗುಂಪು ಬಿಜೆಪಿ ಸಂಸದರ ತೋಟದ ಮನೆಗೆ ಬಂದು ಅಲ್ಲಿದ್ದ ಕಾವಲುಗಾರನಿಗೆ ಹೆದರಿಸಿ, ಕಳುಹಿಸಿದ್ದಾರೆ. ನಂತರ ಸ್ಫೋಟಕಗಳನ್ನು ಬಳಸಿ ಎರಡು ಕೊಠಡಿಗಳ ಮೇಲೆ ಬಾಂಬ್ ದಾಳಿ ಮಾಡಿ, ಪರಾರಿಯಾಗಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರ ಒಂದು ತಂಡ ಸ್ಥಳಕ್ಕೆ ಧಾವಿಸಿದ್ದು, ನಕ್ಸಲರ ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಭದ್ರತಾ ಪಡೆಗಳ ಗಸ್ತು ತಿರುಗಾಟವನ್ನು ತೀವ್ರಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಗೊಳಗಾಗಿರುವ ಮನೆ ಸಮೀಪದಲ್ಲೇ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬುಧವಾರ ಭೇಟಿ ನೀಡುವವರಿದ್ದರು. ಬಿಜೆಪಿ ಸಂಸದರ ತೋಟದ ಮನೆ ಮೇಲೆ ನಕ್ಸಲರು ಮಂಗಳವಾರ ರಾತ್ರಿ ಬಾಂಬ್ ದಾಳಿ ನಡೆಸಿ, ಎರಡು ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ದಾಳಿಯ ವೇಳೆ ಮನೆಯಲ್ಲಿ ಯಾರು ಇಲ್ಲದಿರುವುದರಿಂದ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಕಂಕೇರದಲ್ಲಿರುವ ತೋಟದ ಮನೆಯಿಂದ 15 ಕಿ.ಮೀ. ದೂರದಲ್ಲಿರುವ ಅಂತಗಾರ್ಹಗೆ ‘ವಿಕಾಸ ಯಾತ್ರೆ’ಯ ಅಂಗವಾಗಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರ ಭೇಟಿ ನಿಗದಿಯಾಗಿತ್ತು. ದಾಳಿ ಮಾಡಿರುವ ನಕ್ಸಲರು ಸ್ಥಳದಲ್ಲಿ ವಿಕಾಸ್ ಯಾತ್ರೆಯನ್ನು ಜನರು ಉಲ್ಲಂಘಿಸಬೇಕು. ಸರ್ಕಾರದ ವಿರುದ್ಧ ಹೋರಾಡಬೇಕು ಎಂಬ ಬಿತ್ತಿ ಪತ್ರವನ್ನು ಬಿಟ್ಟು ಹೋಗಿದ್ದಾರೆ.
Leave A Reply