ಏಳು ತಿಂಗಳಲ್ಲಿ ದೇಶದಲ್ಲಿ 39.36 ಲಕ್ಷ ಹೊಸ ಉದ್ಯೋಗ ಸೃಷ್ಟಿ
ದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಬಂದ ನಂತರ ಉದ್ಯೋಗ ಸೃಷ್ಟಿಯಲ್ಲಿ ವಿಫಲರಾಗಿದ್ದಾರೆ ಎಂದು ದೇಶಾದ್ಯಂತ ಹುಯಿಲು ಎಬ್ಬಿಸುತ್ತಿರುವವರಿಗೆ ಎಂಪ್ಲಾಯ್ ಮೆಂಟ್ ಪ್ರಾವಿಡೆಂಟ್ ಫಂಡ್ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯೊಂದು ತಕ್ಕ ಉತ್ತರವನ್ನು ನೀಡಿದೆ. ದೇಶದಲ್ಲಿ ಕೇವಲ ಏಳು ತಿಂಗಳಲ್ಲಿ 39.36 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ಇಪಿಎಫ್ ಒ ತಿಳಿಸಿದೆ.
ಇಪಿಎಫ್ ಒ ನೀಡಿರುವ ಮಾಹಿತಿ ಪ್ರಕಾರ 2018ರ ಮಾರ್ಚ್ ತಿಂಗಳೊಂದರಲ್ಲೇ 6.13 ಲಕ್ಷ ಉದ್ಯೋಗ ಸೃಷ್ಟಿಯಾಗಿವೆ ಎಂದು ತಿಳಿಸಿದೆ. ಎಲ್ಲ ವರ್ಗದಲ್ಲಿ ವಿಶೇಷ ಪರಿಣಿತರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಯಾಗಿವೆ. ಎಲ್ಲರಿಗೂ ಸೂಕ್ತ ವೇತನ ದೊರೆಯುತ್ತಿದೆ. ಎಲೆಕ್ಟ್ರಿಕಲ್, ಮೆಕಾನಿಕಲ್ ಹಾಗೂ ಜನರಲ್ ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗಿದ್ದು, ಕಟ್ಟಡ, ಕೈಗಾರಿಕೆ ಸ್ಥಾಪನೆ, ಉದ್ಯಮ, ವಾಣಿಜ್ಯ ವಿಭಾಗದಲ್ಲಿ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದೆ.
ದೇಶದ ಅರ್ಧಕ್ಕಿಂತ ಹೆಚ್ಚು ಉದ್ಯೋಗಗಳು ಸಂಘಟಿಕತ ಕ್ಷೇತ್ರದಲ್ಲಿ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನಲ್ಲಿ ಏಳು ತಿಂಗಳಲ್ಲಿ ಸೃಷ್ಟಿಯಾಗಿವೆ. ಕಳೆದ ತಿಂಗಳು ಇಪಿಎಫ್ಒ ಈ ವೇತನದಾರರ ಕುರಿತು ದಾಖಲೆ ಬಿಡುಗಡೆ ಮಾಡಿದೆ.
Leave A Reply